ನುಡಿ ಕನ್ನಡ...
ಕವನ
ಕನ್ನಡಾಂಬೆಯ ಪಾದಗಳಿಗೆ ಪುಷ್ಪಗಳ ಚೆಲ್ಲುವಾಸೆ,
ಕನ್ನಡದಲ್ಲಿ ಅಮ್ಮ ಎಂದು ಕೂಗುವಾಸೆ,
ಕನ್ನಡದಲ್ಲಿ ಬರೆಯುವಾಸೆ,
ಕನ್ನಡದಲ್ಲಿ ಮಾತನಾಡುವಾಸೆ,
ಕನ್ನಡ ನೆಲದಲ್ಲಿ ನೆಲೆಯೂರುವಾಸೆ,
ಕನ್ನಡದ ಹಸಿರು ಸಿರಿಯ ಸಹ್ಯಾದ್ರಿಯ ಕಣ್ತುಂಬಿಕೊಳ್ಳುವಾಸೆ,
ಈ ಕನ್ನಡ ಮಣ್ಣಿನ ಶ್ರೀಗಂಧದ ಘಮವ ಹೀರುವಾಸೆ,
ಕನ್ನಡದ ನೀರನು ಕುಡಿದು ದಾಹ ತೀರಿಸಿಕೊಳ್ಳುವಾಸೆ,
ಈ ಮಣ್ಣಿನಲ್ಲಿ ಬೆಳೆದ ಅನ್ನದ ಅಗಳನ್ನು ಸವಿಯುವಾಸೆ...
ಕನ್ನಡ -ಕನ್ನಡ,
ನಮ್ಮ ಕನ್ನಡ,
ನಡೆ ಕನ್ನಡ-ನುಡಿ ಕನ್ನಡ,
ನೆಲಯ ಕಲ್ಪಿಸಿಹುದಿ ಕನ್ನಡ,
ಅನ್ನ ನೀಡಿ ಸಲಹುತಿಹುದಿ ಕನ್ನಡ,
ಮಾತನಾಡಲು ಕನ್ನಡ,
ಬರೆಯಲು ಕನ್ನಡ,
ಕಿವಿಗಾಲಿಸುತಿಹ ಹಾಡು ಕನ್ನಡ,
ಹಲವು ಬಗೆಯ ಸೊಗಡಿನ ಕನ್ನಡ,
ಜಗದಗಲ ಕಂಪನು ಬೀರಿಹ ಕನ್ನಡ..
ಜನನಿ ಜನ್ಮಭೂಮಿ,
ನಾನು ಕನ್ನಡದ ಪ್ರೇಮಿ,
ಕನ್ನಡವೇ ಸತ್ಯ,
ಕನ್ನಡವೇ ನಿತ್ಯ..
-ಶಾಂತಾರಾಮ ಶಿರಸಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್