ದೀಪಾವಳಿ ( ಕವನ )
ಬಂದಿದೆ ಬೆಳಕಿನ ದೀಪಾವಳಿ
ಬೆಳಗಲು ಲೋಕ ಕಾಲವನು ಮೀರಿ
ಆಧುನಿಕ ನರಕಾಸುರರ ಸಂಹರಿಸಿ
ಜಗದ ಮೌಢ್ಯದ ಕತ್ತಲೆಯ ಓಡಿಸಿ
ಹೃದಯದಲಿ ಜ್ಞಾನ ಜ್ಯೋತಿಯನು ಬೆಳಗಿಸಿ
ಸೋಲು ಗೆಲುವಿನ ಬದುಕು ಲೆತ್ತದಾಟ
ಸೋಲಿನ ಭಯದಲೂ ಗೆಲುವಿನ ಹಂಬಲ
ಸಡೆದಿದೆ ಶಕುನಿಯ ಕುತಂತ್ರದಾಟ
ಧರ್ಮ ದುರ್ಗಮ ಕಣಿವೆ ಅಬೇಧ್ಯ ಕೋಟೆ
ಭೇದಿಸುವ ಛಲಬೇಕು ಪ್ರೀತಿಸುವ ಗುಣಬೇಕು
ಬಂಧಗಳ ಗೆಲ್ಲುವ ಸತ್ಯ ಸಂಧತೆ ಬೇಕು
ಸುಜ್ಞಾನದಾ ಹಣತೆ ಬೆಳಗಬೇಕು
ಹೃದಯಾಕಾಶ ಬುಟ್ಟಿ ರಂಗಿನ ಲೋಕ
ಧರೆಗಿಳಿದು ಬಂದಿದೆ ನಕ್ಷತ್ರ ಲೋಕ
ಎಲ್ಡೆಡೆಗೆ ಹೊಮ್ಮಿದೆ ಬೆಳಕಿನ ಸೆಳಕು
ಜಗದಲಿ ತುಂಬಿದೆ ಸಂತಸದ ಹೊನಲು
ಮನೆ ಮನೆ ಊರು ಕೇರಿಗಳಲ್ಲಿ
ಎಲ್ಲರ ಕಂಗಳಲಿ ಹೊಳೆವ ಹಣತೆಯ ಕಾಂತಿ
ಸಂವತ್ಸರಗಳು ಕಳೆದು ಭೂತ ಗರ್ಭವ ಸೇರಿ
ಬಂದಿದೆ ಪ್ರಸ್ತುತ ಧ್ಯೇಯ ಗುರಿಗಳು ಇಲ್ಲ
ಉನ್ನತಾದರ್ಶಗಳಿಲ್ಲ
ಹರಡಿದೆ ದಟ್ಟ ಕತ್ತಲೆಯ ಕಾನನ
ಮುಂದಿದೆ ವಿರಾಟ ಪರ್ವತ ಶ್ರೇಣಿ
ಕ್ರಮಿಸ ಬೇಕಿದೆ ಕಗ್ಗತ್ತಲೆಯ ದಾರಿ
ಹಚ್ಚ ಬೇಕಿದೆ ಜ್ಞಾನ ಜ್ಯೋತಿಯ ಹಣತೆ
ಬೆಳಗ ಬೇಕಿದೆ ಕತ್ತಲೆಯ ನಾಡು
ಯುಗ ಯುಗಗಳಿಂದ ಬಂದಿದೆ
ಅಂಧಕಾರದ ಬದುಕು
ಮುಗಿಯದ ದಾರಿ ತಣಿಯದ ದಾಹ
ಹಚ್ಚುತ್ತ ಬಂದಿದ್ದೇವೆ ಬೆಳಕಿನ ಹಣತೆ
ಅಂಧಕಾರ ನೀಗುವ ಭ್ರಮೆಯಲ್ಲಿ
ಕಳೆದ ದೀವಳಿಗೆಗಳೆಷ್ಟು
ಹಚ್ಚಿದ ಹಣತೆಗಳೆಷ್ಟು ? ಎಷ್ಟು ಬೆಳಕನು
ತಿಂದು ತೇಗಿದರೂ
ಹಿಂಗದ ಹಸಿವು ಘೋರತಮದ್ದು
ಹಣತೆಯದು ಬರಿ ಮರ್ಗದರ್ಶನವಷ್ಟೆ
ಅದರ ಬೆಳಕಿನಲಿ ಬಂದ ದಾರಿಯ ಅವಲೋಕನ
ಬೆಳಕಿನ ದಾರಿಯ ಕಡೆಗೆ ಪಯಣ
ಸಾಗಿದೆ ಕಾರವಾನ ಕತ್ತಲೆಯ ಗುಹೆಯಿಂದ
ಬೆಳಕಿನಾದರ್ಶದ ಕಡೆಗೆ
Comments
ಉ: ದೀಪಾವಳಿ ( ಕವನ )
In reply to ಉ: ದೀಪಾವಳಿ ( ಕವನ ) by ksraghavendranavada
ಉ: ದೀಪಾವಳಿ ( ಕವನ )
ಉ: ದೀಪಾವಳಿ ( ಕವನ )
In reply to ಉ: ದೀಪಾವಳಿ ( ಕವನ ) by swara kamath
ಉ: ದೀಪಾವಳಿ ( ಕವನ )