ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವುದು

ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವುದು

Comments

ಬರಹ

ಸ್ನೇಹಿತರೇ ನೀವು ಬ್ಯಾಂಕುಗಳಲ್ಲಿ ವ್ಯವಹರಿಸುವ ಮುನ್ನ ಈ ಕೆಳಕಂಡ ವಿಚಾರಗಳನ್ನು ಗಮನದಲ್ಲಿಡಿ.

ಕರ್ನಾಟಕದಲ್ಲಿರುವ ಯಾವುದೇ ರೀತಿಯ ಬ್ಯಾಂಕು [ಸರ್ಕಾರಿ-ಸಹಕಾರಿ-ಸಾರ್ವಜನಿಕ-ಖಾಸಗಿ]ಸಾರ್ವಜನಿಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕೆಂಬುದು ನಿರ್ವಾವಾದ. ಯಾವುದೋ ಒಂದು ಖಾಸಗಿ ಬ್ಯಾಂಕು ಅಥವ ಅದರ ಶಾಖೆ ಇದಕ್ಕೆ ಹೊರತಾಗಲು ಸಾಧ್ಯವೇ ಇಲ್ಲ.

ಕರ್ನಾಟಕದ ಯಾವುದೇ ಬ್ಯಾಂಕಿನ ಶಾಖಾ ವಿವರಗಳು, ಸೂಚನಾ ಫಲಕಗಳು, ಕನ್ನಡದಲ್ಲಿ ವ್ಯವಹಾರ ಮಾಡ ಬಯಸುವ ಗ್ರಾಹಕರಿಗೆ ಅಲ್ಲಿನ ಅರ್ಜಿ,ನಮೂನೆ ಕನ್ನಡದಲ್ಲಿ ದೊರಕಿಸಿಕೊಡಬೇಕು ಎಂಬ ನಿಯಮವಿದೆ. ಆದರೆ ಸಮಸ್ಯೆಯ ಮೂಲ ಇರುವುದು ನಮ್ಮಲ್ಲೇ! ಕನ್ನಡ ಗ್ರಾಹಕರಾಗಿ ನಾವು ಬ್ಯಾಂಕಿನಲ್ಲಿ ವ್ಯವಹರಿಸದೇ ಇರುವುದು! ಇದನ್ನು ದುರುಪಯೋಗ ಮಾಡಿಕೊಂಡು ಖಾಸಗಿ ಹಾಗು ಎಲ್ಲಾ ಬ್ಯಾಂಕುಗಳು ಕನ್ನಡದ ಬಗ್ಗೆ ಅಸಡ್ಡೆ ದೋರಣೆ ತಳೆದಿವೆ. ನಾವು [ಕನ್ನಡ ಗ್ರಾಹಕನಾಗಿ]ಎಚ್ಚೆತ್ತುಕೊಂಡು ಮುಂದೆ ನಾವು [ಕನ್ನಡ ಗ್ರಾಹಕನಾಗಿ]ಯಾವುದೇ ಬ್ಯಾಂಕಿನಲ್ಲಿ ಯಾವುದೇ ರೀತಿಯ ವ್ಯವಹಾರ ಮಾಡುವಾಗ ಕನಿಷ್ಟ ಕೆಳಗಿನ ವಿಷಯ ನೆನಪಿಟ್ಟುಕೊಂಡು ಆಚರಣೆಗೆ ತಂದರೆ - ನಮ್ಮ ಸತತ [ಕನ್ನಡ ಗ್ರಾಹಕರ] ಒತ್ತಾಯದಿಂದಾಗಿ ಕನ್ನಡಕ್ಕೆ ಮನ್ನಣೆ ದೊರಕುವುದರಲ್ಲಿ / ಬ್ಯಾಂಕುಗಳು ಕನ್ನಡಮಯವಾಗುವುದರಲ್ಲಿ ಸಂದೇಹವೇ ಇಲ್ಲ. ನಾವು [ಗ್ರಾಹಕರು]ಜಾಗೃತರಾಗಬೇಕು ಮತ್ತು ನಮ್ಮ [ಕನ್ನಡ ಗ್ರಾಹಕನ] ಹಕ್ಕಿಗೆ ಒತ್ತಾಯ ಮಾಡಬೇಕಿದೆ.

