ನಾನು ಒಂದು ಕವನದೊಂದಿಗೆ ಸಂಪದದ ಚಿಗುರು ಗೂಡನ್ನು ಸೇರಲು ಬಯಸುತ್ತೇನೆ.

ನಾನು ಒಂದು ಕವನದೊಂದಿಗೆ ಸಂಪದದ ಚಿಗುರು ಗೂಡನ್ನು ಸೇರಲು ಬಯಸುತ್ತೇನೆ.

ಬರಹ

ಇದು ನನ್ನ ಮೊದಲ ಪುಟ..
"ಸಂಪದ"ಕ್ಕೆ ನನ್ನ ಭಾವಗಳ ಮೊದಲ ಇಣುಕು ನೋಟ..
ಸವಿ ನೆನಪುಗಳ ಸುಮಧುರ ಕಾವ್ಯ ಸಂಪುಟ..
ನಾ ಸೇರುತಿಹೆನಿದೋ ಕನ್ನಡದ ಕವಿಗಳ ಕೂಟ..
ಇದೋ ಈ ಕವನದಲ್ಲಿದೆ ಪ್ರೆಮಿಯೊಬ್ಬನ ಭಾವುಕ ನೋಟ.

ಪ್ರೀತಿ ನೀನು ಮಧುರ ..
ಅಲ್ಲ ನೀನು ಅಮರ..ಅಮರ..
ಪ್ರೀತಿ ನೀನು ನನ್ನ ಭಾವಕೆ ಜೀವ, ನಿರಂತರ..
ನೀನೆ ಮೋಹಕ ಮತ್ತಿನ ಭ್ರಮೆಯ ಕನಸು ಸಾಗರ..
ಕನಸಿನಲ್ಲು ಸವಿಯ ಕಂಡು ,
ಸೊಗಸು ಬಲೆಗೆ ಬಿದ್ದಿಹನಿವನು ..
ಅರಿವು ಮರೆತು ಹುಚ್ಛಾಗಿಹನು.. ಈ ಪ್ರೆಮಿಯೋ...

ಪ್ರೀತಿ ಪಥದಿ ಪ್ರೇಮಿ
ಒಂಟಿಯಾಗಿ ಸಾಗಿರೆ ಒಲಿಸಲು....
ಮನದ ಕನಸುಗಳಲಿ ಎಲ್ಲೆ ಇರದೆ ತೇಲಿರೆ ಇವನು
ಪ್ರೀತಿ ಬಣ್ಣದ ಬಂಧನದಲ್ಲಿ ದಾರಿ ಮರೆತನೋ....
ಕಣ್ಣ ತುಂಬ ಅವಳ ಬಿಂಬ
ತುಂಬಿಬರಲು, ರಂಗನು ತಳ್ಳಿ,
ನಿದುರೆ ನೀ ಬರದಿರು ಎಂದು ರೆಪ್ಪೆ ತಡೆದನೋ........

ಪ್ರೀತಿ ಚಂದಮಾಮಾ..
ನಿನ್ನ ನೋಡದೆ ಉಣನೀ ಪ್ರೇಮಿ..
ಮನದ ಒಲವ ಹಸಿವ,
ಬಂಧ ಹೊಸೆಯಬಂದಿಹಳಿವಳು..
ಪ್ರೀತಿ ಬಂಧದಿ ಹೃದಯವ ಗೆದ್ದ
ಮನದ ಚೋರಿಯೋ.....
ಚೋರಿ ಚಿತ್ತದಲ್ಲಿ ಕೊಂಚ ಸ್ಥಳವು
ಇರದೆಂದರಿತರು,
ಹುಚ್ಚು ಪ್ರೇಮವು ಹೆಚ್ಚಿದೆ ಇವಗೆ ಏನೀ ಪ್ರೀತಿಯೋ..

ಮಳೆಯು ನಿಂತ ಮೇಲೆ,
ಮಣ್ಣ ಸೊಗಡು ಏನೋ ಚಂದ..
ನನ್ನ ಬಾಳ ಪುಟದಿ ನೀನು ಬಿಟ್ಟ ನೆನಪೇ ಅಂದ..
ಎಲ್ಲ ಚಂದಕು ನಿನ್ನನೇ ಕಾಣುವನೀ ಚಂದ ಪ್ರೇಮಿಯು...
ಆದರಿವಗೆ ಚಂದ ಬಿಂಬಿಸೋ ನೀರ ಪರದೇಗೆ
ಕಲ್ಲನು ಎಸೆದಳು,
ಸಿಡಿಯಿತವನ ಸುಂದರ ಬಿಂಬ,
ಆದರವು ಅವಳ ನೆನಪಿನ ಚಿತ್ತ ಬಿಂಬವೋ..

ಭುವಿಯ ಕಾವು ಕೂಡ..
ಮೋಡ ರೂಪದಿ ಹನಿಯಾಗುವುದು..
ನಿನ್ನ ಕಣ್ಣ ಹನಿಯು ,
ಮಳೆಯ ಹನಿಯಲೇ ಮರೆಯಾಗುವುದು..

ಮಳೆಯ ಹನಿಯು ಭುವಿಯ ತಣಿಸೆ..
ಹೊಸದು ಹಸಿರಿದೆ..
ಆದರಿವನ ಭಾವಗಲಳಿಗೆ ಮನವು ಓಡಿರೆ
ಅವಳ ಹಿಂದೆ..
ಹೊಸದು ಹೆಸರ ಬರೆಯಲು ಇಲ್ಲಿ ಎಲ್ಲೋ ಆಸರೆ?....

ಇವನ ಭಾವಗಳಿಗೆ ಜೀವ ತುಂಬುವ ಸಖಿ ಇನ್ನೆಲ್ಲಿ?
ಈ ಪ್ರೇಮಿಗವಳ ಸುಖದ ಸುದ್ದಿ ಸದ್ದಾಯ್ತಿಲ್ಲಿ..
ಈ ಸದ್ದಿನ ಬಡಿತಕೆ ಎದೆಯು ಸೊರಗಿಹೋಯಿತೋ..
ಸಾವು ಸೊರಗಿನಲ್ಲೂ ಬಡಿತಕೇನೋ ಹಿಡಿತ ಕೊಂಚ.. ಅವಳ ಕಾಣಲು..