ಬಾನಂಗಳದಲಿ ಕಂಕಣ ಕಟ್ಟಿದೆ....

ಬಾನಂಗಳದಲಿ ಕಂಕಣ ಕಟ್ಟಿದೆ....

ಬರಹ

ಬೆಳಿಗ್ಗೆ ಏಳುವವರೆಗೂ ನಿರ್ಧಾರ ಮಾಡಿರಲಿಲ್ಲ ಸುವರ್ಣದಲ್ಲಿ
ಸುನೀತಾ ಅಗ್ರವಾಲ್ ಎಂಬ  ಕಣ್ಣಿನಡಾಕ್ಟರು ಹೇಳ್ತಿದ್ರು ಗ್ರಹಣ ಅವಶ್ಯನೋಡಿ
ಆದ್ರೆ ಬರಿಗಣ್ಣಲ್ಲಿ ಬೇಡ ಎಂದು. ನಾ ಹೋಗುವುದೆಂದಾಗ ಜೋಡಿ  ನಾವು ಬರತೀವಿ ಅಂತ ಹೆಂಡತಿ,ಮಗಳು ತಯಾರಾದ್ರು ನೆಹರು ತಾರಾಲಯದಲ್ಲಿ
ವಿಶೇಷ ಚಾಳೀಸು ಖರಿದೀಸಿ ಕಪ್ಪಾಗುವ ಸೂರ್ಯ ಹೆಂಗಿರಬಹುದು ಎಂದು ವಿಚಾರ ಮಾಡುತ್ತಿದ್ದೆವು ಅಲ್ಲಲ್ಲಿ ಮೋಡ, ಸುಮಾರು ಐದು ಟೆಲಿಸ್ಕೋಪು ಟಿವಿ ಕೆಮರಾದವ್ರು ಹಾಗೂ ಸುಂದರಿಯರು ಅನ್ನಬಹುದಾದ
ನಿರೂಪಿಯಕರು ಹೀಗೆ ಥರಾವರಿ ಜನ. ೧೧=೩೦ ಕ್ಕೆಲ್ಲ ವಿಪರೀತ ಜನ
ಸೂರ್ಯನ ಮೇಲೆ ಚಂದ್ರನನೆರಳು ಆವರಿಸಿಕೊಳ್ಳುತ್ತಿತ್ತು ವಿಶೇಷವಾದ ದೃಶ್ಯವದು.ಈ ಭೂಮಿ ಮೇಲೆ ನದಿ ಹರಿಯುತ್ತದೆ ಗಾಳಿ ಬೀಸುತ್ತದೆ  ಇವೆಲ್ಲ  ನಾವು ಸ್ವಾಭಾವಿಕ ಎಂದು ಒಪ್ಪಿಕೊಂಡು ಬಂದ ಸಂಗತಿಗಳು  ಆದರೆ ಸೂರ್ಯ ಚಂದ್ರನ ಚಲನೆಯೂ ಸ್ವಾಭಾವಿಕವೇ ಆದರೆ ಅವುಗಳ ಚಲನೆ ಅದೇಕೆ ಸಂಚಲನೆ ತರುತ್ತದೆ. ನಾವೇಕೆ ಆ ಕ್ರಿಯೆಯಿಂದ ಈ ರೀತಿ
ಪ್ರಭಾವಿಗಳಾಗುತ್ತೇವೆ ಊಟ, ನೀರು ಬಿಟ್ಟುಬಿಡುತ್ತೇವೆ ಮನೆಯಲ್ಲಿ ಕೂಡುತ್ತೇವೆ. ಹಳ್ಳಿ ಬಿಡಿ ಈ ಹೈಟೆಕ್ ಊರಲ್ಲೂ ಯಾಕೆ ಹೀಗೆ .ಗ್ರಹಣನೋಡಿ ಡ್ಯೂಟಿಗೆ ಹೊರಟಾಗ ಎದಿರಾದದ್ದು ಖಾಲಿ ಖಾಲಿ ರಸ್ತೆಗಳು.ನಮ್ಮ ಜನ ಯಾಕೆ ಹೀಗೆ ಉತ್ತರ ನನಗಂತೂ ಗೊತ್ತಿಲ್ಲ. ಮಗಳು ಅವಳ ಗೆಳತಿಯರು ಹೇಳಿದ್ದು ಹೇಳತಿದ್ಲು ಅವಳ  ಫ್ರೆಂಡ್ಸು ಆ ಸಮಯದಲ್ಲಿ ಟಾಯ್ಲೆಟ್ ಗು ಹೋಗಲಿಲ್ಲವಂತೆ. ಅತ್ತ ತಾರಾಲಯದಲ್ಲಿ ಬಂದವರು ನಾವುಗಳು ಏನು ಬುದ್ಧಿವಂತರಲ್ಲ ಅಥವ ಏನೋ ಮಹತ್ತರವಾಗಿ ಸಾಧಿಸುತ್ತಿದ್ದೇವೆ ಎಂಬ ಹಮ್ಮೂ ಇರಲಿಲ್ಲ. ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗುವ ಸುಯೋಗವಿತ್ತು ಅದನ್ನು  ನಾವು ಉಪಯೋಗಮಾಡಿಕೊಂಡೆವು. ಅಲ್ಲಿ ಬಂದ ಜನರನ್ನು ನೋಡಿ ಕೆಮರಾ ಮರೆತುಬಂದಿದ್ದಕ್ಕೆ ಬೇಸರವಾಯಿತು .ಅಲ್ಲಿ ಸುಮಾರು ಎಂಬತ್ತೈದು ವರ್ಷದ ಅಜ್ಜಿನೂ ಇದ್ರು ಇನ್ನೊಬ್ಬ ಅಜ್ಜ ಅಲ್ಲಿದ್ದ ಹುಲ್ಲಿನಮೇಲೆ ಅಂಗಾತಾಗಿ ಮಲಗಿ ವಿಶೇಷ ಕನ್ನಡಕ ಧರಿಸಿ ನೋಡುತ್ತಿದ್ದ ಅನೇಕ ಜನ ಆ ಸೂರ್ಯನನ್ನು ಬಿಟ್ಟು ಈ ಅಜ್ಜನ ಫೋಟೋ ತಗೀತಿದ್ರು...! ಈ ವಿಶೇಷ
ಜನರ ನಡುವೆ ನಮ್ಮ  ದೇಶದ "ಶ್ರೀ ಸಾಮಾನ್ಯ" ರೂ ಸೇರಿಕೊಂಡಿದ್ರು..
ಟಿವಿಯವ್ರು ಬೇರೆಯವರ ಜೊತೆ ಮಾತಾಡಿಸೋವಾಗ ಅವರಹಿಂದೆ ನಿಲ್ಲೋದು, ಮನೆಯವ್ರಿಗೆ ಫೋನ ಮಾಡಿ ತಾನು ಟಿವಿಯಲ್ಲಿ ಬರ್ತಾ ಇರೋದನ್ನು ಹೇಳೋದು....   ಇದು ಅವರ ಸಾಹಸಗಾಥೆ...!
                  ಗ್ರಹಣ ನೋಡಿದ್ದಾಯ್ತು ಹಸಿವಾದಾಗ ಗೊಂಜಾಳ, ಐಸ್ ಕ್ರೀಮು ಹೀಗೆ ಭಕ್ಷಣೆಯೂ ಆತು. ಮನೆಯಲ್ಲಿ ಕುಳಿತವರ ಬಗ್ಗೆ ಮರುಕಪಡಬೇಕೋ ಸಹಾನುಭೂತಿ ಪಡಬೇಕೋ ಗೊತ್ತಾಗಲಿಲ್ಲ. ಒಂದು
ಯುಗಮಾನದ ಕ್ಷಣಕ್ಕೆ ಸಾಕ್ಷಿಯಾದ ಬಗ್ಗೆ ಹೆಮ್ಮೆ ಅನಿಸಿತು.ಇದು ಅವರವರ ಭಾವನೆಗಳಿಗೆ ಸಂಭಂದಿಸಿದ್ದು ಕೆಲವರು ಭಾವನೆ ಅದುಮಿ ಬದುಕುತ್ತಾರೆ ನನ್ನಂತಹ "ಧರ್ಮಲಂಡ"ರು ಅವನ್ನು ಹೊರಗೆಡವುತ್ತಾರೆ. ಇದು ನನ್ನ ನಿಲುವು ಯಾರು ಒಪ್ಪಲಿ ಬಿಡಲಿ ಅಲ್ವಾ? ಬೇಸರ ಆಗೋದು ಒಂದೇ
ನಾನಾ ಕಾರಣಗಳಿಗೆ, ಐದೂಬೆರಳಿಗೆ ಉಂಗುರ ಹಾಕುವ ಜೋತಿಷಿಗಳಿಗೆ ಅಂಜಿ ಮನೆಯಲ್ಲಿ ಕುಳಿತವರು ಈ ಒಂದು ಸೋಜಿಗದಿಂದ ವಂಚಿತರಾದರು ಎಂದು.
                  ನನ್ನದೇ ಒಂದು ಹನಿ ಯಿದೆ....

ಭಾವನೆಗಳಿಗೇಕೆ  ಸೀಮಿತ
ಚೌಕಟ್ಟಿನ ಹಂದರ
ರೆಕ್ಕೆ ಬಿಚ್ಚಿ ಹಾರಲಿ ಹಕ್ಕಿ
ಸ್ವಚ್ಛಂದವೇ  ಅದರ ಸಿಂಗಾರ..