ಬದುಕುವಾಸೆ 'ತೇಜಸ್ವಿ'ಯವರ ಹಾಗೆ

ಬದುಕುವಾಸೆ 'ತೇಜಸ್ವಿ'ಯವರ ಹಾಗೆ

ಬರಹ

ಯಾಕೋ ನೀವು ನನ್ನ ಜೀವನದ ಪ್ರತಿ ಹಂತದಲ್ಲೂ ಕಾಡುತ್ತಿರುತ್ತೀರ. ಹೌದು ನಾನೂ ನಿಮ್ಮ ಹಾಗೆಯೇ ಬದುಕಬೇಕು. ನೀವು ಬರೆದಿರುವ ಎಲ್ಲಾ ಬರವಣಿಗೆಗಳನ್ನು ನಾನು ಯಾರೂ ಇಲ್ಲದಿರುವಾಗಲೇ ಓದುತ್ತೇನೆ. ಏಕೆಂದರೆ ನನ್ನ ಆಸ್ವಾದನೆಗೆ ಧಕ್ಕೆಯಾಗಬಾರದೆಂಬ ಸ್ವಾರ್ಥ ನನ್ನದು. ನಿಮ್ಮ 'ಅಣ್ಣನ ನೆನಪು' ಓದುವಾಗ ನಾನಂತೂ ನಿಮ್ಮ ಜೊತೆ ಶ್ಯಾಮಣ್ಣನವರ ಜೊತೆ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡಂತೆ,ಆಲೂರು ಕೃಷ್ಣಮೂರ್ತಿಯವರ ಲಡಕಾಸಿ ಮೋಟಾರ್ ಬೈಕ್ ನೋಡಿ ನಗು ತಡೆಯಲಾರದೇ ಬಿದ್ದಂತೆ, ಬಿದ್ದಂತೆ ಏನು? ನಿಜವಾಗಿ ಬಿದ್ದು ನೆಲದ ಮೇಲೆ ಒದ್ದಾಡುತ್ತಿದ್ದೆ. ನಾನು 'ಪ್ಯಾಪಿಲಾನ್' ಎರಡು ಭಾಗಗಳನ್ನು 6ಬಾರಿ ಓದಿದೆನೆಂದು ಎಲ್ಲರ ಬಳಿ ಹೆಮ್ಮೆಯಿಂದ ಹೇಳಿಕೊಂಡು ಬರುತ್ತಿದ್ದೆ. 'ನೀವು' ನಿಮ್ಮ 'ಕಿವಿ'ಯನ್ನು ನೋಡಲು ಅವಕಾಶ ನೀಡದಂತೆಯೇ ಹೋಗಿಬಿಟ್ಟಿರಿ. ಬೇರೆಯವರ ಕಟು ಮಾತುಗಳಿಗೆ ತಲೆ ಕೆಡಿಸಿಕೊಳ್ಳದೇ ಉಳಿದುಬಿಟ್ಟಿರಿ. ನಿಮ್ಮ ಪ್ರಶಸ್ತೀನೂ ಬೇಡ,ನಿಮ್ಮ ವಿಮರ್ಶೆನೂ ಬೇಡ, ನಾನಾಯ್ತು......ನನ್ನ ಮೂಡಿಗೆರೆಯಾಯ್ತೆಂದು ಇದ್ದುಬಿಟ್ಟಿರಿ. ನನಗೂ ಅಂಥ ಒಂದು ಆದರ್ಶದ ಹಾದಿಯನ್ನು ತೋರಿಸಿಹೋಗಿದ್ದೀರಾ.....

ಥ್ಯಾಂಕ್ಯೂ 'ತೇಜಸ್ವಿ' ನಿಮಗಾಗಿ ನಿಮ್ಮ ಪುಟ್ಟ ಪುಸ್ತಕ ಗೆಳತಿ,