ನನ್ನ ಸ್ನೇಹಿತರು
ಸ್ನೇಹಿತರು ಇವರು ನನ್ನ ಸ್ನೇಹಿತರು
ಸೋತಾಗ ಸಂತೈಸಿ ಗೆದ್ದಾಗ ಸಂತೋಷ ಪಡುವವರು
ಕಷ್ಟದ ಸಮಯದಲ್ಲಿ ಕೈಯಿಡಿದು ನಡೆಸಿದವರು
ದುಃಖದ ಸಮಯದಲ್ಲಿ ನಕ್ಕುನಗುಸುವವರು
ಸೋಲುವ ಸಮಯದಲ್ಲಿ ಸ್ಪೂರ್ತಿ ನೀಡುವವರು
ಗೆಲುವಿನ ಸಮಯದಲ್ಲಿ ಸಂಭ್ರಮ ಪಡುವವರು
!!ಸ್ನೇಹಿತರು ಇವರು ನನ್ನ ಸ್ನೇಹಿತರು!!
ಜೀವನದ ಯಾತ್ರೆಯಲ್ಲಿ ಜೊತೆಯಾಗಿ ನಿಂತವರು
ನನ್ನಯ ಜೊತೆಯಲ್ಲಿ ತಿಂದುಂಡು ತೇಗಿದವರು
ಜೊತೆಯಲ್ಲಿ ಕಲಿತವರು ಜೊತೆಗೆ ಕಲಿಸಿದವರು
ಬಿಡದೇ ಬಿಟ್ಟಿ ಸಲಹೆಗಳನ್ನು ನೀಡುವವರು
!!ಸ್ನೇಹಿತರು ಇವರು ನನ್ನ ಸ್ನೇಹಿತರು!!
ಕೆಲವೊಮ್ಮೆ ಕಾಡುವವರು
ಮತ್ತೊಮ್ಮೆ ಬೇಡುವವರು
ಮನದ ಭಾರವನ್ನು ಇಳಿಸುವವರು
ಭಾವನೆಗಳನ್ನು ಹಂಚಿಕೊಳ್ಳುವವರು
!!ಸ್ನೇಹಿತರು ಇವರು ನನ್ನ ಸ್ನೇಹಿತರು!!
ಒಮ್ಮೆ ದೈರ್ಯ ತುಂಬುವರು
ಇನ್ನೊಮ್ಮೆ ಭಯವನ್ನು ಸೃಷ್ಟಿಸುವರು
ಬೆಳೆಯುವ ಮಾರ್ಗದರ್ಶನ ನೀಡುವರು
ಕೆಡುವ ಚಟುವಟಿಕೆಗಳನ್ನು ತಿಳಿಸಿ ಕೊಡುವರು
!!ಸ್ನೇಹಿತರು ಇವರು ನನ್ನ ಸ್ನೇಹಿತರು!!
ಕೀಟಲೆ ಮಾಡುವರು
ಬೆಂಬಲ ನೀಡುವರು
ಕೆಲವರು ದೇವರು ನೀಡಿದ ವರದಂತೆ ಇರುವರು
ಉಳಿದವರು ಶಾಪವಾಗಿ ಬಿಡುವರು
!!ಸ್ನೇಹಿತರು ಇವರು ನನ್ನ ಸ್ನೇಹಿತರು!!
-ತುಂಬೇನಹಳ್ಳಿ ಕಿರಣ್ ರಾಜು ಎನ್