ನೀ ಸಾಗಿ ಬಿಡು ಸಾಧನೆ ಹಾದಿಯಲ್ಲಿ...

ನೀ ಸಾಗಿ ಬಿಡು ಸಾಧನೆ ಹಾದಿಯಲ್ಲಿ...

ಕವನ

ಮೆಟ್ಟಿ ನಿಲ್ಲು ಮೆಟ್ಟಿ ನಿಲ್ಲು

ಸೋಲನ್ನು ನೀ ಮೆಟ್ಟಿ ನಿಲ್ಲು

ಗೆದ್ದು ತಾ ಗೆದ್ದು ತಾ

ಭಯವನ್ನು ನೀ ಗೆದ್ದು ತಾ

 

ಎದ್ದು ನಿಲ್ಲು ಎದ್ದು ನಿಲ್ಲು

ಅವಮಾನದ ಎದುರು ಎದ್ದು ನಿಲ್ಲು

ಹೊಡೆ ಹೊಡೆ ಹಿಂಜರಿಕೆ ಹೊಡೆ

ಹೊಂದು ಹೊಂದು ಧೈರ್ಯ ಹೊಂದು

 

ಹುಟ್ಟುತ ಯಾರು ಕಲಿತಿಲ್ಲ

ಕಲಿಯುವುದು ಮುಗಿಯುವುದಿಲ್ಲ

ಕಲಿಯುತಲಿ ಜೀವನ ಸಾಗುವುದೆಲ್ಲ

ಜೀವನದಲ್ಲಿ ಕಲಿಯುವುದು ಬಾಳೈತೆಲ್ಲ

 

ಟಿಕಿ ಸುಮಾರು ಬಂದರೆ ಬರಲಿ 

ಒಳ್ಳೆ ವಿಚಾರ ಶಕ್ತಿ ನಿನ್ನಲ್ಲಿ ಬರಲಿ

ಮಾತಾಡುವವರು ಮಾತಾಡಲಿ

ನೀ ಸಾಗಿ ಬಿಡು ಸಾಧನೆ ಹಾದಿಯಲ್ಲಿ

 

ಕಂಡರೆ ಒರೆ ಹೊಗುವ ಜನ

ಕಷ್ಟ ಹೇಳಿದರೆ ಕೇಳದ ಜನ

ನಷ್ಟ ಆದರೆ ಒತ್ತಿ ಒತ್ತಿ ಕೇಳುವ ಜನ

ನೋವು ಆದರೆ ಸ್ವಾತನ ಹೇಳಿದ ಜನ

 

ಕಷ್ಟ ಪಕ್ಕಕ್ಕೆ ಇಟ್ಟು

ನಷ್ಟ ದೂರ ಮಾಡಿ

ಧೈರ್ಯದಿಂದ ಸಾಧನೆ ಮಾಡಿ ನಿಂತರೆ 

ಕೈ ತಟ್ಟಿ ತಟ್ಟಿ ಹೊಗಳುವರು ಅದೇ ಜನ

 

-ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಶಿಕ್ಷಕರು, ಸಾ, ನರೇಗಲ್ಲ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್