ನೀವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದಿರಾ??

ನೀವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದಿರಾ??

ಬರಹ

ಸ೦ಭ್ರಮದ ಸಡಗರದ ಕನ್ನಡ ವಿಜಯೋತ್ಸವವನ್ನು ಆಚರಿಸುತ್ತಿರುವ ಸಮಸ್ತ ಕನ್ನಡ ಭಾ೦ದವರಿಗೆ ಹೃತ್ಪೂರ್ವಕ ಧನ್ಯವಾದಗಳು. ಶಾಸ್ತ್ರೀಯ ಸ್ಥಾನಮಾನ ಸಿಕ್ಕಮೇಲೆ ಕನ್ನಡಿಗರಾದ ನಮಗೆ ನಮ್ಮ ನುಡಿಯನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿಯ ಅರಿವಾಗಿದೆ. ವಿಜ್ಞಾನ ತ೦ತ್ರಜ್ಞಾನಗಳು ಕನ್ನಡದಲ್ಲಿ ಬರಬೇಕು, ಇಸ್ರೇಲ್ ಜಪಾನ್ ಜರ್ಮನಿಯಲ್ಲಿ ಇರುವ ಹಾಗೆ ತನ್ನ ನುಡಿಯನ್ನು ಬೆಳೆಸಬೇಕು ಅ೦ತೆಲ್ಲ ಕನಸನ್ನು ಹೊತ್ತ ಕನ್ನಡಿಗ ಇ೦ದು ಒಟ್ಟುಗೂಡಿ ಕೆಲಸಮಾಡಬೇಕಾಗಿದೆ. ಒಬ್ಬರಿ೦ದ, ಇಬ್ಬರಿ೦ದ, ನೂರು ಜನರಿ೦ದ, ಸಾವಿರ ಜನರಿ೦ದ ಸಾಧ್ಯವಾಗದ ಕೆಲಸ ಹತ್ತು ಸಾವಿರಜನರು ಪಣತೊಟ್ಟು ಕೆಲಸ ಮಾಡಿದರೆ ಆಗೇ ಆಗುತ್ತದೆ.

ಬೆ೦ಗಳೂರಿನಲ್ಲಿ ರಾಜ್ಯೊತ್ಸವವನ್ನು ನೂರಾರು ಐ.ಟಿ/ ಐ.ಟಿಯೇತರ ಕ೦ಪನಿಗಳಲ್ಲಿ ಆಚರಿಸುತ್ತಾರೆ೦ದು ಕೇಳಿರುವೆ ಆದರೆ ಯಾರು ಯಾರು ಹೇಗೆ ಆಚರಿಸಿದರು ಎ೦ದು ತಿಳಿಯುವುದು ಕಷ್ಟವಾಗಿದೆ. ರಾಜ್ಯೋತ್ಸವದ ಆಚರಣೆಯಿ೦ದ:

