ನನ್ನೊಳಗೆ ನೀನಿರಲು......

ನನ್ನೊಳಗೆ ನೀನಿರಲು......

ಬರಹ

ನನ್ನೊಳಗೆ ನೀನಿರಲು......
ಪ್ರಜ್ವಲಿಸದೆ ಇರೆನು ನಾನು....
ಕೋಟಿ ಸೂರ್ಯರ ಬೆಳಕ ತು೦ಬಿಕೊ೦ಡು......
ಶಾ೦ತ ಪ್ರಣತೆಯಾಗಿ..........

ನನ್ನೊಳಗೆ ನೀನಿರಲು...
ಹೊಮ್ಮದೆ ಇರೆನು ನಾನು....
ಕೋಟಿ ಕ್ರಿಷ್ಣರ ಉಸಿರ ತು೦ಬಿಕೊ೦ಡು....
ಮೋಹನ ಮುರಳಿಯ ದನಿಯಾಗಿ......

ನೀ ಹರಿಯುತಿರೆ ನನ್ನೊಳಗೆ....
ಚಿಮ್ಮದೆ ಇರೆನು ನಾನು...
ಕೋಟಿ ಜೀವಕೆ ತ೦ಪ ತು೦ಬಿಕೊ೦ಡು....
ಜೀವ ಜಲವಾಗಿ...

ತಪ್ಪು ಹೆಜ್ಜೆ... ತೊದಲು ನುಡಿ...
ನಗುವ ಮರೆತು ಮನವಾಗಿದೆ ಕಿಡಿ ಕಿಡಿ.....
ನಡೆಯ ಕಲಿಸು... ನುಡಿಯ ಕಲಿಸು.....
ಮಮತೆಇ೦ದ ನಗಿಸು...
ಪ್ರೀತಿಯಿ೦ದ ಮನ್ನಿಸು...
ಕರುಣಾಳು ನೀ...
ನನ್ನೊಳಗೆ ನೆಲೆಸು.....