ಬಸ್ ನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಎಚ್ಚರವಿರಲಿ !!

ಬಸ್ ನಲ್ಲಿ ಪ್ರಯಾಣಿಸುವಾಗ ಸ್ವಲ್ಪ ಎಚ್ಚರವಿರಲಿ !!

ಗೆಳೆಯರೇ, ಹೋದ ವಾರ ನಾನು ನಮ್ಮ BMTC ಯೆಲ್ಲಿ ಪ್ರಯಾಣಿಸುತ್ತಿದ್ದಾಗ ಕೆಲವರು ತಮ್ಮ ಕೈ ಚಳಕ ತೋರಿದ್ದಾರೆ....
ನನ್ನ ಬ್ಯಾಗ್ನಿಂದ purse ಅನ್ನು ತೊಗೊಂಡಿದ್ದಾರೆ.... ಎಷ್ಟು ನಿಪುಣರು ಎಂದರೆ ನನ್ನ ಬ್ಯಾಗ್ ನ ಒಳಗಿಂದ ತೆಗೆದಿದ್ದರೂ ನನಗೆ ಸ್ವಲ್ಪವು ಜಗ್ಗಿದನ್ತಾಗಿಲ್ಲ. ಹೆಚ್ಚು ಹಣವಿರಲಿಲ್ಲ ಆದರೆ ನನ್ನ PAN ಕಾರ್ಡ್ ಇತ್ತು....
DL ಇತ್ತು... ಎಲ್ಲ ಹೋಗಿದೆ.  ಈಗ ಅದನ್ನು ಹೊಸದಾಗಿ ಮಾಡಿಸಲು ಅಲೆಯುತ್ತಿದ್ದೇನೆ. ನೇರವಾಗೇ ಇನ್ತಿನ್ತಾದ್ದು ಕಳೆದು ಹೋದರೆ ಇಷ್ಷ್ಟಿಷ್ಟು ಅಂತ ರೇಟ್ ಹೇಳ್ತಾರೆ.....

ನಂಗೆ ಆಫೀಸ್ ಅಲ್ಲಿ ರಜ ಸಿಗುತ್ತಿಲ್ಲ ಎಲ್ಲ ಒಟ್ಟಿಗೆ ಮಾಡ್ಸಕ್ಕೆ...  ಒಟ್ಟಿನಲ್ಲಿ ಕಳೆದು ಹೋದ ದುಡ್ಡಿನ ಜೊತೆಗೆ ಬಂದ ಅಲೆದಾಟದ ಆಫರ್ ಅನ್ನು ಅನುಭವಿಸುತ್ತಿದ್ದೇನೆ.

ಈ ರೀತಿ purse ಕದಿಯಲೆಂದೇ ಬರುವರಿದ್ದಾರಂತೆ. ಅವರದ್ದು ಒಂದು ದೊಡ್ಡ ಗುಂಪೇ ಇದೆ. ಎಲ್ಲರಂತೆ ಚೆನ್ನಾಗಿ ಅಲಂಕರಿಸಿಕೊಂಡು ವ್ಯಾನಿಟಿ ಬ್ಯಾಗ್ನೊಂದಿಗೆ ಬಸ್ ಏರುತ್ತಾರೆ. ಸಿಕ್ಕಾಪಟ್ಟೆ ರಶ್ ಇರುವ ಬಸ್ ಹತ್ತಿ ಹೀಗೆ ಒಂದಿಬ್ಬರ ಬ್ಯಾಗ್ಗಳಿಗೆ ಕತ್ತರಿ ಹಾಕಿ ಒಂದೆರಡು ಸ್ಟಾಪ್ಗಳಲ್ಲೇ ಇಳಿದುಬಿಡುತ್ತಾರೆ. ಆ ರಶ್ನಲ್ಲಿ ನಿಮಗೆ ಗೊತ್ತೂ ಆಗಿರುವುದಿಲ್ಲ.

 ನನಗೆ ಆದ ಅನುಭವ ನಿಮಗೂ ಆಗಿರಬಹುದು. ಇಲ್ಲದಿದ್ದಲಿ ಒಳ್ಳೆಯದು. ಸ್ವಲ್ಪ ಎಚ್ಚರದಿನ್ದಿರಿ ಎಂದು ಹೇಳಲು ಈ ಲೇಖನ

Comments