೧] ಯಾವುದೇ ಬ್ಯಾಂಕಿನಿಂದ ನಿಮಗೆ ದೂರವಾಣಿ ಕರೆ ಬಂದಲ್ಲಿ ಅವರು ಕನ್ನಡದಲ್ಲಿ ಮಾತನಾಡಲು ತಿಳಿಸಿ.
೨] ಯಾವುದೇ ಬ್ಯಾಂಕಿಗೆ ನೀವು ಕರೆ ಮಾಡಬೇಕಾಗಿ ಬಂದಲ್ಲಿ ಕನ್ನಡ ಮಾತನಾಡುವ ಅಧಿಕಾರಿಗಾಗಿ ಭೇಡಿಕೆ ಸಲ್ಲಿಸಿ
೩] ಕರೆ ಕೇಂದ್ರಗಳಿಂದ ಮಾತನಾಡಬಯಸುವ ಅಧಿಕಾರಿಗಳಿಗೆ ಕನ್ನಡ ಮಾತನಾಡಲು ತಾಕೀತು ಮಾಡಿ.
೪] ಬ್ಯಾಂಕಿನಲ್ಲಿ ಖಾತೆ ತೆರೆಯಬೇಕಾದಾಗ ಕನ್ನಡದ ಅರ್ಜಿ ಬೇಕೆನ್ನಿ. ಅರ್ಜಿಯನ್ನು ಕನ್ನಡದಲ್ಲೇ ಭರ್ತಿ ಮಾಡಿ
೫] ಬ್ಯಾಂಕಿನ ಯಾವುದೇ ವ್ಯವಹಾರವಿರಲಿ [ಹೊಸ ಖಾತೆ ತೆರೆಯುವುದು, ಕ್ರೆಡಿಟ್ ಕಾರ್ಡಿಗೆ ಅರ್ಜಿ ಬರೆಯುವುದು, ಮನೆ ಸಾಲ, ವಾಹನ ಸಾಲ, ದುರಸ್ತಿ ಸಾಲ, ಪೀಠೋಪಕರಣ ಸಾಲ]ಅರ್ಜಿ ಕನ್ನಡದಲ್ಲೇ ಬರೆಯಿರಿ, ಸಹಿ ಕನ್ನಡದಲ್ಲಿ ಮಾಡಿ. ಸಂಬಂಧ ಪಟ್ಟ ಅಧಿಕಾರಿಯೊಡನೆ ಕನ್ನಡದಲ್ಲೇ ಮಾತನಾಡಿ
೬] ಬ್ಯಾಂಕಿಗೆ ಹಣ ತುಂಬುವ-ಹಣ ತೆಗೆಯುವ ಚಲನ್ನು [ನಮೂನೆ] ಕನ್ನಡದಲ್ಲೇ ಬರೆಯಿರಿ [ಅಂಕಿ ಸಮೇತ]
೭] ಚೆಕ್ಕುಗಳನ್ನು ಕನ್ನಡದಲ್ಲೇ ಬರೆದು ವಿತರಿಸಿ
೮] ಸ್ವಹನೀಯ [ಸ್ವಯಂಚಾಲಿತ ಹಣ ನೀಡುವ ಯಂತ್ರ] ಏಟಿಎಂ ಉಪಯೋಗಿಸುವಾಗ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ
೯] ಬ್ಯಾಂಕಿಗೆ ನೀವು ನೀಡುವ ಯಾವುದೇ ದೂರು-ಸಲಹೆಗಳನ್ನು ಕನ್ನಡದಲ್ಲೇ ಬರೆದು ಕೊಡಿ.
೧೦] ನಮಗೆ ಇಂಗ್ಲೀಷ್ ಬರಲ್ಲ ಎನ್ನ ಬೇಕಾಗಿಲ್ಲ! ನಾವು ಕನ್ನಡದಲ್ಲಿ ವ್ಯವಹರಿಸಬಯಸುವೆವೆಂದು ಮನವರಿಕೆ ಮಾಡಿ.

ಕನ್ನಡ ಗ್ರಾಹಕನ ಹಕ್ಕಿಗಾಗಿ ನಿಮ್ಮದೂ ಧನಿ ಸೇರಿಸಿ..........ಸೇವೆ ನಿರಾಕರಿಸಿದವರ ವಿರುದ್ಧ ಪ್ರತಿಭಟಿಸಿ, ಸಂಬಧ ಪಟ್ಟ ಇಲಾಖೆ, ಅಧಿಕಾರಿಗಳಿಗೆ ದೂರು ಸಲ್ಲಿಸಿ........

ಇದನ್ನು ಇತರ ಗುಂಪುಗಳಿಗೂ ರವಾನಿಸಿ.

- ನಂದನ್

ಮಾಹಿತಿ : ಚಂ.ಶೇ. ಕಲ್ಯಾಣ ರಾಮನ್,
ಬೆಂಗಳೂರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet