ನನಸು ಹೇಗೆ ಬಂದಿತು?

ನನಸು ಹೇಗೆ ಬಂದಿತು?

ಕವನ

ಮನಸು ಹಗುರವಾದರೇನು

ಪ್ರೀತಿ ಇಹುದೆ ಬದುಕೊಳು

ಕನಸು ಇರದ ಬಾಳಿನೊಳು ನನಸು ಹೇಗೆ ಬಂದಿತು

ಹಗುರವಾದ ತನುವು ಇರಲು

ಮುರುಟಿ ಕುಳಿತ ಹೃದಯವು

ಚೆಲುವು ಸೊರಗಿ ಸಾಗುತಿರಲು ನನಸು ಹೇಗೆ ಬಂದಿತು

 

ಚಿತ್ತದೊಳಗೆ ಕ್ರಾಂತಿ ಸಿಡಿಲು

ಸಿಡಿದು ಜೊತೆಗೆ ಜೊತೆಯೆ ನಡೆದು

ಸನ್ನಿ ಹಿಡಿದ ಮಾತು ಇರಲು ನನಸು ಹೇಗೆ ಬಂದಿತು

ಉಪ್ಪುಕಾರ ಸವಿಯ ರುಚಿಯು

ತಿಂದ ಮೇಲೆ ಸೊಕ್ಕು ಇಹುದು

ಅರಚುತಿರಲು ಗುಣವು ಇರದು ನನಸು ಹೇಗೆ ಬಂದಿತು

 

ಸೋರಿ ಹೋದ ಪಯಣವಿಂದು

ಚಿಗುರದಾಯ್ತೆ ಒಲವೆ ಕೇಳು

ಹೇಳಲಾರದಂತ ಸ್ಥಿತಿಯು ನನಸು ಹೇಗೆ ಬಂದಿತು

ಕೈಯ ಹಿಡಿದು ಕೇಳುವುದು

ಸೋತ ಮನಕೆ ಸವಿಯು ಬರದು

ಅದರ ಪಾಡು ಅದಕೆ ಇರಲು ನನಸು ಹೇಗೆ ಬಂದಿತು

 

-ಹಾ ಮ ಸತೀಶ ಬೆಂಗಳೂರು

ಚಿತ್ರ್