ಬಾಳಿಗೊಂದು ಚಿಂತನೆ (24) - ಸುವಿಚಾರ ದೀಪ್ತಿ

ಬಾಳಿಗೊಂದು ಚಿಂತನೆ (24) - ಸುವಿಚಾರ ದೀಪ್ತಿ

ಪಿತಾ ಯಥಾ ರಕ್ಷತಿ ಪುತ್ರಮೀಶ

ಜಗತ್ಪಿತಾ ತ್ವಂ  ಜಗತಃ ಸಹಾಯಃ/

ಕೃತಾಪರಾಧಂ ತವ ಸರ್ವಕಾಲೇ

ಕೃಪಾನಿಧೇ ಮಾಂ ಶಿವ ಪಾಹಿ ಶಂಭೋ//

ಹೇ ಪರಶಿವನೇ! ಸಕಲಜೀವಜಗತ್ತಿನ ತಂದೆಯೇ, ಜಗತ್ತಿನ ರಕ್ಷಕನೇ ಆಗಿರುವಿ. ತಂದೆಯು ತನ್ನ ಮಗನನ್ನು, ಮಕ್ಕಳನ್ನು ಹೇಗೆ ಪೊರೆಯುತ್ತಾನೋ ಹಾಗೆ ನೀನು ರಕ್ಷಕನು. ನನ್ನ ಸಕಲ ಅಪರಾಧಗಳನ್ನು ಮನ್ನಿಸಿ,ಕಾಪಾಡು.

***

ಭಗವಂತ ನಿರಾಕಾರ, ನಿರ್ಗುಣಿ, ಮೌನಿ. ಯಾವತ್ತಾದರೂ * ನನ್ನನ್ನು ಭಜಿಸಿ, ಪೂಜಿಸಿ, ಆರಾಧಿಸಿ, ನನಗೇ ಶರಣಾಗಿ * ಎಂದು ಹೇಳಿಲ್ಲ. ಆದರೆ ನಾವು ಅದನ್ನೇ ಮಾಡುತ್ತೇವೆ. ಹಿರಿಯರಿಂದ ಬಂದ ಸಂಸ್ಕೃತಿ, ಸಂಪ್ರದಾಯಗಳ ಆಚರಣೆಯನ್ನು ನಾವೂ ಮಾಡುತ್ತಾ ಹೋಗುತ್ತೇವೆ. ದೇವರನ್ನು ಧ್ಯಾನಿಸಿ, ಪೂಜಿಸದಿದ್ದರೆ ನಮಗೆ ಕಷ್ಟಗಳು ಬರುತ್ತವೆ ಎಂದು ಹೆದರಿಯೂ ಮಾಡಬಹುದು.

ಕೈಮೀರಿ, ತಡೆಯಲಾಗದ ಕಷ್ಟ ಎದುರಾದಾಗ, ಅದನ್ನು ಎದುರಿಸುವ ಶಕ್ತಿ ಮತ್ತು ಯುಕ್ತಿ ನಮಗೆ ಬೇಕು. ಹಾಗಾದರೆ ದೇವರಲ್ಲಿ ಮೊರೆ ಬೇಡ ಎಂದಾದರೆ ಏನು ಮಾಡೋಣ? ಅದಕ್ಕಾಗಿಯೇ ನಮ್ಮ ನಮ್ಮ *ಅಂತರಾತ್ಮದೊಳಗೆ* ಹೊಕ್ಕು ನಾವು ಮಾತನಾಡಬಹುದು. ಅನು ಸಂಧಾನ ನಡೆಸಬಹುದು. ದೇವರೇ ಹೀಗೆ ಕಷ್ಟ ನೀಡಿದ ಅಂತ ದೈವನಿಂದನೆ ಮಾಡಬಾರದು. ಅಂತರಾತ್ಮದೊಳಗೇ ಭಗವಂತನಿದ್ದಾನೆ ಎಂಬ ನಂಬಿಕೆ ಮತ್ತು ವಿಶ್ವಾಸ ಬೇಕು. ದುಃಖ ಬಂದಾಗ ಮಾತ್ರ ಪ್ರಾರ್ಥನೆ ಯಾಕೆ? ಸಂತೋಷ, ಖುಷಿಇದ್ದಾಗಲೂ ಪ್ರಾರ್ಥನೆ ಮಾಡಬಹುದಲ್ಲ? *ಸಂಕಟ ಬಂದಾಗ ವೆಂಕಟರಮಣ* ಬೇಡ. ಯಾವಾಗಲೂ ನಮ್ಮ ಅಂತರಾತ್ಮದೊಂದಿಗೆ ಸಂಭಾಷಣೆ ನಡೆಸೋಣ.

-ರತ್ನಾ. ಕೆ.ಭಟ್, ತಲಂಜೇರಿ

(ಆಧಾರ:ಸುವಿಚಾರ ಸುಧಾ)

ಚಿತ್ರಕೃಪೆ: ಇಂಟರ್ನೆಟ್ ತಾಣ