ಬ್ಯಾಂಗ್...ಬ್ಯಾಂಗ್ ಬಹದ್ದೂರ್..!
ಅದ್ಭುತ ತಾಣಗಳಲ್ಲಿ ಚಿತ್ರೀಕರಣ.ಹೃತಿಕ್ ಬಾಡಿನೇ ರೋಚಕ. ಹುಡುಗಿಯರಿಗೆ ರೋಮಾಂಚನ. ಆಕ್ಷನ್ಭರಿತ ಬ್ಯಾಂಗ್ ಬ್ಯಾಂಗ್. ಬ್ಯಾಂಗ್ ಬ್ಯಾಂಗ್ಗೆ ರೋಚಕ ಸಾಹಸಗಳೇ ಜೀವಾಳ. ಕಥೆಯನ್ನ ಗೆಸ್ ಮಾಡಬಹುದು. ಕತ್ರಿನಾ ಏನು ಅಲ್ಲ. ಹೃತಿಕೇ ಇಲ್ಲಿ ಎಲ್ಲ...
------
ಬ್ಯಾಂಗ್ ಬ್ಯಾಂಗ್ ಬಹದ್ದೂರ್. ಹೃತಿಕ್ ನೋಡಿದ್ರೆ ನಿಜಕ್ಕೂ ಹೀಗೆ ಹೇಳಬೇಕು ಅನಿಸುತ್ತದೆ. ಕ್ರಿಶ್ ಸರಣಿ ಸಿನಿಮಾ ನೋಡಿದವ್ರಿಗೆ ಒಬ್ಬ ಸೂಪರ್ ಹೀರೋ ಕಾಣಿಸಿಕೊಂಡದ್ದು ನಿಜ. ಆದರೆ, ಬ್ಯಾಂಗ್..ಬ್ಯಾಂಗ್ ಒಬ್ಬ ರಫ್ ಅಂಡ್ ಟಫ್ ಹಾಲಿವುಡ್ ಹೀರೋನನ್ನ ಹೃತಿಕ್ ನಲ್ಲಿ ನೋಡಬಹುದು...
ಚಿತ್ರದ ವಿಷ್ಯಕ್ಕೆ ಬಂದ್ರೆ, ಇದು ಸೂಪರ್ ಸಿನಿಮಾ. ಬಾಲಿವುಡ್ನಲ್ಲಿ ಬರದೇ ಇದ್ದರೇ. ನೈಟ್ ಅಂಡ್ ಡೇ ಹೆಸ್ರಿನಲ್ಲಿ ಒಂದು ಸಿನಿಮಾ ಬಂದಿತ್ತು. 2010 ರಲ್ಲಿ. ಟಾಮ್ ಕ್ರೂಸ್ ಮತ್ತು ಕೆಮರಾನ್ ಡಯಾಸ್ ಮುಖ್ಯಭೂಮಿಕೆಯಲ್ಲಿದ್ದರು.
ಇದು ಬಂದು ಈಗ ಕಳೆದ ನಾಲ್ಕು ವರ್ಷವೇ ಕಳೆದು ಹೋಗಿವೆ. ಈಗ ನಿರ್ದೇಶಕ ಸಿದ್ಧಾರ್ಥ ಆನಂದ್, ಅದೇ ಕತೆಯನ್ನ ಕದಿಯದೇ, ರಿಮೇಕ್ ಹಕ್ಕು ಪಡೆದುಕೊಂಡು ಅಧಿಕೃತವಾಗಿ ಚಿತ್ರ ಮಾಡಿದ್ದಾರೆ. ನೈಟ್ ಅಂಡ್ ಡೇ ಚಿತ್ರದ ರಿಮೇಕ್ ಈ ಬ್ಯಾಂಗ್ ಬ್ಯಾಂಗ್ ಅಂತ ಹೇಳುತ್ತಲೇ ಚಿತ್ರ ಪ್ರಚಾರವನ್ನೂ ಮಾಡಲಾಗಿದೆ.
ಚಿತ್ರವನ್ನ ನೋಡ್ತಾ ಹೋದ್ರೆ, ಇಂಗ್ಲೀಷ್ ಚಿತ್ರದ ಅನುಭವ ಕಂಡಿತ ಆಗುತ್ತದೆ. 140 ಕೋಟಿ ವೆಚ್ಚದ ಚಿತ್ರವಿದು ಅಂತ ಏನ್ ಹೇಳ್ತಾ ಬಂದಿದೆಯೋ ಸಿನಿಮಾ ತಂಡ. ಅದು ಸತ್ಯ ಅನ್ನಿಸೋವಷ್ಟು ಮೇಕಿಂಗ್ ಇದೆ. ವಿಶ್ವದ ಅತ್ಯದ್ಭುತ ತಾಣಗಳಲ್ಲಿ ಚಿತ್ರೀಕರಣ ಮಾಡಿರೊದ್ರಿಂದ, ದೇಶ ಸುತ್ತೋ ಮಂದಿಗೆ ಇದು ಒಂದು ಗೈಡ್ ಥರ ಕಾಣಿಸುತ್ತದೆ. ಆಕರ್ಷಿಸುತ್ತದೆ...
