ನೆನಪುಗಳ ನಡುವೆ
ಕವನ
ಏತಕೋ ಮನ ಬೇಸರದಿ ತಲ್ಲಣಿಸುತಾ ಸಾಗಿದೆ
ಜೀವದೊಳು ಭಾವವಿಲ್ಲ ಸೊರಗುತಾ ಹೋಗಿದೆ
ನೆನಪಿನೋಲೆ ಹೀಗೆ ಸಿಗಲು ಸನಿಹ ಯಾರು ಇಲ್ಲದೆ
ಓದಿಕೊಳಲು ನನ್ನೊಳಗೆ ಖುಷೀ ಹೊನಲು ಕಾಣದೆ
ಭವ್ಯವಾದ ಹೃದಯದಲ್ಲಿ ಮಸಿಯ ತುಂಡು ಕುಳಿತಿದೆ
ಕತೆಯ ಜೊತೆ ವ್ಯಥೆಯು ಸೇರೆ ಕಾವ ಕೈಯು ಸೋತಿದೆ
ಕಣ್ಣಸುತ್ತ ಕಪ್ಪು ಕಲೆಯ ಕಂಡು ಒಡಲೋ ಮರುಗಿದೆ
ತಾಯ ಕರುಳ ಬಳ್ಳಿ ಒಲವೇ ದೂರ ಹೋಗಿ ಕುಳಿತಿದೆ
ಎಲ್ಲರೊಲವು ನಿನ್ನ ಕಡೆಗೆ ಕನಸ ನನಸು ಮುರುಟಿದೆ
ಎಲ್ಲೇ ಇರಲಿ ಇಲ್ಲದಿರಲಿ ನಮ್ಮೊಳಗಿನಾತ್ಮ ಮುದುಡಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ್
![](https://saaranga-aws.s3.ap-south-1.amazonaws.com/s3fs-public/%E0%B2%A8%E0%B3%86%E0%B2%A8%E0%B2%AA%E0%B3%81%E0%B2%97%E0%B2%B3%E0%B3%81.jpeg)