ಪಾಕಿಸ್ತಾನದಲ್ಲಿ ಹಿಂದೂ ವಿವಾಹಕ್ಕೆ ಮಾನ್ಯತೆಯಿಲ್ಲ
ನಿಮಗೆ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಹಿಂದೂ ಮದುವೆಗಳಿಗೆ ಮಾನ್ಯತೆಯಿಲ್ಲ. ಪಾಕಿಸ್ತಾನ ಹುಟ್ಟಿದ 1947ರಿಂದಲೂ ಹಿಂದೂ ದಂಪತಿಗಳನ್ನು ಗಂಡ-ಹೆಂಡಿರೆಂದು ಕಾನೂನು ಪ್ರಕಾರ ಪರಿಗಣಿಸಲಾಗಿಲ್ಲ. ಇದರಿಂದಾಗಿ ಅನೇಕ ಕೌಟುಂಬಿಕ, ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಅವರುಗಳು, ವಿಶೇಷವಾಗಿ ಸ್ತ್ರೀಯರು, ಸಿಲುಕಿದ್ದಾರೆ. ರಾಷ್ಟ್ರೀಯತೆಯ ಸಮಸ್ಯೆ, ಪಾಸ್ ಪೋರ್ಟ್ ಪಡೆಯಲು ಸಮಸ್ಯೆ, ಆಸ್ತಿ-ಪಾಸ್ತಿಗಳ ಹಕ್ಕು ವರ್ಗಾವಣೆ ಸಮಸ್ಯೆ, ದೇಶದೊಳಗೆಯೇ ಪ್ರಯಾಣ ಮಾಡಲೂ ಸಮಸ್ಯೆ, ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಘೋರ ಸಮಸ್ಯೆ ಎಂದರೆ ಹಿಂದೂ ಹೆಣ್ಣು ಮಕ್ಕಳನ್ನು ಬಲವಂತವಾಗಿ ಅಪಹರಿಸಿ, ಮತಾಂತರಿಸಿ, ಬಲವಂತ ವಿವಾಹಗಳನ್ನೂ ಮಾಡಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಿಂದೂ ಸ್ತ್ರೀಯರ ರಕ್ಷಣೆಗೆ ಅಲ್ಲಿ ಸೂಕ್ತ ಕಾನೂನುಗಳೇ ಇರದಿರುವುದು. ಭಾರತದಲ್ಲಿ ಎಲ್ಲರಿಗೂ ಜಾತಿ-ಮತ ಭೇದವಿಲ್ಲದೆ ಸಮಾನ ಸಿವಿಲ್ ಮತ್ತು ಕ್ರಿಮಿನಲ್ ಕಾಯದೆಗಳಿರಬೇಕೆಂಬ ಒತ್ತಾಯಕ್ಕೆ ವಿರೋಧವಿರುವುದು ಮುಸಲ್ಮಾನರಿಂದಲೇ ಮತ್ತು ಅವರನ್ನು ಬೆಂಬಲಿಸುವ ಬುದ್ಧೂಜೀವಿಗಳು ಮತ್ತು ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳಿಂದಲೇ. ಭಾರತದಲ್ಲಿ ಮುಸ್ಲಿಮರ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಅವರಿಗೇ ಪ್ರತ್ಯೇಕ ಕಾನೂನು-ಕಾಯದೆಗಳನ್ನು ಅವರ ಶರೀಯತ್ ಪ್ರಕಾರವೇ ರಚಿಸಲಾಗಿದೆ. ನೂರಾರು ಜನರ ಬಲಿ ತೆಗೆದುಕೊಂಡ/ತೆಗೆದುಕೊಳ್ಳುವ ಉಗ್ರರಿಗೂ ಇಲ್ಲಿ ರಕ್ಷಣೆಯಿದೆ. ಆದರೆ ಅಮಾಯಕ ಅತ್ಯಂತ ಅಲ್ಪಸಂಖ್ಯಾತರೆನಿಸಿರುವ ಹಿಂದೂಗಳಿಗೆ ಕನಿಷ್ಠ ಮೂಲಭೂತ ಸ್ವಾತಂತ್ರ್ಯವನ್ನೂ ಪಾಕಿಸ್ತಾನದಲ್ಲಿ ನಿರಾಕರಿಸಲಾಗಿದೆ. ಹಿಂದೂ ವಿವಾಹಗಳನ್ನು ಮಾನ್ಯ ಮಾಡಲು ಸೂಕ್ತ ಕಾನೂನು ರಚಿಸಬೇಕೆಂಬ ಒಟ್ಟು ಜನಸಂಖ್ಯೆಯ ಕೇವಲ ಶೇ. 3ರಷ್ಟು ಮಾತ್ರ ಉಳಿದಿರುವ ಹಿಂದೂಗಳ ಕೂಗು ಅಲ್ಲಿನ ಸರ್ಕಾರದ ಕಿವುಡು ಕಿವಿಗಳಿಗೆ ಇದುವರೆವಿಗೂ ಮುಟ್ಟಿಲ್ಲ. ಮಾನವ ಹಕ್ಕುಗಳ ಆಯೋಗದವರು, ಬುದ್ಧಿಜೀವಿಗಳೆನಿಸಿಕೊಂಡವರು, ಮುಂತಾದವರಿಗೆ ಇದು ಯೋಚಿಸಬೇಕಾದ ಸಂಗತಿಯೇ ಆಗಿಲ್ಲ.
