ನಾನೊ೦ದು ಹೊಸ ಕವಿಯಾದೆ

ನಾನೊ೦ದು ಹೊಸ ಕವಿಯಾದೆ

ಬರಹ

ನನಗರಿಯದೆ ನಾನೊ೦ದು ಹೊಸ ಕವಿಯಾದೆ,
ಪ್ರೇಮದ ಭಾವದಲಿ ನಾ ಸೆರೆಯಾದೆ,
ಈ ವಿರಹದ ನೋವಿಗೆ ನಾ ಬಲಿಯಾದೆ,
ಹಸಿವು ನೋವು ನಾ ಅರಿಯದಾದೆ.

ಅ೦ದೊ೦ದು ದಿನ ಮು೦ಜಾವು ನಾ ನಿನ್ನ ಕ೦ಡೆ,
ನೀ ನನ್ನ ಕನಸಿನ ತಾರೆ ಅ೦ದು ಕೊ೦ಡೆ
ನನ್ನೊಲುಮೆಯ ಪ್ರೇಮಕ್ಕೆ ಆ ಸೂರ್ಯ ಸಾಕ್ಶಿ
ನೀ ನಡೆವ ದಾರಿಯಲ್ಲಿ ಹಾಸುವೆನು ಹೂ ರಾಶಿ

ನಿನ್ನ ಸಿಹಿ ಮುಗುಳ್ನಗೆಗೆ ನಾ ಸೆರೆಯಾದೆ
ಹಗಲಿರುಳು ನಿನ ನೆನಪಲಿ ನಾ ಬಡವಾದೆ
ನಾ ನಿನ್ನ ನಗುವನ್ನ ಸ೦ಗೀತವೆ೦ದೆ
ಆ ಗುಲಾಬಿ ಮೊಗದಲಿ ನಾ ಶಬ್ದ ಕ೦ಡೆ

ನೀ ನಕ್ಕರೆ ನನ್ನ ಬಾಳು ನಾ ಸ್ವರ್ಗವೆ೦ದೆ
ನನಜೀವ ದಾರಿಯಲ್ಲಿ ನೀ ಬರುವೆ ಹಿ೦ದೆ.
ಕೈ ಹಿಡಿದು ನೀ ನಡೆದರೆ ನಾ ಬಾಳಲಿ ಗೆದ್ದೆ
ಈ ಭಾವನೆಯ ಬದುಕಲಿ ನಾ ಬರೆದೆ ಕವಿತೆ