ದಣಿದಿದೆ

ದಣಿದಿದೆ

ಕವನ

ದಣಿದಿದೆ... ದೇಹ‌

ಮಣಿದಿದೆ,

ವಿಷಯಗಳ ಅರಿಯುವಲ್ಲಿ

ದಣಿದಿದೆ,

ಅಲ್ಪಾನುಭವಕ್ಕೆ ಅನ್ಯರೆದುರು

ಮಣಿದಿದೆ,

ಹುಚ್ಚು ಮನಸ್ಸು ತಾಳವಿಲ್ಲದೇ

ಕುಣಿದಿದೆ,

ತಪ್ಪು ಕರ್ಮಗಳಲ್ಲೇ

ತಣಿದಿದೆ,

ಅರಿಷಡ್ವರ್ಗಗಳಲ್ಲೇ ಬದುಕು

ಹೆಣೆದಿದೆ,

ಹೊರಬರುವಷ್ಟರಲ್ಲಿಯೇ

ದಣಿದು ಮಣಿದಿದೆ,

ದಣಿದಿದೆ...ದೇಹ‌

ಮಣಿದಿದೆ.