ನಮ್ಮ ಜವಾಬ್ದಾರಿಗಳೇನು?

ನಮ್ಮ ಜವಾಬ್ದಾರಿಗಳೇನು?

ವಾಸ್ತವ ಸತ್ಯದ ಚಿಂತನೆ. ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೇನು, ಜವಾಬ್ದಾರಿ ಏನು? ಮಳೆರಾಯನ ಅರ್ಭಟಕ್ಕೆ ತತ್ತರಿಸಿರುವ ಜನರ ಆಕ್ರೋಶಕ್ಕೆ ಮೊದಲು ಯಾವಾಗಲೂ ಗುರಿಯಾಗುವುದು-

ಪಾಲಿಕೆ / ಮುನ್ಸಿಪಾಲಿಟಿ

ಕಾರ್ಪೋರೇಟರಗಳು

ಶಾಸಕರು ಮತ್ತು ಸಂಸದರು

ಬಿಲ್ಡರುಗಳು/ ಗುತ್ತಿಗೆದಾರರು

ರಾಜ್ಯ ಸರಕಾರ

ಖಂಡಿತವಾಗಿಯೂ.. ಇವರೆಲ್ಲ ನಮ್ಮ ಸಂಕಷ್ಟಕ್ಕೆ  ಜವಾಬ್ದಾರರು ಹೌದು. ಜನರ ಆಕ್ರೋಶಕ್ಕೆ ಎಗ್ಗಿಲ್ಲದೆ ವೇದಿಕೆ ಒದಗಿಸಿ ಉಪ್ಪುಖಾರ ಹಚ್ಚಿ ದಿನವಿಡೀ ಪ್ರಸಾರ ಮಾಡುವ  24X7 ಟೀವಿ ಚಾನೆಲ್ ಗಳು. ಆದರೆ... ಈ ನೈಸರ್ಗಿಕ ವಿಕೋಪದಲ್ಲಿ ಜನಸಾಮಾನ್ಯರ  ತಪ್ಪು  ಏನೂ ಇಲ್ಲವೆ? 

* ನಾವು  ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ನೀರಿನ ಬಾಟಲಗಳು, ಥರ್ಮೋಕೋಲ, ಇತರೆ ಕಸಕಡ್ಡಿ ವಸ್ತುಗಳನ್ನ ಚರಂಡಿಯಲ್ಲಿ ಎಸೆದಿಲ್ಲವೆ?

* ಮನೆಯ ರಿಪೇರಿ ಮಾಡಿಸುವಾಗ ಉತ್ಪಾದಿಸುವ ಇಟ್ಟಿಗೆ-ಸಿಮೆಂಟು ತುಂಡುಗಳನ್ನು ಪಕ್ಕದ ಖಾಲಿ ಪ್ಲಾಟನಲ್ಲಿ ಹಾಕಿಲ್ಲವೆ? 

* ಮನೆಯ ಕಂಪೌಂಡಿನಲ್ಲಿ ಒಂದು ಹನಿ ನೀರೂ ಇಂಗದಂತೆ ಸಿಮೆಂಟ್ ಸವರಿ ಮುಚ್ಚಿಲ್ಲವೆ? 

* ರಾಜಕಾಲುವೆ ಮೇಲೆ ಬಿಲ್ಡರ್ ಮನೆ ಕಟ್ಟುವಾಗ ಅಥವಾ ಡೆವಲಪರ್ ಪ್ಲಾಟು ಮಾರುವಾಗ ವಿರೋಧಿಸಿದ್ದೆವೆಯೇ?

* ವರ್ಷದಲ್ಲಿ ಎಷ್ಟು ಮರಗಳನ್ನು ನೆಟ್ಟಿದ್ದೇವೆ ಅಥವಾ ಬೆಳೆದ ಮರಗಳ ಮಾರಣಹೋಮ ವಿರೋಧಿಸಿದ್ದೇವೆಯೇ?

* ಮದುವೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್/ಪೇಪರ್ ಟೇಬಲ್ ಹೊದಿಕೆ, ನೀರಿನ ಲೋಟ-ಬಟ್ಟಲು, ತಟ್ಟೆ... ಉಪಯೋಗ ನಿಲ್ಲಿಸಿದ್ದೇವೆಯೆ? ವಿರೋಧಿಸಿದ್ದೇವೆಯೆ?  ನಾವೇ ಸೃಷ್ಟಿಸಿದ ಈ ಟನ್ ಗಳಷ್ಟು ಕಸ ಸಮಾರಂಭದ ನಂತರ ಏನಾಯಿತು ಅಂತ ಚಿಂತೆ ಮಾಡಿ ಗಾಬರಿಯಾಗಿದ್ದೇವೆಯೆ?

* ಮನೆಯ ಹಸಿ-ಒಣ ಕಸ ಅಚ್ಚುಕಟ್ಟಾಗಿ ವಿಂಗಡನೆ ಮಾಡುತ್ತಿದ್ದೆವೆಯೆ? ಇವಕ್ಕೆ ಪ್ರಾಮಾಣಿಕ ಉತ್ತರ ಹುಡುಕಿದರೆ ಇವತ್ತಿನ ಈ ನಗರಗಳಲ್ಲಿಯ ಪ್ರವಾಹದ ಸಮಸ್ಯೆಗೆ ನಮ್ಮ 'ಕೊಡುಗೆ' ಅರ್ಥವಾದೀತು.

ನಮ್ಮ ಆಡಳಿತದಲ್ಲಿ ಬೇಜವಾಬ್ದಾರಿಯ ಭ್ರಷ್ಟ ವ್ಯವಸ್ಥೆಯ ಜೊತೆಗೆ ಈ ಸಮಸ್ಯೆಗೆ ನಾವೂ ಸಹ ಸಮಾನ ಜವಾಬ್ದಾರರು. ನೀವೇನಂತೀರಿ?

-ಮನು ಶಕ್ತಿನಗರ

ಚಿತ್ರ ಕೃಪೆ: ಇಂಟರ್ನೆಟ್ ತಾಣ