ಬೇಕಲ ಕೋಟೆ
ಕವನ
ಲೆಟರೈಟ್ ಕಲ್ಲಿಂದ ನಿರ್ಮಿತವು
ಬೇಕಲ ಕೋಟೆಯ ಸೌಂದರ್ಯವು
ಮುಖ್ಯಪ್ರಾಣನ ದೇಗುಲವು
ವೀಕ್ಷಣಾ ಭವ್ಯ ಗೋಪುರವು
ಐತಿಹಾಸಿಕ ಸುಂದರ ತಾಣವು
ಸುತ್ತಾ ಮುತ್ತ ಗೋಪುರದ ಸೊಬಗು
ಗೋಪುರದಲ್ಲಿ ನಿಂತು ವೀಕ್ಷಿಸೋ ಸೊಬಗು
ಅರಬೀ ಸಮುದ್ರ ಕೋಟೆಸುತ್ತಿದ ಸೊಬಗು
ತೆರೆ ಅಪ್ಪಿ ಮುದ್ದಾಡೊ ಸೊಬಗು
ಮುಸ್ಸಂಜೆ ಸೂರ್ಯಾಸ್ತಮಾನದ ಸೊಬಗು
ಹಚ್ಚ ಹಸಿರಿಂದ ಕಂಗೊಳಿಸೋ ಚಂದ
ಅಗಾಧ ಸೌಂದರ್ಯ ಕಣ್ಣಿಗಾನಂದ
ಭೋರ್ಗರೆತವು ಸಮುದ್ರದಿಂದ
ತೆರೆಗಳ ಸಪ್ಪಳದಿಂದ ನೋಡಲಾನಂದ
ಅದ್ಭುತ ರೋಮಾಂಚನ ಆನಂದವೊ ಆನಂದ
-ಸುಭಾಷಿಣಿ ಚಂದ್ರ, ಕಾಸರಗೋಡು
ಚಿತ್ರ್