ಬಾಡಿಯನ್ನು ಬಾಡಿಗೆ ಬಿಟ್ಟಿರುವ ಭಗವಂತನಿಗೆ .....

ಬಾಡಿಯನ್ನು ಬಾಡಿಗೆ ಬಿಟ್ಟಿರುವ ಭಗವಂತನಿಗೆ .....

 

ಬಾಡಿಯನ್ನು ಬಾಡಿಗೆ ಬಿಟ್ಟಿರುವ ಭಗವಂತನಿಗೆ,
ಭವ ಬಂಧನವಿರುವವರೆಗೂ ಬಾಡಿ ಬಾಗಿಸಿ ದುಡಿವ ಜೊತೆಗೆ
ಭಕ್ತಿ ಭಾವವೆಂಬ ಬಾಡಿಗೆ ಭರಿಸುವ ಬದಲಿಗೆ
ಬಾಡಿಯು ಬಾಡುವವರೆಗೂ ಭವದ ಬಯಕೆಗಳನ್ನು ಭರಿಸಲೆಂದೇ
ಬೇಡುತ್ತಲೋ. ಬಡಿಯುತ್ತಲೋ ಭಂಡ ಬಾಳು ಬಾಳುವವನ 
ಬಗ್ಗೆ ಬೇಸತ್ತು ಬಸವಳಿದು ಭೂಮಿಗೆ ಬಂದ ಭಗವಂತ 
soulಅನ್ನು ಎತ್ತಿಕೊಳ್ಳಲ್ ಸೊಲ್ಲೆತ್ತದ್ದೆ ಸೋಲೊಪ್ಪಲೇಬೇಕು
 

Comments

Submitted by Prakash Narasimhaiya Tue, 11/20/2012 - 22:03

ಆತ್ಮೀಯ‌ ಭಲ್ಲೆಜೀ, ಭೂಮಿಗೆ ಬ0ದ‌ ಭಗವನ್ತನ‌ ಭವಣೆಯನ್ನು ಬೇಸರಿಸದೆ, ಬಾಡಿಯ‌ ಬಗೆಗೆ ಬರೆದಿರುವ‌ ಭಲ್ಲೇಜಿಗೆ ಭವದ‌ ಬಯಕೆ ಭರಿಸಲೆ0ದು ಭಗವ0ತನಲ್ಲಿ ಬೇಡಿಕೆ.
Submitted by ಗಣೇಶ Wed, 11/21/2012 - 23:57

ಕವನದ ಐದು ಆರನೇ ಸಾಲು ನಮ್ಮ ಮನಸ್ಸನ್ನು ನೋಯಿಸಿದೆ. ಅದನ್ನು ತೆಗೆದು ಹಾಕದಿದ್ದಲ್ಲಿ, ನಾವು "ಭಂಡ"ಸ್ವಾಮಿಗಳೆಲ್ಲಾ ಸೇರಿ ಆಮರಣ ಊ(ಪವಾಸ)ಟ ಮಾಡುವೆವು. -ಅಂ.ಭಂಡ ಸ್ವಾಮಿಗಳು ಮೊಕ್ಕಾಂ-ಬೆಂಗಳೂರು.
Submitted by bhalle Thu, 11/22/2012 - 21:23

In reply to by ಗಣೇಶ

ಅಂಡಾಂಡ’ಭಂಡ’ಅಂಡ ಸ್ವಾಮಿಗಳು ಈ ಬಡಪ್ರಾಣಿ ಮೇಲೆ ಬೇಸರಿಸಿಕೊಂಡಿದ್ದು ನನಗೆ ತಡ್ಕಳ್ಳಕ್ಕಾಗದ ವೇದನೆಯಾಗಿದೆ :-))))
Submitted by venkatb83 Tue, 12/11/2012 - 17:55

In reply to by bhalle

ಕುಂ ...ಕ ಹೆ .ಮು ..ನೋ ....!! ಭಲ್ಲೆ ಅವ್ರೆ ನಿಮ್ಮ ಹಳೆಯ ಬರಹಗಳು ಈಗ ಕಣ್ಣಿಗೆ ಬಿದ್ದವು..ಅದರಲ್ಲಿ ಒಂದಕ್ಕೆ ಈಗ ಪ್ರತಿಕ್ರಿಯ ಯೋಗ..!! ಬಾಡಿಗೆ ಬಿಟ್ಟ ಬಾಡಿ ಬಿಟ್ಟಿ ಎಂದು ....ಹೆಂಗೆಂಗೋ ಬಾಳಿದರೆ ಹೆಂಗೆ....! ಶುಭವಾಗಲಿ... \|