ನಡೆ ನುಡಿ

ನಡೆ ನುಡಿ

ಕವನ

ವ್ಯಕ್ತಿಯ 

ನಡೆ ನುಡಿ

ಸರಿಯಿದ್ದರೆ  

ಕೆಲಸ 

ನೂರರಷ್ಟು 

ಚೆನ್ನಾಗಿರುತ್ತದೆ

ಅಲ್ಲಿಯವರೆಗು

ಮತ್ಸರ 

ತೋರಿಸಿದವರ 

ಬಾಯಿಗೆ 

ಹೊಲಿಗೆ ಬಿದ್ದಿರುತ್ತದೆ !

***

ಹನಿಗಳು

ಉತ್ತರಗಳು

ಎಲ್ಲೆ ಮೀರದಿರಲಿ

ಕೈ ಹಿಡಿಯಲಿ !

 

ಚಿತ್ತದಲ್ಲಿರುವಂತ

ಯೋಜನೆಗಳೆಂದಿಗೂ

ಬಿತ್ತಿದ ಬೀಜದಂತೆ

ಮೊಳಕೆ ಒಡೆಯಲಿ !

***

ರಾಜಕಾರಣಿ

ಜಾತಿ ಮತಗಳ ನಡುವೆ

ಮತ ಪೆಟ್ಟಿಗೆಯ ಹಿಡಿದ

ರಾಜಕೀಯ ಕಲಿಯತಲೆ

ವಿಜಯಿಯಾಗುತ ಮೆರೆದ !

***

ಮುಕ್ತಕ 

ತಪ್ಪುಗಳ ಮಾಡದಿರು ಬದುಕಿನೊಳು ಸವಿಯಿರಲಿ

ಬೆಪ್ಪನಾಗದೆ ಸಾಗು ಚೆಲುವ ಚೆನ್ನಿಗನೆ|

ಕಪ್ಪೆಗಳ ರೀತಿಯಲಿ ಶಬ್ದವನು ಮಾಡದೆಯೆ

ಒಪ್ಪತನದೊಳು ಬಾಳು -- ಛಲವಾದಿಯೆ||

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್