ಪಾಪ ಪ್ರಧಾನಮಂತ್ರಿಗಳಿಗೆ ಹೀಗಾಗಬಾರದಿತ್ತು!

ಪಾಪ ಪ್ರಧಾನಮಂತ್ರಿಗಳಿಗೆ ಹೀಗಾಗಬಾರದಿತ್ತು!

ಬರಹ

ನಿನ್ನೆ ದಿಲ್ಲಿಯಿಂದ ಚೆನ್ನೈಗೆ ಹೊರಟಿದ್ದೆ. ಅಲ್ಲಿ ಏಷಿಯನ್ ಏಜ್ ಪೇಪರ್ ಓದಿದ ಸುದ್ದಿ ನಿಜಕ್ಕೂ ತಲೆ ಸುತ್ತುವಂತೆ ಮಾಡಿತು. ಏಷಿಯನ್ ಏಜ್ ಪ್ರಕಾರ ಪ್ರಧಾನ ಮಂತ್ರಿಗಳು ಇಂದು ಬಿಡುಗಡೆ ಹೊಂದಬಹುದು (ಆಸ್ಪತ್ರೆಯಿಂದ!)

ನನಗೆ ಗೊತ್ತಿರುವಹಾಗೆ ಅವರು ಹೃದಯದ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದರು. ಅದನ್ನು "ಮನೆಗೆ ಮರಳುತ್ತಾರೆ" ( Discharge ) ಎನ್ನುತ್ತಾರೆಯೇ ವಿನಃ ಬಿಡುಗಡೆ (Release) ಎನ್ನುವುದಿಲ್ಲ!!!

ಬಹುಶಃ ಏಮ್ಸ್ ಗೆ ಸೇರಿದ ಬಹಳ ದೊಡ್ಡ ಗಣ್ಯರು ಅಲ್ಲಿಂದಲೇ (ಲೋಕದಿಂದ) ಬಿಡುಗಡೆಯಾಗಿರುವುದೇನೋ ನಿಜ! ಈ ರೀತಿಯ ವರದಿಗಳನ್ನು ಕೊಡುವ ಬೇಜವಾಬ್ದಾರಿ ಪತ್ರಿಕೆಗಳನ್ನು ಓದಲೇ ಬೇಸರವಾಗುತ್ತದೆ.

ನಿಜ ಹೇಳಬೇಕೆಂದರೆ ಪ್ರಧಾನಿಯವರೂ ಬಹಳ ಸಾರಿ ಬಿಡುಗಡೆಗೆ ಪ್ರಯತ್ನಿಸಿದ್ದಂತೂ ನಿಜ. ರಾಜಕೀಯ ಜಂಜಾಟದಿಂದ (ಜವಾಬ್ದಾರಿ ಹೊರಲಾರದೇ) ರಾಜೀನಾಮೆ ಕೊಡಲು ಮೇಡಂಮುಂದೆ ಬಹಳಸಾರಿ ನಿಂತಿದ್ದರು. ಅಂದಹಾಗೆ ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಮನಮೋಹನರಿಗೆ "ನೀವು ರಾಜೀನಾಮೆ ನೀಡುವುದಕ್ಕೆ ನನ್ನ ಬಳಿಗೆ ಬರಲೇಕೂಡದು" ಎಂದು ತಾಕೀತು ಮಾಡಿದ್ದರು.

ವಿವರಗಳಿಗೆ ಈ ಕೊಂಡಿ ನೋಡಿರಿ: http://www.asianage.com/presentation/leftnavigation/news/india/pm-likely-to-be-released-today.aspx (ಅಂದಹಾಗೆ ಸಂಪದಿಗರು ಏನಂತಾರೋ)

ಪಾಪ ನಮ್ಮ ಪ್ರಧಾನ ಮಂತ್ರಿಗಳಿಗೆ ದೇವರು ಧೀರ್ಘಾಯುಷ್ಯವನ್ನು ನೀಡಲಿ ಎಂದು ಪ್ರಾರ್ಥಿಸುವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet