"ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
ನೆನ್ನೆ ಮಗಳನ್ನು ಇಂಟರ್೬ನ್ಯಾಶ್ನ್ಲ್ ಸ್ಕೂಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದೆ ನೋಂದಣಿ ಮಾಡಿಸಬೇಕಿತ್ತು
ವಿಚಾರಣೆ ನಡೆಯಿತು ಸ್ಕೂಲು ತುಂಬ ಚೆನ್ನಾಗಿತ್ತು, ಶುಲ್ಕವೂ ಅಷ್ಟೆ ಬೊಂಬಾಟ್ ಆಗಿಯೇ ಇತ್ತು
ಅವಳ ಓರಲ್ ಇಂಟ್ರ್ವ್ಯೂ ಮಾಡಿದರು ಅವಳೂ ಉತ್ತರಿಸಿದಳು
ಸರಿ ಅಡ್ಮಿಶನ್ ಮಾಡಬೇಕು
ಆಗ
ಅಲ್ಲೇ ಕೂತು ಕೂತು ಬೇಜಾರಾಯ್ತೇನೊ ನನ್ನ ಮಗಳು
"ಅಮ್ಮ ಮನೆಗೆ ಹೋಗೋಣ ಬಾಮ " ಅಂದಳು
ಆ ಪ್ರಿನ್ಸಿಪಾಲ್ ಇದ್ದಕ್ಕಿದ್ದಂತೆ ಯಾವುದೋ ಹೊಸ ಭಾಷೆ ಕೇಳಿದವರಂತೆ
"ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ, ಬೇಬಿ" ಎಂದು ಹೇಳಿದರು
ಅವಳೋ " ನಾನು ಅಮ್ಮನೆ ಅನ್ನೋದು" ಅಂತ ಅಳಲು ಶುರು ಮಾಡಿದಳು (ನಾನು ಅವಳಿಗೆ ಹಾಗೆ ಅಭ್ಯಾಸ ಮಾಡಿಸಿರುವುದು)
ನಾನು ಹೇಳಿದೆ ಕೊನೆಗೆ "ಅವಳು ಹಾಗೆ ಅಭ್ಯಾಸವಾಗಿದ್ದಾಳೆ . ನಿಮ್ಮ ಸ್ಕೂಲಿನಲ್ಲಿ ನಿಮ್ಮೊಂದಿಗೆ ಅವಳು ನಿಮಗೆ ಹೇಗೆ ಬೇಕೊ ಹಾಗೆ ಇರಲಿ ಆದರೆ ಬೇರೆ ಸಮಯದಲ್ಲಿ ಅವಳಿಗೆ ಹೇಗೆ ಬೇಕೊ ಹಾಗೆ ಮಾತಾಡಲಿ .ನಮಗೂ ಅವಳು ಅಪ್ಪ ಅಮ್ಮ ಅಂದರೆ ಇಷ್ಟ"
ಪ್ರಿನ್ಸಿಪಾಲ್ರಿಗೆ ಹಿಡಿಸಲಿಲ್ಲ ಎಂಬುದು ಮಾತಿನಲ್ಲಿ ತಿಳಿಯಿತು . ನಾನು ಕೇರ್ ಮಾಡಲಿಲ್ಲ. ಅಡ್ಮಿಶನ್ ಇನ್ನೊಮ್ಮೆ ಮಾಡಿಸುವುದಾಗಿ ಹೇಳಿ ವಾಪಸ್ ಬಂದಿದ್ದೇವೆ. ಅಡ್ಮಿಶನ್ ಬಗ್ಗೆ ಇನ್ನೂ ಯೋಚಿಸುತ್ತಿದ್ದೇವೆ.