ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ’ಮಾನೋ ರೇಲ್ ” ನ ಅಗತ್ಯತೆ !

ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ’ಮಾನೋ ರೇಲ್ ” ನ ಅಗತ್ಯತೆ !

ಬರಹ

ಮೊದ-ಮೊದಲು ಫ್ರಾಂಕ್ಫರ್ಟ್ ವಿಮಾನ ನಿಲ್ದಾಣವನ್ನು ಕಂಡಾಗ ಆಗುವ ಅನುಭವ, ಅದೆಷ್ಟು ಪುಟಾಣಿ ನಿಲ್ದಾಣ ಎಂಬ ಭಾವನೆಬರುತ್ತದೆ. ಅಮೆರಿಕದ ಭಾರಿ-ಭಾರಿ ನಿಲ್ದಾಣಗಳನ್ನು ಕಂಡಾಗ, ಫ್ರಾಂಕ್ಫರ್ಟ್ ವಿಮಾನ ನಿಲ್ದಾಣ, ಹಾಗೆ ಅನ್ನಿಸುವುದು ಸಹಜ. ನಿಜವಾಗಿ ನಮ್ಮ ಮುಂಬೈ ಮುಂತಾದ ನಿಲ್ದಾಣಗಳಿಗಿಂತ ಅದು ದೊಡ್ಡದೇ. ಸೌಕರ್ಯಗಳಿಗೆ ಹೇಳಿಮಾಡಿಸಿದಂತಿದೆ. ಎಸ್ಕಲೇಟರ್ ಗಳು, ನಡೆಯಲು ಉದ್ದುದ್ದದ ಲ್ಯಾಟಿಸ್ ಗಳು, ವಿಚಾರಿಸಲು ಅತ್ಯುತ್ತಮ ವ್ಯವಸ್ಥೆಗಳು ಇತ್ಯಾದಿ. ನೈರ್ಮಲ್ಯತೆಗೆ ಹೆಚ್ಚಿನ ಆದ್ಯತೆ. ಒಳ್ಳೆಯ ಸ್ಟೋರ್ ಗಳು, ಕಾಫಿಶಾಪ್, ಪುಸ್ತಕ, ಮ್ಯಾಗಝೈನ್ ಗಳ ಮಳಿಗೆಗಳು, ಕುಳಿತುಕೊಳ್ಳಲು ವಿಶಾಲ ಲಾಬಿ, ಅತ್ಯಂತ ಸ್ವಚ್ಛವಾದ ವಾತಾವರಣ. ಟೆಲಿವಿಷನ್ ನಲ್ಲಿ ಸ್ಪಷ್ಟವಾಗಿ ತಿಳಿಸುವ ಅತ್ಯುತ್ತಮ ಸೇವೆ. ಡಿಸ್ಪ್ಲೆ ಗಳು ಅತಿ ನಿಖರ, ಹಾಗೂ ಸಕಾಲಿಕ. ಯಾವಾಗಲೂ ಅದ್ ಸರ್ಯಾಗ್ ನಡೀತಿಲ್ಲ; ಕೆಲ್ಸ ಮಾಡ್ತಿಲ್ಲ ಅನ್ನೋ ಕಂಪ್ಲೇಂಟ್ ಇಲ್ಲವೇ ಇಲ್ಲ ! ಮುಂಬೈ ಏರ್ಪೋರ್ಟ್ ನಷ್ಟು ಕೊಳಕು, ಹಾಗೂ ಅವ್ಯವಸ್ಥಿತ ಪರಿಸರದ ಪ್ರದೇಶಗಳು ಬೇರೆ ಎಲ್ಲೂ ಇಲ್ಲವೇನೋ !

’ಫ್ರಾಂಕ್ಫರ್ಟ್ ವಿಮಾನ ನಿಲ್ದಾಣ ’ ದ ’ಮಾನೋರೈಲು’, ಏರ್ಪೋರ್ಟ್ ನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈಗ, ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ದುರಸ್ತಿ ಹಾಗೂ ವಿಸ್ತರಣಾಕೆಲಸ ಭರದಿಂದ ನಡೆಯುತ್ತಿದೆ. ಆದರೆ ಪ್ರಯಾಣಿಕರಿಗೆ ಯಾವ ವಿಧವಾದ ತೊಂದರೆಯೂ ಆಗದಂತೆ ನಿಗವಹಿಸಿವ ಅವರ ಕರ್ತವ್ಯ-ಪ್ರಜ್ಞೆಯನ್ನು ನಾವು ಅನುಕರಿಸಬೇಕು. ಹೆಚ್ಚುಕಡಿಮೆ ವಿಶ್ವದ ಯಾವುದೇ ಭಾಗದಿಂದಲೂ ನಾವು ಕಲಿಯುವುದು ಬಹಳವಿದೆ. ನಮ್ಮಷ್ಟು ಪ್ರಜ್ಞಾ-ಶೂನ್ಯ ಜನರು, ಎಲ್ಲಾದರೂ ಇದ್ದಾರೆಯೇ, ಅನ್ನುವಷ್ಟು ಮನಸ್ಸು ರೋಸಿಹೊಗುತ್ತದೆ.

