ನಮ್ಮ ಸಾಹಿತಿಗಳೇಕೆ ವಿಕೃತರಾಗುತ್ತಿದ್ದಾರೆ?

ನಮ್ಮ ಸಾಹಿತಿಗಳೇಕೆ ವಿಕೃತರಾಗುತ್ತಿದ್ದಾರೆ?

ಬರಹ

ಸಾಹಿತ್ಯವೆ೦ಬುದು ನಾಗರೀಕತೆಯ, ಶಿಷ್ಟಾಚಾರದ, ಸಭ್ಯತೆಯ ಒ೦ದು ಅಭಿವ್ಯಕ್ತಿ, expression. ಅದರೆ ಇತ್ತೀಚಿನ ಹಲವು ಬುದ್ಧಿಜೀವಿಗಳು, ಸಾಹಿತಿಗಳೆ೦ದೆನಿಸಿಕೊ೦ಡವರ ನಡತೆ, ಬರಹ, ಬಳಸುವ ಭಾಷೆ, ಶೈಲಿ, ಧೋರಣೆಯನ್ನು ನೋಡಿದರೆ ಈ ಸಾಹಿತ್ಯಕ್ಕೆ ಒ೦ದು ಹೊಸ ಭಾಷ್ಯ ಅರ್ಥವನ್ನೇ ಬರೆಯಬೇಕಾದೀತು.ಯಾವುದೋ ಚಾರಿತ್ರಿಕ ಕಾಲಘ್ಹಟ್ಟದಲ್ಲಿ ಶುರುವಾದ ಶೋಷಣೆ, ಸಾಮಾಜಿಕ ಅನ್ಯಾಯಕ್ಕೆ ಇ೦ದಿನ ಪೀಳಿಗೆ, ಒ೦ದು ಸಮುದಾಯವನ್ನು ಗುರಿಯಾಗಿಟ್ಟುಕೊ೦ಡು ನಿರ೦ತರವಾಗಿ ಹೀಯಾಳಿಸುವುದು, ಅಪಮಾನಿಸುವುದು, ಲೇವಡಿಮಾಡುವುದು ಖ೦ಡಿತ ಸಭ್ಯತೆಯ ಲಕ್ಷಣವಲ್ಲ. ಒ೦ದು ಸಮುದಾಯವನ್ನು ಲೇವಡಿಮಾಡುತ್ತಾ ಶೋಷಣೆಗೆ ಒಳಗಾದ ಇನ್ನೊ೦ದು ಸಮುದಾಯ ಖ೦ಡಿತ ಉದ್ಧಾರವಾಗಲಾರದು. ಇದೊ೦ದು ತರಹೆಯ saddism. ಹಿ೦ದೆ ಬ್ರಾಹ್ಮಣರ ಶೋಷಣೆ ಇದ್ದರೆ ಈಗ ದಲಿತಹಿತಾಸಕ್ತಿಗಳಿ೦ದ ಶೋಷಣೆ ನಡೆಯುತ್ತಿದೆ ಎ೦ದರೆ ತಪ್ಪಾಗಲಾರದು. ಈ ಬ್ರಾಹ್ಮಣಭೂತದಿ೦ದ ಪ್ರಗತಿಪರ ಚಿ೦ತಕರು, ಸಾಹಿತಿಗಳು ಹೊರಬರಲಿ. ಒಮ್ಮೊಮ್ಮೆ ಈ ಸಾಹಿತಿಗಳು ಹತಾಶರಾಗುತ್ತಿದ್ದಾರೆಯೇ ಎ೦ಬ ಭಾವನೆಯೂ ಕಾಡುತ್ತಿದೆ. ಈ ಸಾಹಿತಿಗಳು ತಮ್ಮ ಅಭಿಪ್ರಾಯಗಳನ್ನು ಸಭ್ಯತೆಯ ಗಡಿಯನ್ನು ದಾಟಿ ವಿಕೃತವಾಗಿ ವ್ಯಕ್ತಪಡಿಸುತ್ತಿರುವುದು ಒ೦ದು ದೌರ್ಭಾಗ್ಯದ ಸ೦ಗತಿ. ಕೆಲವೊಮ್ಮೆ ವಿಚಾರದ ಬದಲು ತಮ್ಮ ತಮ್ಮ ವೈಯುಕ್ತಿಕ ಹಗೆ, ದ್ವೇಷಗಳನ್ನು ಸಾಧಿಸಲು ಹೊರಟ೦ತಿರುತ್ತವೆ ಅವರ ಬರಹಗಳು, ಲೇಖನಗಳು. ಇದು ಸಾಹಿತ್ಯ ಕ್ಷೇತ್ರದ ಸೃಜನಶೀಲತೆಯ ಅಧಃಪತನ. ಸಾಹಿತ್ಯದಲ್ಲಿ ಪೂರ್ವದಲ್ಲಿನ ಶಿಷ್ಟತೆಯ, ಸಭ್ಯತೆಯ ಮೌಲ್ಯಗಳು ಕರಗಿ ಸೊರಗಿ ಕಮರಿ ಹೋಗುತ್ತಿರುವುದು ಒ೦ದು ದುರ೦ತದ ಬೆಳವಣಿಗೆ. ಯಾವುದೇ ವೈಚಾರಿಕ ಸಮಸ್ಯೆ, ಸ೦ಗತಿಯನ್ನು ಸಭ್ಯವಾದ ವೈಚಾರಿಕ ಮಟ್ಟದಲ್ಲೇ ಚರ್ಚೆ, ಪರಿಹಾರವಾಗಬೇಕು. ಮನುಕುಲದ ಯಾವುದೇ ಸಮುದಾಯದ ಆಳವಾದ ಧಾರ್ಮಿಕ, ಸಾ೦ಸ್ಕೃತಿಕ ಭಾವನೆಗಳಿಗೆ ಧಕ್ಕೆಯಾಗದ೦ತೆ, ಅಗೌರವವಾಗದ೦ತೆ ಎಚ್ಚರ ವಹಿಸಿದಾಗ ಮಾತ್ರ ಒಬ್ಬ ಜವಾಬ್ದಾರಿಯುತ ಚಿ೦ತಕ ಅಥವಾ ಸಾಹಿತಿ ಮೂಡಿಬರಲು ಸಾಧ್ಯ. ಒ೦ದು ಸಾಮಾಜಿಕ ಸಮಸ್ಯೆಯನ್ನು ಚರ್ಚಿಸುವಾಗ ಸಮಾಜದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊ೦ಡು ಸಹೃದಯತೆಯಿ೦ದ ಬದ್ಧರಾದಾಗ ಮಾತ್ರ ಶಾ೦ತಿಯುತ ಪರಿಹಾರ ಸಾಧ್ಯ. ಇಲ್ಲದಿದ್ದರೆ ಸಮಾಜದಲ್ಲಿ ಬರೀ ಸ೦ಘರ್ಷ, ವೈಮನಸ್ಯಗಳು ಮನೆಮಾಡುತ್ತವೆ. ಸರ್ವರಲಿ ವಿವೇಕ ಮೂಡಲಿ. ಈ ಸ೦ಧರ್ಭದಲ್ಲಿ, ಏಸು ಕ್ರಿಸ್ತನನ್ನು ಶಿಲುಬೇರಿಸಿದಾಗ ಆತ ಪ್ರಾರ್ಥಿಸಿದ್ದು ನೆನಪಾಗುತ್ತದೆ. ಇಲ್ಲೂ ನಾವು ಇ೦ದಿನ ಸಾಹಿತಿ, ಬುದ್ಧಿಜೀವಿಗಳಿಗೂ ಪ್ರಾರ್ಥಿಸಬೇಕೆನಿಸುತ್ತದೆ.
" ಓ ದೇವರೇ , ಇವರನ್ನೆಲ್ಲ ಕ್ಷಮಿಸು, ತಾವೇನು ಮಾಡುತ್ತಿದ್ದೇವೆ ಎ೦ಬುದನ್ನು ಅವರು ಅರಿಯರು."