ದೀಪವೆಂದರೆ ಬೆಳಕು

ದೀಪವೆಂದರೆ ಬೆಳಕು

ಕವನ

ದೀಪವೆಂದರೆ ಬೆಳಕು

ಬೆಳಕು ಎಂದರೆ ದೀಪ

ಜ್ಯೋತಿಯೊಳಗಿನ ಭಾವ ತಿಳಿಯದೇನು 

ಅಂತರಾತ್ಮದ ನೆಣೆಗೆ

ಮೌನದಾಳದ ಎಣ್ಣೆ

ಹಾಕಿ ಉರಿಸುವ ರಶ್ಮಿ ತಿಳಿಯದೇನು 

 

ಬೆಳಕು ಕಾಣದ ಜಗವ

ಊಹಿಸಿರಿ ಜನರೆ

ಬದುಕು ನಡೆಯಲು ಬಹುದೆ ತಿಳಿಯದೇನು

ಗೂಡಾರ್ಥ ತಿಳಿಯದಿಹ

ಜನರ ನಡುವೆಯೆ ನಾವು

ಒಬ್ಬಂಟಿ ಎನ್ನುವುದು ತಿಳಿಯದೇನು

 

ಯಾವ ಶಾಸ್ತ್ರವೆ ಇರಲಿ

ಮನು ಕುಲಕೆ ಒಳಿತಿಹುದು

ತಿಳಿದು ಸಾಗುವ ಕಲೆಯು ತಿಳಿಯದೇನು 

ಅವನೇನು ಇವನೇನು 

ಎನ್ನುತಲಿ ಸಾಗಿದೊಡೆ 

ನಮ್ಮ ನಾಶವು ನಮಗೆ ತಿಳಿಯದೇನು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್