ಬುದ್ಧ ಬಸವ ಅಂಬೇಡ್ಕರ್
ಕವನ
ನನ್ನ ಮನೆಯ ಗೋಡೆಯಲ್ಲಿ
ನೇತಾಡುತ್ತಿದ್ದಾರೆ, ಬುದ್ಧ ಬಸವ
ಅಂಬೇಡ್ಕರ್,
ಬಂದವರೆಲ್ಲ ಕೇಳುತ್ತಾರೆ
ನೀವೂ ದಲಿತರೇನ್ರಿ ಸರ್..
ಕಂಡಾರಂಥ ಅವ್ರು
ರಸ್ತೆ ಬದಿಗೆ ಪಾರ್ಕಿನೊಳಗೆ
ದಿಕ್ಕಾರದ ಮೆರವಣಿಗೆಗೆ,
ವರ್ಷಂಪ್ರತಿ ರಜೆಗೆ
ಬಳಕೆಯಾದ ಇವರನು..
ಅಂದ ಹಾಗೆ ಬಂದ ವಿಷಯ
ಎಂದು ಹೇಳಿ ನಡೆವರು,
ನನಗೆ ವಿಷಯ ಅದಲ್ಲ..
ಇವರ ಕಂಡರೇಕೆ ಅವರು
ಮಾತಿಗಿಳಿಯುತ್ತಾರೆ..
ಹೆಸರೇಳದೆ ಕೊಸರಿಕೊಂಡು
ಬಾಗಿಲು ದಾಟುತ್ತಾರೆ..
ಅವರು ಹೆಸರನೇನು ಮರೆತಿಲ್ಲ,
ನಾಲಗೆಯಲ್ಲೆ ಇದೆ,
ಹೊಗೆ ಕಾಣಲೇ ಬೇಕಿಲ್ಲ
ಒಳಗೆ ಬೆಂಕಿ ಬಿದ್ದಿದೆ..
ಶಿವಪ್ರಸಾದ್ ಎಸ್.ಪಿ.ಎಸ್
Comments
ಉ: ಬುದ್ಧ ಬಸವ ಅಂಬೇಡ್ಕರ್
ಉ: ಬುದ್ಧ ಬಸವ ಅಂಬೇಡ್ಕರ್
In reply to ಉ: ಬುದ್ಧ ಬಸವ ಅಂಬೇಡ್ಕರ್ by makara
ಉ: ಬುದ್ಧ ಬಸವ ಅಂಬೇಡ್ಕರ್
In reply to ಉ: ಬುದ್ಧ ಬಸವ ಅಂಬೇಡ್ಕರ್ by spsshivaprasad
ಉ: ಬುದ್ಧ ಬಸವ ಅಂಬೇಡ್ಕರ್
In reply to ಉ: ಬುದ್ಧ ಬಸವ ಅಂಬೇಡ್ಕರ್ by makara
ಉ: ಬುದ್ಧ ಬಸವ ಅಂಬೇಡ್ಕರ್
In reply to ಉ: ಬುದ್ಧ ಬಸವ ಅಂಬೇಡ್ಕರ್ by makara
ಉ: ಬುದ್ಧ ಬಸವ ಅಂಬೇಡ್ಕರ್
ಉ: ಬುದ್ಧ ಬಸವ ಅಂಬೇಡ್ಕರ್
In reply to ಉ: ಬುದ್ಧ ಬಸವ ಅಂಬೇಡ್ಕರ್ by donavenkatesha
ಉ: ಬುದ್ಧ ಬಸವ ಅಂಬೇಡ್ಕರ್
In reply to ಉ: ಬುದ್ಧ ಬಸವ ಅಂಬೇಡ್ಕರ್ by dayanandac
ಉ: ಬುದ್ಧ ಬಸವ ಅಂಬೇಡ್ಕರ್
In reply to ಉ: ಬುದ್ಧ ಬಸವ ಅಂಬೇಡ್ಕರ್ by donavenkatesha
ಉ: ಬುದ್ಧ ಬಸವ ಅಂಬೇಡ್ಕರ್