ಕಳೆದ ವರ್ಷ ಪಾಕಿಸ್ತಾನದ ಹೈದರಾಬಾದಿನಲ್ಲಿ ಪ್ರೆಸ್ ಕ್ಲಬ್ ಎದುರಿಗೆ ಒಂದು ವಿನೂತನ ವಿವಾಹ ನಡೆಯಿತು. ಒಬ್ಬ ಹಿಂದೂ ಯುವಕ ಮುಖೇಶ್ ಮತ್ತು ಹಿಂದೂ ಯುವತಿ ಪದ್ಮಾ ಅಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಸತಿಪತಿಗಳಾದರು. ಎರಡು ಉದ್ದೇಶಗಳು ಅಲ್ಲಿ ನಡೆದ ಮದುವೆಯಲ್ಲಿದ್ದವು; ಒಂದು, ತಾವು ಸತಿ-ಪತಿಗಳೆಂದು ಜಗತ್ತಿಗೆ ಸಾರುವುದು; ಮತ್ತೊಂದು, ಪಾಕಿಸ್ತಾನದಲ್ಲಿ ತಮ್ಮ ಮದುವೆಯನ್ನು ಪರಿಗಣಿಸಲು ಕಾನೂನು ರಚನೆಗೆ ಒತ್ತಾಯಿಸುವುದು. ಮದುವೆಗೆ ಬಂದಿದ್ದವರು ಸೂಕ್ತ ಕಾಯದೆ ರಚನೆಯಾಗುವವರೆಗೆ ತಮ್ಮ ವಿವಾಹಗಳನ್ನು ಸಿಂಧುವೆಂದು ಪರಿಗಣಿಸಿ ಆದೇಶ ಹೊರಡಿಸುವಂತೆ ಅಧ್ಯಕ್ಷ ಜರ್ದಾರಿಯವರನ್ನು ಒತ್ತಾಯಿಸಿ ಘೋಷಣೆಗಳನ್ನು ಹಾಕಿದರು. ಅಲ್ಲಿ ಹಾಜರಿದ್ದ ಸಪ್ನಾದೇವಿ ಎಂಬ ಮಹಿಳೆ ಹೇಳಿದ್ದೇನೆಂದರೆ: "ನನ್ನ ಮದುವೆ ಆಗಿ 17 ವರ್ಷಗಳಾಗಿವೆ. ನಮ್ಮ ಮದುವೆ ಸಿಂಧುವೆಂದು ಪರಿಗಣಿಸಿಲ್ಲ. ಒಂದು ವೇಳೆ ನನ್ನ ಗಂಡ ಸತ್ತರೆ, ದೇವರೇ ಹಾಗಾಗದಿರಲಿ, ಗಂಡನ ಆಸ್ತಿ ನನ್ನ ಹೆಸರಿಗೆ ಆಗುವುದಿಲ್ಲ." ಹೊಸದಾಗಿ ಮದುವೆಯಾದ ಹಿಂದೂಗಳ ಪೈಕಿಯ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದ ಈ ಸತಿ-ಪತಿ ಖೈರಪುರ ಜಿಲ್ಲೆಯವರಾಗಿದ್ದು, 'ಈ ಮದುವೆಯನ್ನು ಈ ರೀತಿ ಆಚರಿಸಿ ತಾವು ದಾಂಪತ್ಯಜೀವನಕ್ಕೆ ಕಾಲಿರಿಸಿದ್ದು, ಸೂಕ್ತ ಕಾನೂನು ವಂಚಿತರಾಗಿರುವುದನ್ನು ಪ್ರತಿಭಟಿಸುವ ಸಲುವಾಗಿ' ಎಂದು ಹೇಳಿದ್ದರು. 1998ರ ಜನಗಣತಿ ಪ್ರಕಾರ ಪಾಕಿಸ್ತಾನದಲ್ಲಿರುವ 3.4 ಮಿಲಿಯನ್ ಹಿಂದೂಗಳ ಪೈಕಿ ಮೂರನೆಯ ಒಂದು ಭಾಗಕ್ಕೂ ಹೆಚ್ಚು ಜನರು ಹಿಂದುಳಿದ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪಾಕಿಸ್ತಾನದ ಪಾರ್ಲಿಮೆಂಟಿನಲ್ಲಿ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಎಂಟು ಸದಸ್ಯರಿದ್ದರೂ ಅವರ ಮಾತನ್ನು