ಬುದ್ಧ ಮತ್ತು ಬೆಂಕಿ- ಝೆನ್ ಕಥೆ
ಬರಹ
ಸಂಚಾರದಲ್ಲಿದ್ದ ಸನ್ಯಾಸಿ ಒಂದು ಬೌದ್ಧ ಮಂದಿರದಲ್ಲಿ ರಾತ್ರಿಗೆಂದು ಉಳಿದುಕೊಳ್ಳುತ್ತಾನೆ. ಚಳಿ ಬಹಳ ಇತ್ತು. ಅಗ್ಗಿಷ್ಟಿಕೆ ಬೆಂಕಿ ಆರತೊಡಗಿತ್ತು. ಅಲ್ಲಿ ಕಟ್ಟಿಗೆಯೂ ಇರಲಿಲ್ಲ . ಸನ್ಯಾಸಿ ಅಲ್ಲಿದ್ದ ಬುದ್ಧನ ಕಟ್ಟಿಗೆಯ ಮೂರ್ತಿಯೊಂದನ್ನು ತೆಗೆದುಕೊಂಡು ಬೆಂಕಿಗೆ ಚಾಚಿದ . ಇದನ್ನು ನೋಡಿದ ಮಂದಿರದ ಪೂಜಾರಿಗೆ ಅಘಾತವಾಯಿತು. ಸನ್ಯಾಸಿ ಅದನ್ನು ಗಮನಿಸಿದ. ಒಂದು ಕಡ್ಡಿಯನ್ನು ತೆಗೆದುಕೊಂಡು ಬೆಂಕಿಯನ್ನು ಕೆದರುತ್ತ ಏನನ್ನೊ ಹುಡುಕತೊಡಗಿದ ಪೂಜಾರಿ .ಕುತೂಹಲದಿಂದ 'ಏನನ್ನು ಹುಡುಕುತ್ತ ಇದ್ದೀರಿ?' ಎಂದು ಕೇಳಿದ.'ಹೌದು. ಭಗವಾನ್ ಬುದ್ದನ ಅಸ್ಥಿಗಳನ್ನು ಹುಡುಕುತ್ತ ಇದ್ದೇನೆ ' ಎಂದ. 'ಮರದ ಪ್ರತಿಮೆ ಸುಟ್ಟರೆ ಅಸ್ತಿ ಸಿಗುತ್ತದೆಯೆ?' ಎಂದು ನಕ್ಕ ಪೂಜಾರಿ . ಅದಕ್ಕೆ ಗುರು ಹೇಳಿದ. ' ಹೌದಲ್ಲವೆ? ಹಾಗಾದರೆ , ಆ ಇನ್ನೆರಡು ಮರದ ಪ್ರತಿಮೆ ಇಳಿಸಿಕೊಡು , ಚಳಿ ಹೆಚ್ಚಾಗುತ್ತಿದೆ." .