ಪಿಬಿಎಸ್ : ಅಚ್ಚರಿ ಕಾದಿದೆ

ಪಿಬಿಎಸ್ : ಅಚ್ಚರಿ ಕಾದಿದೆ

ಪಿ.ಬಿ.ಶ್ರೀನಿವಾಸ್ ಅವರು ಮೊನ್ನೆ ಸಿಂಗಪುರದಲ್ಲಿ ’ವಿಶ್ವಮಾನ್ಯ ಸುವರ್ಣ’ ಪ್ರಶಸ್ತಿ ಸ್ವೀಕರಿಸಿದ ಸುದ್ದಿಯನ್ನು ಇದೀಗಷ್ಟೇ ಮಾಧ್ಯಮದಲ್ಲಿ ಓದಿದೆ. ಪಿಬಿಎಸ್‌ರೊಡನೆ ಮಾತುಕತೆಯಾಡಿದವ, ಅವರ ಗಾಯನವನ್ನು ಎದುರು ಕುಳಿತು ಕೇಳಿದವ ನಾನು.

ಪಿಬಿಎಸ್ ನಿಜಕ್ಕೂ ವಿಶ್ವಮಾನ್ಯ ಸುವರ್ಣನಿಧಿಯೇ. "ರಾಜ್‌ಕುಮಾರ್ ಅವರು ತಮ್ಮ ಪಾತ್ರಗಳಿಗೆ ಮೊದಲಿನಿಂದಲೂ ತಾವೇ ಹಾಡಬಹುದಿತ್ತು, ಆದಾಗ್ಗ್ಯೂ ತನಗೆ ಹಾಡಲು ವಿಪುಲ ಅವಕಾಶ ನೀಡಿದ ರಾಜ್ ಹೃದಯವಂತರು", ಹೀಗೆಂದು ಹೇಳಿದ ವಿನಯಶೀಲ ಈ ನಮ್ಮ ಪಿಬಿಎಸ್. ಪಿಬಿಎಸ್‌ ಕುರಿತಂತೆ ನಮಗೆಲ್ಲ ಒಂದು ಅಚ್ಚರಿಯ ಬೃಹತ್ ಕಾಣಿಕೆ ದೊರಕಲಿದೆ. ಅದೇನೆಂದು ಈಗಲೇ ನಾನು ಹೇಳುವುದಿಲ್ಲ, ಕಾದು ನೋಡಿ.

Comments