ಢೋಂಗೀತನ (ಪೂಜೆ, ಪುನಸ್ಕಾರ)

ಢೋಂಗೀತನ (ಪೂಜೆ, ಪುನಸ್ಕಾರ)

ಬರಹ

ಎಲ್ಲ ಕಾಣ ಬಯಸುವವರು ದೇವನ,
ಗುಡಿಯಲ್ಲಿ, ಕಲ್ಲಿನ ಮೂರ್ತಿಯಲ್ಲಿ
ಕಾಣದಾಗಿಹರು ತಮ್ಮೊಳಗೆ
ಇತರರೊಳಗೆ, ನಿಸರ್ಗದೊಳಗೆ
ಅದಕಾಗಿ ಮೊರೆ ಹೋಗುವವರು
ಆ ದೈವದ ಏಜೆಂಟನನು

ಎಲ್ಲರಿಗೂ ಬೇಕು
ಪೂಜಾರಿಯ ವೇದೋಕ್ತ ಮಂತ್ರೋಚ್ಛಾರಣೆ
ಮಂಗಳಾರತಿ, ತೀರ್ಥ ಪ್ರಸಾದ
ಏಜೆಂಟನೀಯುವ ಆಶೀರ್ವಾದ
ಎಲ್ಲರೆದುರು ಕಾಣುವಂತಹ ರಾಜಮರ್ಯಾದೆ
ಅದಕಾಗಿ ಸುರಿಯುವರು ಕುರುಡು ಕಾಂಚಾಣ

ಕಾಕತಾಳೀಯವಾಗಿ ಸಂಭವಿಸುವುದು
ಒಳಿತು ಕೆಡುಕುಗಳು
ಏಜೆಂಟರು ಸಮಯಸಾಧಕರು
ಕಟ್ಟುವುರದಕೆ ಬಣ್ಣವನು
ದೈವ ಕೃಪೆ ಇರಲೇಬೇಕು
ಅದಕಾಗಿ ಪೂಜೆಯಾಗಲೇ ಬೇಕು

ಜನರಲಿ ಕಾಣುವೆನು ಮುಗ್ಧತೆ
ನಂಬುವರು ಕಾಣದಾ ದೇವನ
ಏಜೆಂಟು ತೋರಿಸಿದಲ್ಲೆಲ್ಲಾ
ಆತ ಸಮಯ ಸಾಧಕ
ಸಮಯಕ್ಕೆ ತಕ್ಕಂಎ ಬದಲಿಸುವನು ಬಣ್ಣ

ಜನರ ಜೇಬಿಗೆ ತಕ್ಕಂತೆ
ಹೊಂದಿಸುವನು ತಕ್ಕ ಪೂಜೆಗಳ
ಅವನ ಬಳಿ ಇಹುದು ತಕ್ಕ ರೇಟಿನ ಕಾರ್ಡು
ರೇಟಿಗೆ ತಕ್ಕಂತೆ ವೈವಿಧ್ಯ ಪೂಜೆ
ಕಪಟತನ, ಮಂತ್ರ ತಂತ್ರ

ಅರ್ಥಗರ್ಭಿತ ಮಂತ್ರವ
ಕಲಿತಿಹನು, ಅರ್ಥ ತಿಳಿಯದೇ
ಯಾವುದೋ ಪೂಜೆಗೆ ಯಾವುದೋ ಮಂತ್ರವ
ಎಂಜಲಿನೊಡನೆ ಉದುರಿಸುವನು

ಮುಗ್ಧ ಜನ ಸಿಲುಕುವರು ಮಾಯೆಯೊಳಗೆ
ಇವರೊಂದಿಗೆ ಮುಗ್ಧರಲ್ಲದವರ ವ್ಯವಹಾರ
ಕಟ್ಟುವರು ಹೊಸ ಮಠ, ದೇವಸ್ಥಾನ
ನಾಡನು ಕಟ್ಟಲಿಲ್ಲ ಇವರಲಿ ವ್ಯವಧಾನ

ತಾವಾಗುವವರು ಕಾಣದ ದೇವನ ಏಜೆಂಟು
ಇವರ ಮರ್ಮವ ಅರಿತು ಬಹಿರಂಗಿಸುವಗೆ
ಕಾದಿಹುವುದು ಜೀವ ಸಹಿತ ಸಮಾಧಿ
ಅದಕಾಗಿ ಮಾಡುವರು ಪೂಜೆ ಪುನಸ್ಕಾರ ಇತ್ಯಾದಿ

ಆಗಲೇ ಬೇಕಿದೆ ಮುಗ್ಧರಲಿ ಜ್ಞಾನೋದಯ
ಆಗಲೇ ವಿಶ್ವಕೆ ಶುಭೋದಯ