ಬಾನ ಹಕ್ಕಿ
ಕವನ
ಬೆಳ್ಳಿ ಚುಕ್ಕಿ ಬಾನ ಹಕ್ಕಿ
ತೇಲುತ ಆ ರಂಗನು ನೆಕ್ಕಿ
ಭಾನು ಕೆಂಪಾದ ನಕ್ಕಿ
ಕಿರಣಗಳು ನದಿಯ ಹೊಕ್ಕಿ
ನಿಂತಿವೆ ಬೇಟೆಯ ಕಾದು
ಮೀನು ಬರುವುದೆ ಹಾದು
ಹಕ್ಕಿಯ ಬಲೆಯ ಜಾದು
ಛೇದಿಸಿ ಹೋದವು ಕದ್ದು
ಅಲೆಯು ಹೊರಳಿದೆ ಸುತ್ತ
ಹರಿವಿನ ಪಯಣವೆತ್ತ
ಜಾರಿಸಿ ಹಕ್ಕಿಯು ಕತ್ತ
ಸಿಗದ ಬೇಟೆಯತ್ತ ಚಿತ್ತ
***
ವರುಣ
ಮೇಘ ನಿನಾದ ಆನಂದ
ಮುತ್ತ ಹನಿಯಲಿ ಮಿಂದ
ಧರಣಿ ದೇವಿಯ ಅಂದ
ಮನ್ಮಥ ರಥವೇರಿ ಬಂದ
ಹರಿದು ನೀರು ದೂರ
ಸಾಗರ ಸೇರುವ ಕಾತರ
ಕಾಗದ ದೋಣಿಗೂ ಆತುರ
ಸೇರಲು ಆಚೆಯ ತೀರ
ಗಿಡುಗಿನ ಸದ್ದು ಜೋರು
ಅಲ್ಲಾಡಿತು ಆಲದ ಬೇರು
ತುಂಬಿದೆ ಹೊಳೆಯಲಿ ನೀರು
ಮಳೆಯೆ ನಿಲ್ಲಿಸಿನ್ನು ಕಾರುಬಾರು
-ನಿರಂಜನ ಕೆ ನಾಯಕ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್