ಕೇಳುವವರೇ ಇಲ್ಲವಾಗಿದೆ. ದೇವರ ರಾಜ್ಯದಲ್ಲಿ ಮನುಷ್ಯರಿಗೆ ಬೆಲೆಯೇ ಇಲ್ಲವೇ? ಮಾನವತೆ ಅನ್ನುವುದು ಎಲ್ಲಾ ಧರ್ಮಗಳ ತಿರುಳು ಅನ್ನುತ್ತಾರೆ. ಹಾಗಿದ್ದರೆ ಅದರ ಹೆಸರಿನಲ್ಲೇ ಮಾನವತ್ವ ಕಳೆದುಕೊಳ್ಳುತ್ತಿರುವುದರ ಕಾರಣವಾದರೂ ಏನು? ಇದಕ್ಕೆ ಪರಿಹಾರವಾದರೂ ಏನು? ಮಾನವತ್ವ ಪೋಷಿಸುವ ಧರ್ಮ ಮಾತ್ರ ನಮಗಿರಲಿ. "ಸಬಕೋ ಸನ್ಮತಿ ದೇ ಭಗವಾನ್, ಅಲ್ಲಾಹ್, ಜೀಸಸ್, ಬುದ್ಧ, . . . .!"
ಆಧಾರ: ಪಾಕಿಸ್ತಾನದ 'ಟ್ರಿಬ್ಯೂನ್' ಪತ್ರಿಕೆಯ ವರದಿ. ಚಿತ್ರ ಸಹ ಅಲ್ಲಿಯದೇ.
ಲಿಂಕ್:http://tribune.com.pk/story/206929/love-hurts-hindu-couple-marries-outside-press-club-as-a-sign-of-protest/
Comments
ಕವಿ ನಾಗರಾಜ ರವರಿಗೆ ವಂದನೆಗಳು
In reply to ಕವಿ ನಾಗರಾಜ ರವರಿಗೆ ವಂದನೆಗಳು by H A Patil
ಹನುಮಂತ ಅನಂತ ಪಾಟೀಲರಿಗೆ
ಕವಿಗಳೇ,
In reply to ಕವಿಗಳೇ, by makara
ಕೇವಲ ಹಿಂದೂಗಳು ಮಾತ್ರವಲ್ಲ,
ಭಾರತದ ಅಲ್ಪಸಂಖ್ಯಾತರನ್ನು ದೂಷಿಸಿ
In reply to ಭಾರತದ ಅಲ್ಪಸಂಖ್ಯಾತರನ್ನು ದೂಷಿಸಿ by CanTHeeRava
ಲೇಖನದ ಮೂಲ ವಿಷಯದ ಕುರಿತು
ಪಾಕಿನಲ್ಲಿ ಹಿ0ದುಗಳ ಮೇಲೆ ಹಲವು
In reply to ಪಾಕಿನಲ್ಲಿ ಹಿ0ದುಗಳ ಮೇಲೆ ಹಲವು by venkatb83
ನಮ್ಮ ನೇತಾರರು ಧೃಢವಾದ ರೀತಿಯಲ್ಲಿ
ಒಂದು ದೇಶ ಎಷ್ಟು ಅಭಿವೃದ್ಧಿ
In reply to ಒಂದು ದೇಶ ಎಷ್ಟು ಅಭಿವೃದ್ಧಿ by CanTHeeRava
ಮೂಲ ವಿಷಯದ ಬಗ್ಗೆ ಸ್ಪಷ್ಟ
In reply to ಮೂಲ ವಿಷಯದ ಬಗ್ಗೆ ಸ್ಪಷ್ಟ by kavinagaraj
ನಿಮಗೆ ನನ್ನ ಪ್ರತಿಕ್ರಿಯೆ
In reply to ನಿಮಗೆ ನನ್ನ ಪ್ರತಿಕ್ರಿಯೆ by CanTHeeRava
ಪಾಕಿಸ್ತಾನದ ಹಿಂದೂಗಳ
ಒಂದು ರಾಷ್ಟ್ರವು
In reply to ಒಂದು ರಾಷ್ಟ್ರವು by anand33
ಹೀಗಾಗಿ ನಾವು ಆ ದೇಶದ ಮೇಲೆ
In reply to ಒಂದು ರಾಷ್ಟ್ರವು by anand33
ಇನ್ನೊಂದು ವಿಷಯ ಎಂದರೆ