ನಂಬಿಕೆ-ಪ್ರೀತಿ

ನಂಬಿಕೆ-ಪ್ರೀತಿ

ಬರಹ

ನಂಬಿಕೆ ಜೀವನದ ಆಧಾರ. ನಂಬಿಕೆಯ ಮೇಲೆಯೇ ಜೀವನ ನಿಂತಿರುವುದು. ನಂಬಿಕೆ ವಿಶ್ವಾಸ ಮೂಡಿಸುತ್ತದೆ. ನಂಬಿಕೆಯೇ ಇಲ್ಲವೆಂದಾದರೆ,
ಪ್ರೀತಿಯೆಲ್ಲಿಂದ ಮೂಡೀತು? 'ಅನುಮಾನಂ ಪೆದ್ದರೋಗಂ' ಅದಕ್ಕೇ ಹೆಳುವುದು. ಜೀವನದಲ್ಲಿ ಏನಿಲ್ಲದಿದ್ದರೂ ಈ ಅನುಮಾನವಿರಲೇಕೂಡದು.
ಸದಾ ಅಶಾಂತಿ ತಂದೊಡ್ದುತ್ತಿರುತ್ತದೆ, ಮನಸ್ಸಿನ ಕಳವಳಕ್ಕೆ ಕಾರಣವಾಗುತ್ತದೆ.
ನಂಬಿಕೆ -ಅನುಮಾನಗಳು ಪರಸ್ಪರ ವಿರುದ್ಧವಾದುವು.ಎರಡೂ ಒಂದೆ ಸ್ಥಳದಲ್ಲಿದರಲು ಸಾಧ್ಯವೇ ಇಲ್ಲ.
ಅನುಮಾನ ಕಡಿಮೆ ಮಾಡುವುದಕ್ಕಿಂತ ನಂಬಿಕೆ ಮೇಲೆ ವಿಶ್ವಾಸವಿಡಿ. ಅದನ್ನೇ ಬೆಳೆಸುತ್ತಾ ಹೋಗಿ.ತಾನಾಗಿಯೇ ಅನುಮಾನ ಜಾಗ ಖಾಲಿ ಮಾಡುತ್ತದೆ.
ಪ್ರೀತಿಯ ವಿಷಯ ಬಂದಾಗ ಈ ಅನುಮಾನ ಬಹುವಾಗಿ ಕಾಡಬಹುದು ಕೆಲವರಲ್ಲಿ. ಒಬ್ಬರ ಮೇಲೆ ಒಬ್ಬರಲ್ಲಿ ನಂಬಿಕೆಯೇ ಇರುವುದಿಲ್ಲ. ಪ್ರೀತಿ ಮಾಡುವಾಗಿನ
ಮುಂಚಿನಲ್ಲಿದ್ದ ನಂಬಿಕೆ ನಂತರದಲ್ಲಿ ಬಹುವಾಗಿ ಕಾಡುವುದು ವಿಪರ್ಯಾಸವೇ ಸರಿ; ಇದು ಪರಸ್ಪರ ಪ್ರೀತಿಯ ಉತ್ಕಟತೆಯನ್ನು ತೋರಿಸುತ್ತದೆಯೋ
ಅಥವಾ possessive ಭಾವ ವ್ಯಕ್ತಪಡಿಸುತ್ತದೆಯೋ ಅನುಭವಿಸದವರೇ ಹೇಳಬೇಕು. ಬಹಳಕಾಲ ಕಾಡಿದರೆ ದೂರವಾಗುವುದೊಳಿತು. ಇಲ್ಲದಿದ್ದರೆ-ಮದುವೆಯ
ನಂತರವೂ ಕಾಡಿದರೆ ಅದು ನರಕವೇ ಸರಿ. ಕುಷ್ಥರೋಗವಿದ್ದಂತೆ. ಬಾಳಿನ ಸುಂದರ-ಸವಿ ರಸಕ್ಷಣಗಳನ್ನು ಮನಸ್ಸಿನಿಂದ ಸ್ಪರ್ಶಿಸಲಾಗುವುದಿಲ್ಲ.
ಬದುಕು ತುಂಬಾ ಕ್ಷಣಿಕ. ಇದ್ದುದರಲ್ಲಿಯೇ ಖುಶಿಪಡಲೆತ್ನಿಸಬೇಕು. 'ಆಯಸ್ಸು ತುಂಬುತ್ತದೆ ಸರಾಗವಾಗಿ-ಪ್ರಕೃತಿಯ ದೆಸೆಯಿಂದ, ಆದರೆ ಬದುಕು ತುಂಬುತ್ತದೆಯೇ ಅದರಂತೆ?'.
ಬದುಕಲು ಕಲಿಯಬೇಕು. ನಂಬಿಕೆಯಿರಬೇಕು. ವಿಶ್ವಾಸವಿಡಬೇಕು. ಪ್ರೀತಿಸಬೇಕು. ಆಗಲೇ ನಮ್ಮ ಬದುಕು ತುಂಬುವುದು.ಸಾರ್ಥಕ್ಯ ಕಾಣುವುದು. ಒಲವೇ ಜೀವನ ಸಾಕ್ಷಾತ್ಕಾರ.