ಪ್ರಲಾಪ

ಪ್ರಲಾಪ

ಕವನ

            ಪ್ರ ಲಾಪ

 
ನಾನಾರು ತಿಳಿದೆಯಾ ಕನ್ನಡದ ಕಂದ
ನನ್ನ ಪರಿಮಳದಿಂದ ನಿನಗೇ ಆನಂದ
ತೇಯ್ದರೂ ಸುಟ್ಟರೂ ಬೀರುವೆನು ಸುಗಂಧ
ಸಸ್ಯಗಳ ರಾಣಿ ನಾ ನಿನ್ನಿಷ್ಟದ ಶ್ರೀಗಂಧ
 
ಬೀಜಬಿತ್ತುವರಿಲ್ಲ ನೀರು ಗೊಬ್ಬರವಿಲ್ಲ
ನೆಡುತೋಪು ನನಗಂತು ಇಲ್ಲವಲ್ಲ
ಆದರೂ ನಾ ಬೆಳೆವೆ ಗಿಡಗಂಟಿಗಳ ನಡುವೆ
ಗುಡ್ಡ ಬೆಟ್ಟಗಳಲ್ಲಿ ಮೊಳಕೆಯೊಡೆವೆ
 
ನನ್ನೊಡಲ ಪರಿಮಳವೆ ನನಗೆ ವೈರಿ
ನನ್ನ ಸಂಕುಲಕೆ ನೀನೇ ವಿನಾಶಕಾರಿ
ಕೊಚ್ಚಿ ಕೊಲ್ಲುವಿಯೆನ್ನ ಮಚ್ಚಿನಿಂದ
ಇಚ್ಚೆಯಿಂದಲಿ ಸಲಹುವರಿಲ್ಲ ಮೆಚ್ಚಿನಿಂದ
 
ಸೌಂಧರ್ಯ ಸಾದನಕೆ ಕೆತ್ತನೆಗೆ ಶಿಲ್ಪಕ್ಕೆ
ಔಷದಿಗೆ ದೂಪಕ್ಕೆ ನಾ ಬೇಡವೇನು
ನಿನ್ನ ಸಂಪತ್ತನ್ನು ಬಳಸಲರಿಯದ ನೀನು
ಬೇಕೆಂದಾಗ ಕಂತೆಕಂತೆ ತೆತ್ತು ತರುವೆಯೇನು
 
ಕರುನಾಡ ಕೆಮ್ಮಣ್ಣು ನನಗಿಷ್ಟವಲ್ಲ
ಬೇರೆಲ್ಲೂ ಬೆಳೆಯಲು ನಾನೊಲ್ಲೆನಲ್ಲ
ನನ್ನಂತೆ ನಿನ್ನಲ್ಲೂ ಹಲವರಿಹರಲ್ಲ
ಪರಿಮಳವ ಬೀರುವರ ಕೇಳುವವರಿಲ್ಲ
               *****

Comments