ಪುಟ್ಟನ ನಿರೀಕ್ಷೆ
ಕವನ
ಪುಟ್ಟ ಕಂದಮ್ಮ ನೋಡುತಿಹನು
ಸಸಿಯ ಜೊಂಕೆ ಹಿಡಿದಿಹನು
ಗಿಡ ನೆಡಲು ಕಾತರಿಸುತಿಹನು
ಒಡಲೆಲ್ಲ ಸಂತಸದಿ ಬೀಗುತಿಹನು
ನೆಟ್ಟ ಫಲಪುಷ್ಪಗಳ ಸೊಬಗು
ನೋಡುಗರ ಕಣ್ಣಿಗೆ ಬೆರಗು
ಚೆಲು ಲತೆಯರ ಲಾಸ್ಯ
ಹುಡುಗನ ಮನಸ್ಸಿನ ಭಾಷ್ಯ
ಕೆಂಬಣ್ಣದ ಗಾಡಿ ಸವಾರಿ
ಪರಿಸರದಿ ಸುತ್ತಾಡುವ ವೈಖರಿ
ಹೆತ್ತವರ ಮುದ್ದು ಬಾಲ
ಮುತ್ತನೊಂದು ನೀಡುವೆ ಲೋಲ
ಬೆಂಡೆ ಅಲಸಂಡೆ ಶ್ವೇತಮಲ್ಲಿಗೆ
ತೊಂಡೆ ಕುದನೆ ನೋಡಲು ಮೆಲ್ಲಗೆ
ವೈವಿಧ್ಯ ಗಿಡಗಳ ಅಂದ
ಚಕ್ಷುಗಳ ನೋಟಕ್ಕೆ ಚಂದ
ನೀರುಣಿಸಲು ದಾರಿ ಕಾಯುವ ಪೋರ
ಅಮ್ಮ ಬರುವಳೆಂಬ ಧೀರ
ಪರಿಸರ ಪ್ರೇಮಿ ಕಂದ
ನೀನೇ ಮನೆಯ ಮುಕುಂದ
-ರತ್ನಾ ಕೆ ಭಟ್ ತಲಂಜೇರಿ
ಚಿತ್ರದಲ್ಲಿ : ಸ್ವಸ್ತಿಕ್ ಟಿ ತಲಂಜೇರಿ
ಚಿತ್ರ್
