ಪುಟ್ಟ ಹನಿಗಳು
ಕವನ
ಬಿಂದು
ಅಮ್ಮ ನೀನು
ಆಕಾಶ
ನಾನು ಒಂದು
ಬಿಂದು
*
ಈಜುಕೊಳ
ನಲ್ಲೆ ನಿನ್ನೆರಡು
ಕಣ್ಣುಗಳು
ನನ್ನೊಲವಿನ
ಈಜುಕೊಳಗಳು
*
ಶುದ್ಧಗಾಳಿ
ಹಸಿರು ಗಿಡವ
ನೆಟ್ಟು ಬೆಳೆಸುವ
ಶುದ್ಧ ಗಾಳಿ
ಸದಾ ಪಡೆಯುವ
*
ಬಿಸಿ ವಡೆ
ಕೊಡೆ ಹಿಡಿದು
ಬೇಗ ನಡೆ
ಅಮ್ಮ ಕೊಡುವಳು
ಬಿಸಿ ಬಿಸಿ ವಡೆ
*
ಸೀತಾಕಾಂತ
ದೇವ ನಿನ್ನ
ನಾಮ ಚಂದ
ಸೀತಾ ಕಾಂತ
ರಾಮ ಅಂದ
ಎಲ್ಲರ ಮನದ
ಜಗದಾನಂದ
*
ಅಲೆ--ನೆಲೆ
ಜನರ ಸಡಗರ
ಕೊರೊನಾದ ಅಬ್ಬರ
ಕೊಚ್ಚಿ ಹೋದ ಅಲೆ
ಬತ್ತಿ ಹೋಯ್ತು ನೆಲೆ
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ್
