ನೀತಿವಂತರು ದೇವರ ವಿವರಕ್ಕಾಗಿ ಕಾಯುವುದು ಮಿಸ್ ಕಾಲನ್ನು ನಿರೀಕ್ಷಿಸಿದಂತೆ:ಗಾದೆಗೊಂದು ಗುದ್ದು ಭಾಗ ೬
ಬರಹ
(೨೭) ಕಾಯುವುದೆಂದರೆ ಇರುವುದರ ಬಗೆಗೊಂದು ಅಸಮಾಧಾನವೇ ಹೌದು. ಈ ತಪ್ಪನ್ನು ತಿದ್ದಿಕೊಂಡ ಕೂಡಲೆ ನಿರೀಕ್ಷೆ ಮುಗಿದುಹೋಗುತ್ತದೆ.
(೨೮) ನೀತಿವಂತರಾಗಬೇಕೆಂದು ತೀರ್ಮಾನಿಸಿದ ಕೂಡಲೆ ನಾವು ನೀತಿಬಾಹಿರರೂ ಹೌದು ಎಂದು ಒಪ್ಪಿಕೊಂಡಂತೆ. ಎಂದೂ ಚಾಲನೆಗೊಳ್ಳದಿರುವ ಗಣಕಯಂತ್ರಕ್ಕೆ ಆಂಟಿ-ವೈರಸ್ ಏಕೆ?
(೨೯) "ತಪ್ಪು ದೂರವಾಣಿ ನಂಬರು ಎಂದಿಗೂ ಮಾತಿನಲ್ಲಿ ನಿರತವಾಗಿರುವುದಿಲ್ಲವೇಕೆ?" ಎಂದು ಯೋಚಿಸುತ್ತಿರುವಾಗಲೇ ನನಗೊಂದು ಮಿಸ್ ಕಾಲ್ ಬಂದಿತು!
(೩೦) "ದೇವರು ವಿವರದಲ್ಲಿದ್ದಾನೆ" ಎಂದಿದ್ದಾನೆ ಒಬ್ಬ ವಾಸ್ತುಶಿಲ್ಪಿ. ನೋಡಿ, ನಾನು ಹೇಳಲಿಲ್ಲವೆ ಆತ ಸಮೀಪದೃಷ್ಟಿಕೋನದವನೆಂದು!