ನಿವೇದನೆ...
ಬರಹ
ಬಾ ಒಮ್ಮೆ ನನ್ನ ಪ್ರಿಯತಮೆ, ಒಮ್ಮೆಯಾದರು ಬಾ...
ನಿನ್ನ ಪ್ರೀತಿ ನನಗಿಲ್ಲವಾದರೇನು, ಧ್ವೇಷಿಸಲಾದರು ಬಾ...
ತ೦ಗಾಳಿಯು ಎನ್ನ ಕಣ್ಣ ಚುಚ್ಹಿ ನೋಯಿಸುತಿದೆ...
ಈ ನಯನಕ್ಕೆ ತ೦ಪನೆರೆಯಲು ಬಾ...
ಎಕಾ೦ಗಿಯಾದ ಎನ್ನ ಹೃದಯ ವಿರಹದಿ ಬೇಯುತಿದ್ಡರೆ ನಿನಗೇನು...
ನಿನ್ನ ಸುಖದಿ ಎನ್ನ ನೋವ ಮರೆಸಲಾದರು ಬಾ...
ರೆಕ್ಕೆ ಮುರಿದ ಹಕ್ಕಿ ಇ೦ದು ಹಾರದಿದ್ದರೆ ನಿನಗೇನು...
ಹಕ್ಕಿ ಕೊರಳು ಸತ್ತಿಲ್ಲ, ಸಿಹಿ ಗಾನ ಆಲಿಸಲಾದರು ಬಾ...
ಆರಿದ ಹೃದಯ ದೀಪವ ಹಚ್ಹಿ, ನಿನ್ನ ನ೦ಬಿ ಬರುತಿಹೆನು ನಿನ್ನ ಕಡೆಗೆ...
ಕೈ ಬೀಸಿ ನನ್ನನ್ನು ನಿನ್ನಿ೦ದ ದೂರ ತಳ್ಳಲಾದರು ಬಾ...