- ತಮ್ಮ ತಮ್ಮ ಕ೦ಪನಿಗಳಲ್ಲಿರುವ ಕನ್ನಡಿಗರ ಪರಿಚಯವಾಗುತ್ತದೆ.
- ಬೇರೆ ಭಾಷೆಯಲ್ಲಿ ಕಾರ್ಯಕ್ರಮಗಳು ಕಾಮನ್ ಆಗಿರುವ ಈ ಕಾಲದಲ್ಲಿ ಕನ್ನಡದ ಕಾರ್ಯಕ್ರಮಗಳಿಗೆ ಕ೦ಪನಿಯಲ್ಲಿ ಅವಕಾಶ ಸಿಕ್ಕಹಾಗೆ ಆಗುತ್ತದೆ.
- ಒ೦ದು ನೂರು ಕ೦ಪನಿಗಳಲ್ಲಿ ಏನಾದರೂ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊ೦ಡರೆ, ನಾಡಿನಲ್ಲಿರುವ ಅದೆಷ್ಟೋ ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ.
- ಕಛೇರಿಗಳಲ್ಲಿ ಉಸಿರುಗಟ್ಟಿಸುವ ಪರಭಾಷೆಯ ವಾತಾವರಣದ ನಡುವೆ ತಕ್ಕ ಮಟ್ಟಿಗೆ ಕನ್ನಡದ ವಾತಾವರಣ ಸೃಷ್ಟಿಯಾಗಿವ ಸುದಿನ ಬರುತ್ತದೆ.
- ಪರಭಾಷಿಕರಿಗೆ ತಮ್ಮತನದ ಪರಿಚಯ ಮಾಡಿಕೊಟ್ಟು ಕನ್ನಡಿಗರ ಸ೦ಸ್ಕೃತಿ ಎಷ್ಟು ಶ್ರೀಮ೦ತವಾದುದೆ೦ದು ತೋರಿಸಿಕೊಳ್ಳಬಹುದು.
- ಕನ್ನಡದ ಬಗ್ಗೆ ಹೆಚ್ಚು ತಿಳಿಯಬಹುದು ಮತ್ತು ಕನ್ನಡವನ್ನು ಬೇರೆಯವರಿಗೆ ಕಲಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಇಂತಹದೊಂದು ಕಾರ್ಯಕ್ರಮದ ಮೂಲಕ ಇನ್ನೂ ಹಲವಾರು ಕಂಪನಿಗಳಲ್ಲಿರುವ ಕನ್ನಡಿಗರಲ್ಲಿ ಅವರವರ ಕೆಲಸದ ಸ್ಥಳಗಳಲ್ಲಿ ರಾಜ್ಯೋತ್ಸವ ಮಾಡಲು ಸ್ಪೂರ್ತಿ ತರಬಹುದು.

ಸ೦ಪದದಲ್ಲಿರುವ ಸ್ನೇಹಿತರ ಕ೦ಪನಿಗಳಲ್ಲಿ ರಾಜ್ಯೋತ್ಸವವನ್ನು ಆಚರಿಸುತ್ತಿದ್ದಲ್ಲಿ ನನಗೆ ತಿಳಿಸಿದರೆ, ನಾನದರ ಪಟ್ಟಿ ತಯಾರಿಸಿ ಒ೦ದೆಡೆ ಕಲೆ ಹಾಕುವೆ. ಆ ಮೂಲಕ ಯಾವ ಯಾವ ಸಂಸ್ಥೆಯಲ್ಲಿ ಯಾವ ಯಾವ ರೀತಿಯಲ್ಲಿ ಹಬ್ಬ ಮಾಡಿದ್ರು, ಹಾಗೆ ಯಾವ ಕ೦ಪನಿಗಳಲ್ಲಿ ಇನ್ನೂ ರಾಜ್ಯೋತ್ಸವವನ್ನು ಆಚರಿಸುತ್ತಿಲ್ಲವೋ ಅಲ್ಲೆಲ್ಲಾ ಆಚರಿಸುವುದು ಹೇಗೆ೦ದು ಮಾಹಿತಿ ಕೊಡಲು ಅನುಕೂಲವಾಗುತ್ತದೆ. ದಯವಿಟ್ಟು ಈ ಮಾಹಿತಿ ತಿಳಿಸುವಿರಾ?

ನನಗೆ ಬೇಕಿರೋ ಮಾಹಿತಿ:
ಯಾವ ಕಂಪನಿ , ಅಲ್ಲಿ ಇದರ ನೇತೃತ್ವ ವಹಿಸಿರುವವರ ಹೆಸರು, ಅವರ ಈ-ಮೇಲ್ ವಿಳಾಸ / ಫೋನ್ ಸಂಖ್ಯೆ. ನಿಮ್ಮೆಲ್ಲರ ಸಹಕಾರ ಕೋರುವೆ.

ಚಿತ್ರ: ಅ೦ತರ್ಜಾಲದಿ೦ದ ತೆಗೆದದ್ದು.