ಅಮೆರಿಕದ ’ಫ್ರೆಶ್ ರೂಂ,’ ಗಳು ಇಲ್ಲಿ ’ ಡಬ್ಲ್ಯೂಸಿ ಆಗಿಬಿಡುತ್ತವೆ. ಅಲ್ಲೋ ವಿಶಾಲವಾದ ’ಫ್ರೆಶ್ ರೂಂ,’ ಗಳು. ಇಲ್ಲಿ ಅತಿ ಚಿಕ್ಕವು. ಮೊದಲು ಗಾಜಿನ ಬಾಗಿಲುಗಳನ್ನು ಹಾಯ್ದು ಹೋದರೆ, ಒಂದೊಂದು ಕಮೋಡ್ ಗಳು ಮಾತ್ರ ಇದ್ದವು. ಸ್ವಲ್ಪ ಜಾಗದ ಅಭಾವ ಕಾಣುತ್ತಾ ಹೋಗುತ್ತದೆ. ಆದರೆ ಜರ್ಮನ್ ಟೆಕ್ನಾಲೊಜಿ ಎಲ್ಲದರಲ್ಲೂ ಮಂಚೂಣಿಯಲ್ಲಿದೆ. ಒಳ್ಳೆಯ ಹೆಸರಿಗಾಗಿ ಅವರು ಬಹಳ ಹಾತೊರೆಯುತ್ತಾರೆ. ’ ಲುಫ್ತಾನ್ಸ ಏರ್ ಲೈನ್ಸ್,’ ನ್ನೇ ತೆಗೆದುಕೊಳ್ಳಿ. ಏನು ವ್ಯವಸ್ಥಿತ. ಎಷ್ಟು ಸಮಯಪ್ರಜ್ಞೆ !

ನಮ್ಮ ಏರ್ ಇಂಡಿಯ ದಿನದಿನವೂ ಹೆಸರನ್ನು ಕೆಡೆಸಿಕೊಳ್ಳುತ್ತಿದೆ. ಮುಂಬೈ ನಲ್ಲಿ ವಿಮಾನ ಇಳಿಸುವ ಬದಲು”ಗೋವ’ ದಲ್ಲಿ ಇಳಿಸುತ್ತಾರೆ. ಕೇಳಿದರೆ ಎಲ್ಲಾ ಸುವ್ಯವಸ್ಥಿತೆಯಬಗ್ಗೆ ಭಾಷಣ ಬಿಗಿಯುತ್ತಾರೆ. ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಸುತರಾಂ ಇಲ್ಲವೇ ಇಲ್ಲ. ನಾವು ಅಥವಾ ಇತ್ತೀಚೆಗೆ ಯಾವುದೋ ಅಮೆರಿಕನ್ ಏರ್ಲೈನ್ ಕೂಡ ಇಂತಹ ತಪ್ಪು ಮಾಡಿತ್ತು. ತಪ್ಪು ಮಾಡುವುದು ಮಾನವನ ವೀಕ್ನೆಸ್ ಗಳಲ್ಲೊಂದು. ಇದು ಯಾವ ಸೀಮೆ ಪ್ರಾಂತ್ಯಕ್ಕೆ ಸೀಮಿತವಲ್ಲ. ತಪ್ಪನ್ನು ತಿದ್ದಿಕೊಳ್ಳುವುದು ಅತಿಮುಖ್ಯ.

" ಬಂದ್ರಪ್ಪ, ಇನ್ನೊಬ್ಬ ಅಮೆರಿಕನ್ ಪದ್ಧತಿ ಹೊಗ್ಳೋ ಮನುಷ್ಯ," "ಅಂತೀರ, ಸರಿ ಅನ್ನಿ. ಸ್ವಲ್ಪ ಗಟ್ಟಿಯಾಗಿ ನಮ್ ಜನಕ್ಕೆ, ಕೇಳೋಹಾಗ್ ಅನ್ನಿ". ’ಕೇಳ್ಸಿದ್ರೂ, ಹಾಗೆ ಮೈಗೊರ್ಸ್ಕೊಂಡ್ ಹೋಗೋರಲ್ವ- ನಮ್ ಜನ ’ !

ನಾನೇ ತೆಗೆದ ಚಿತ್ರ.