ದುರುಗಮ್ಮನ ಜಾತ್ರೆ.
ಬರಹ
ನಾನು ನಮ್ಮೂರಿಲ್ಲಿದ್ದಾಗ ಮೂರು ವರುಶಗಳಿಗೊಮ್ಮೆ ನಡೆಯುವ ಬಗಲಗುಡ್ಡದ ದುರುಗಮ್ಮನ ಜಾತ್ರೆಗೆ ತಪ್ಪದೆ ಪ್ರತಿ ವರ್ಶ ಹೊಗುತ್ತಿದ್ದೆ. ಇದು ತುಂಬಾ ಚಿಕ್ಕ ಊರು ೩೦ ರಿಂದ ೫೦ ಮನೆಗಳಿರಬಹುದು ಈ ಊರಿನಲ್ಲಿ ನಡೆಯುವ ಜಾತ್ರೆಗೆ ಸುಮಾರು ೩೦೦೦ ದಿಂದ ೪೫೦೦ ರಶ್ಟು ಜನ ಸೇರಿರುತ್ತಾರೆ. ವಿಶೇಶವೆಂದ್ರೆ ಇಲ್ಲಿ ಜಾತ್ರೆಯ ದಿನ ಸುಮಾರು ೭೦ ಕುರಿಗಳನ್ನು ಶ್ರೀ ದುರ್ಗಾದೇವಿಗೆ ಬಲಿಕೋಡಲಾಗುತ್ತದೆ.
ಜಾತ್ರೆಯ ದಿನ ರಾತ್ರಿ ಅನೇಕ ಕಾರ್ಯಕ್ರಮಗಳಿರುತ್ತವೆ, ಹೆಣ್ಣುಮಕ್ಕಳು ದೇವಿಯ ಮಹಿಮೆಯನ್ನು ಜನಪದಗೀತೆಗಳ ಮೂಲಕ ಬೆಳಗಿನ ವರೆಗೆ ಹಾಡುತ್ತಾರೆ, ಗಂಡಸರು ಬಜನೆಯನ್ನು ಮಾಡುತ್ತಾರೆ.