ನಿಮ್ಮ ನಿಮ್ಮ ಜವಾಬ್ದಾರಿಯನ್ನು ಅರಿಯಿರಿ - ಪ್ರಧಾನಿ ನರೇಂದ್ರ ಮೋದಿ

ಇದಲ್ವ ನಮ್ಮ ಜವಾಬ್ದಾರಿ? ಎಷ್ಟು ಚೆಂದ ಕೆಂಪು ಕೋಟೆಯಿಂದ ಹೇಳಿದ್ರು ನಮ್ಮ ಪ್ರಧಾನಿ! 24 ಗಂಟೆ ಮನೆ ಮನೆಗೆ ವಿದ್ಯುತ್ ಶಕ್ತಿ ಕೊಡುವುದು ಸರ್ಕಾರದ ಜವಾಬ್ದಾರಿ ಆದರೆ ಒಂದು ಸೆಕೆಂಡ್ ಕೂಡ ವಿದ್ಯುತ್ ಶಕ್ತಿ ಹಾಳಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ. ಪ್ರತಿ ಮನೆಗೆ ನೀರು ಕೃಷಿಗೆ ನೀರು ಇದು ಸರ್ಕಾರದ ಜವಾಬ್ದಾರಿ ಆದರೆ ಒಂದು ಬೊಟ್ಟು ನೀರು ಪೋಲಾಗದಂತೆ ನೋಡಿಕೊಳ್ಳುವುದು ನಾಗರೀಕರ ಜವಾಬ್ದಾರಿ.
ಮಕ್ಕಳಿಗೆ ಖರೀದಿಸುವ ಆಟಿಕೆಗಳು ವಿದೇಶದ್ದು ಬೇಡ ಅದು ಸ್ವದೇಶಿ ಆಟಿಕೆಗಳು ಆಗಿರಲಿ. ಹೀಗೆ ಪ್ರಧಾನಿಗಳ ಭಾಷಣ ತುಂಬಾ ಅರ್ಥಪೂರ್ಣವಾಗಿತ್ತು, ಆದರೆ ನಾವು ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದೇವೆಯೇ? ಖ೦ಡಿತ ಇಲ್ಲ, ನಾವು ಏನು ಮಾಡುತ್ತಿದ್ದೇವೆ? ವಿದೇಶದ ರಸ್ತೆಗಳು ಅಷ್ಟು ಚೆನ್ನಾಗಿವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತೇವೆ, ಯಾವುದೋ ಹಳ್ಳಿಯಲ್ಲಿ ಹಾಳದ ರಸ್ತೆಯ ಚಿತ್ರವನ್ನು ಮತ್ತು ವಿದೇಶದ ಚಿತ್ರದೊಂದಿಗೆ ಜೋಡಿಸಿ ಹಂಚಿಕೊಳ್ಳುತ್ತೇವೆ, ನಮ್ಮ ದೇಶದಲ್ಲಿ ಇವತ್ತು 90% ಡಿಜಿಟಲ್ ಪೇಮೆಂಟ್ ವ್ಯವಸ್ತೆಯಿದೆ, ಪಾನ್ ಬೀಡಾ, ಬೈಟು ಕಾಫಿ ಇದಕ್ಕೂ ಡಿಜಿಟಲ್ ಪೇಮೆಂಟ್ ಆಗುತ್ತೆ, ನನ್ನ ಪರಿಚಯಸ್ತರೊಬ್ಬರು ಅಂದಾಜು 40 ದೇಶ ಸುತ್ತಾಡಿದವರು ಈಗಲೂ ಸುತ್ತಾಡುತ್ತಿರುವವರ ಪ್ರಕಾರ ಅಮೇರಿಕಾದಲ್ಲೂ ಇಷ್ಟೊಂದು ಡಿಜಿಟಲ್ ವ್ಯವಸ್ಥೆ ಇಲ್ಲ, ಆದರೂ ನಾವು ಅಮೇರಿಕಾ ಅಭಿವೃದ್ಧಿ ಎಂದು ಬಡಾಯಿ ಕೊಚ್ಚಿಕೊಳ್ಳುವಲ್ಲಿ ನಿರತ, ಭಾರತದಲ್ಲಿ ಇರುಷ್ಟು ಅನ್ನದಾಸೋಹಗಳು ವಿಶ್ವದ ಉಳಿದ ಎಲ್ಲ ದೇಶಗಳನ್ನು ಸೇರಿಸಿದರೂ ಇಲ್ಲ, ಆದರೂ ನಮ್ಮ ದೇಶ ಬಡತನ, ಅಭಿವೃದ್ಧಿಯಾಗಿಲ್ಲ ಅಂತ ಹಂಚಿಕೊಳ್ಳುತ್ತೇವೆ. ಜಪಾನ್ ನಲ್ಲಿ 8 ಗ೦ಟೆ ಕೆಲಸ ಮಾಡಲೇ ಬೇಕು ಆ ಸಮಯದಲ್ಲಿ ನಾವು ಮೊಬೈಲ್ ಫೋನ್ ನೋಡುವ ಹಾಗೆಯೂ ಇಲ್ಲ ಅಂತ ನಮ್ಮ ಉದ್ಯೋಗಿಗಳು ಕೆಲಸದ ಸಮಯದಲ್ಲಿ ಮೊಬೈಲ್ ನೋಡುತ್ತಾ ಚರ್ಚೆ ಮಾಡುತ್ತೇವೆ, ಚಹ ಕುಡಿಯಲು ಹೋದರೆ, ಚಹಾ ಕುಡಿದು ಮುಗಿಸುವಾಗ ಊಟದ ಸಮಯ ಬಂದಿರುತ್ತದೆ, ಮಕ್ಕಳಿಗೆ ಖಾಲಿ ಕಾಗದ, ಪೆನ್ಸಿಲ್, ಪೆನ್ನು, ಇದನ್ನು ಕಚೇರಿಯಿಂದ ತೆಗೆದುಕೊಂಡು ಹೋಗುತ್ತೇವೆ, ಸಂಪಾದನೆ ಚೆನ್ನಾಗಿದ್ದರೂ ಸರ್ಕಾರದಿಂದ ಏನೂ ಸಿಗುತ್ತಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತೇವೆ, ಭಾರತ ಅಭಿವೃದ್ಧಿಯಾಗಿಲ್ಲ ಅಂತ ಬರೆದುಕೊಳ್ಳುತ್ತೇವೆ ಆದರೆ ಅಭಿವೃದ್ಧಿಯಾಗದಿರಲು ನನ್ನಿಂದ ಆಗುತ್ತಿರುವ ತೊಂದರೆ ಏನಿರಬಹುದು ಎಂದು ಆಲೋಚಿಸುವುದಿಲ್ಲ.
ನಮ್ಮ ಅಂದರೆ ಭಾರತೀಯರ ಸಮಸ್ಯೆ ಬಂದು ಮಾನಸಿಕತೆ ಎಷ್ಟು ಹಾಳಾಗಿದೆ ಎಂದರೆ ನಾವು ನಮ್ಮ ದೇಶವನ್ನು ಕೀಳುಮಟ್ಟದಲ್ಲಿ ನೋಡುವ ಹವ್ಯಾಸವನ್ನು ಬೆಳಿಸಿಕೊಂಡಿದ್ದೇವೆ, ಮನೆಯನ್ನು ಸ್ವಚ್ಚವಾಗಿಡಿ, ರಸ್ತೆಯನ್ನು ಸ್ವಚ್ಚವಾಗಿಡಿ ಎಂದು ನಮಗೆ ಪ್ರಧಾನಿ ಹೇಳಬೇಕು, ವಿದ್ಯುತ್, ನೀರು ಪೋಲ್ ಮಾಡಬೇಡಿ ಎಂದು ಪ್ರಧಾನಿ ಹೇಳಬೇಕು, ಸರ್ಕಾರಿ ಕೆಲಸ ಬೇಕು ಅಂತ ಬೊಬ್ಬಿಡುವ ನಾವು ಸರ್ಕಾರಿ ಕೆಲಸ ಸಿಕ್ಕಿದರೂ BPL ಕಾರ್ಡ್ ಬೇಕು ಅದಕ್ಕೆ ನಕಲಿ ದಾಖಲೆಗಳನ್ನು ಮಾಡಲೂ ಸಿದ್ಧ....ಪ್ರಧಾನಿಗಳ ಭಾಷಣ ನಿಜವಾಗಿಯೂ ಅದ್ಬುತವಾಗಿತ್ತು.
ಭಾರತ ಅಭಿವೃದ್ಧಿಯಾಗಿಲ್ಲ, ಭಾರತದಲ್ಲಿ ಅದಿಲ್ಲ, ಇದಿಲ್ಲ ಎಂದು ಹೇಳುವ ಬದಲು ಮೊದಲು ನಾನು ಏನು ಮಾಡಬೇಕು ಎಂಬುದನ್ನು ಆಲೋಚಿಸುವ ಅಗತ್ಯವಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹೌದಾದರೆ ಹಂಚಿಕೊಳ್ಳಿ.
(ಸಂಗ್ರಹ) ಸಂತೋಷ್ ಕುಮಾರ್, ಸುರತ್ಕಲ್
ಚಿತ್ರ ಕೃಪೆ: ಇಂಟರ್ನೆಟ್ ತಾಣ