ನನ್ನ ಪ್ರಿಯತಂ..
ಕವನ
ನನ್ನ ಪ್ರಿಯನ ಕಣ್ಣಿನಲ್ಲಿ ಕೋಪ ನೋಡಿದಾಗ
ಪ್ರೀತಿಯು ಬಚ್ಚಿಟ್ಟುಕೊಂಡು ಕುಳಿತಿದೆ .
ನನ್ನ ಪ್ರಿಯನ ಮನಸ್ಸಲ್ಲಿ ನೋವು ಉಂಟಾದಾಗ
ಪ್ರೀತಿಯೇ ನೆನಪಿನ ಕಾಣಿಕೆಯಾಗಿದೆ
ನನ್ನ ಪ್ರಿಯನ ಮನ ಮುಗ್ಧವಾದಾಗ
ಸಂಗಾತಿಯ ಜೊತೆ ಚೆಲ್ಲಾಟವಾಗಿದೆ
ನನ್ನ ಪ್ರಿಯನ ಹೃದಯ ಮಿಡಿಯುವಾಗ
ಸಂಗಾತಿಯ ಹೆಸರಹೇಳಿ ಮಿಡಿದಿದೆ
ನನ್ನ ಪ್ರಿಯನ ಪ್ರತಿ ಉಸಿರಿನಲ್ಲಿ
ಸಂಗಾತಿಯ ಪ್ರೀತಿಯೇ ಉಸಿರಾಡಿದೆ ..