ಬದುಕೊಂದು ಬ್ಯಾಲೆನ್ಸ್ ಶೀಟು

ಬದುಕೊಂದು ಬ್ಯಾಲೆನ್ಸ್ ಶೀಟು

ಬರಹ

ಈ ಬದುಕೊಂದು ತನಗೆ ತಾನೇ ಬ್ಯಾಲೆನ್ಸಾಗುವ ಶೀಟು
ಒಂದೆಡೆ ಏರಿಸಿದರೆ ಹ್ಯಾಟು ಇನ್ನೊಂದೆಡೆ ಸೇರುವುದು ಬೂಟು
ಅಪ್ಪ ಅಮ್ಮ ನೀಡಿದುದೇ ಅಸಲು ಬಂಡವಾಳ
ಕರ್ಮಗಳಿಗನುಸಾರವಾಗುಳಿಯುವುದು ನಿವ್ವಳ

ಪಾಲಕರು ನೀಡುವುದೇ ಪ್ರಿಫರೆನ್ಸ್ ಶೇರ್‍ಸು
ಋಣ ತೀರಿಸಲು ಮೊದಲು ಅವರನು ಪಾಲಿಸು
ಮುಂದೆ ಹಾದಿ ತೋರುವವರೇ ಡಿಬೆಂಚರ್‍ಸು
ಕೈ ಹಿಡಿದು ನಡೆಸಿದವರ ನೀನೆಂದೂ ನೆನೆಸು

ಕೈ ನಡೆಸುವ ಹೆಂಡತಿ ಮಕ್ಕಳೇ ಕ್ಯಾಷ್ ಬ್ಯಾಲೆನ್ಸು
ಮುಂದಿನ ಬಾಳಿಗೆ ಹಾದಿ ತೋರುವವರೇ ಬ್ಯಾಂಕ್ ಬ್ಯಾಲೆನ್ಸು
ಕೆಲಸಕ್ಕೆ ಫಲ ನೀಡಿದವರೇ ಎನ್.ಪಿ.ಏ.ಗಳು
ಹೇಳದೇ ಕೊಡುವವರೇ ದೇಯಗಳು

ಶುಭ ಕೋರುವ ಕಾಣದ ಕೈಗಳೇ ಇನ್‍ಟ್ಯಾಂಜಿಬಲ್‍ಗಳು
ಕಾಣದ ಹಾದಿಗೆ ದಾರಿ ತೋರುವುದೇ ಗುಡ್‍ವಿಲ್ಲುಗಳು
ಮಾಡಿದ ಒಳಿತಿಗೆ ಸಿಗುವುದೇ ಸ್ಥಿರಾಸ್ಥಿಗಳು
ಅಂದಿನ ಕೃತಿಗೆ ಅಂದು ಫಲ ಕೊಡುವುದೇ ಚರಾಸ್ಥಿಗಳು

ಕೊನೆಯ ಘಳಿಗೆಯಲಿ ಇಲ್ಲದ ಶಿಲ್ಕುಗಳು
ನರಕ ತೋರಿಸಿದ ಲಯಾಬಿಲಿಟಿಗಳು
ಸ್ವರ್ಗ ತೋರಿದ ಆಸ್ತಿಗಳು
ಬರುವಾಗ ಖಾಲಿ ಹೋಗುವಾಗ ಖಾಲಿ

ಎಂದಿಗೂ ಯಾರಿಗೂ ಬ್ಯಾಲೆನ್ಸಾಗುವ ಶೀಟುಗಳು
ಯಾವ ಕಡೆಯಲ್ಲಿಯೂ ಉಳಿಯದ ಶಿಲ್ಕುಗಳು
ಪಡೆದದ್ದೆಷ್ಟೋ ಕೊಡ ಬೇಕಷ್ಟೇ
ಕೊಟ್ಟದ್ದೆಷ್ಟೋ ಪಡೆಯುವುದಷ್ಟೇ