ಬ್ಯಾಂಗ್ ಬ್ಯಾಂಗ್ ಕತೆ ಸಿಂಪಲ್ ಆಗಿದೆ. ಆದರೆ, ಹೇಳಿರೋ ರೀತಿ ಸೂಪರ್. ಬೇಹುಗಾರನೊಬ್ಬನ ಕತೆಯಿದು.ಲಂಡನ್ ನಲ್ಲಿರೋ ಕೋಹಿನೂರ್ ವಜ್ರವನ್ನ ಕದ್ದ ಕಳ್ಳನ ಸುತ್ತವೇ ಚಿತ್ರವಿದ್ದರೂ, ನೋಡುಗರಿಗೂ ಮತ್ತು ಜೊತೇಗೇನೆ ಇರೋ ನಾಯಕಿ ಕತ್ರಿನಾಗೂ, ನಿಜಕ್ಕೂ ಹೃತಿಕ್ ಯಾರು ಎಂಬ ಪ್ರಶ್ನೆ ಕಾಡುತ್ತದೆ. ಆ ಪ್ರಶ್ನೆಗೆ ಉತ್ತರವಾಗಿ ಕೊನೆಯಲ್ಲಿ ಒಂದು ಸಿಂಪಲ್ ಸ್ಟೋರಿ ಮನಸ್ಸಿನಲ್ಲಿ ಇಳಿಯುತ್ತದೆ..
ಚಿತ್ರದ ತುಂಬೆಲ್ಲ ಇರೋದು ಆಕ್ಷನ್. ಆಕ್ಷನ್ಗೆ ತಕ್ಕನಾಗಿಯೇ ಹೃತಿಕ್ ಹುರಿಗೊಳಿಸಿದ ದೇಹಸಿರಿ ಹುಡುಗಿಯರ ಹೃದಯ ಕದಿಯುತ್ತದೆ. ಕತ್ರಿನಾ ತುಂಬಾ ಚೆಂದಗೆ ಕಾಣಿಸುತ್ತಲೇ, ಥಿಯೇಟರ್ ನಲ್ಲಿ ಕುಳಿತ ಯುವಕರ ಹೃಯದವನ್ನ ಬೆಚ್ಚಗೆ ಮಾಡುತ್ತಾರೆ. ಹೃತಿಕ್ ಶರ್ಟ್ ಲೆಸ್ ಆದಾಗ ಹುಡುಗಿಯರು ಕೂಗಿದರೇ. ಬಿಕಿನಿಯಲ್ಲಿ ಕತ್ರಿನಾ ಬಂದಾಗ, ಹುಡುಗರ ಎದೆ ಗರಂ ಆಗುತ್ತದೆ.ಹಂಗಿದೆ ಬ್ಯಾಂಗ್ ಬ್ಯಾಂಗ್....
ಎಲ್ಲ ಚಿತ್ರದಲ್ಲಿ ಇದ್ದ ಹಾಗೇ, ಇಲ್ಲೂ ಕೆಲವು ನ್ಯೂನ್ಯತೆಗಳಿವೆ. ಹೃತಿಕ್ ಗೆ ಗುಂಡು ಬಿದ್ದರೂ ಕೊಂಚವೂ ನರ್ವಸ್ ಆಗದೇನೆ, ದೇಹದಲ್ಲಿ ಹೊಕ್ಕ ಗುಂಡನ್ನ ತೆಗೆದು, ತಾನೇ ಆ ಜಾಗಕ್ಕೆ ಸ್ಟಿಚ್ ಹಾಗುತ್ತಾನೆ. ಇದು ಬಿಟ್ಟರೇ, ಚಿತ್ರದ ವಿಲನ್ ಡ್ಯಾನಿ, ಬೇಗೆ ಸಾಯೋದಿಲ್ಲ. ಎಂದಿನ ಹಿಂದಿನ ಚಿತ್ರಗಳ ಹಾಗೆ, ಬೆಂಕಿಯಲ್ಲಿ ಬಿದ್ದ ಖಳನಾಯಕ ಮತ್ತೆ ಅಟ್ಯಾಕ್ ಮಾಡುತ್ತಾನೆ..
ಚಿತ್ರದ ಕತೆ ಮತ್ತು ನಿರೂಪನೆ ವಿಷ್ಯಕ್ಕೆ ಬಂದ್ರೆ, ನೈಟ್ ಅಂಡ್ ಡೇ ಇನ್ನೂ ರೋಚಕ ಅಂತ ಹೇಳೊರು ಸಿಕ್ತಾರೆ. ಬಾಲಿವುಡ್ ಸಿನಿಮಾ ಇಷ್ಟಪಡೋ ಮಂದಿಗೆ ಇದು ಸೂಪರ್ ಹಾಲಿವುಡ್ ಟಚ್ ಇರೋ ಚಿತ್ರ ಅನಿಸಿಬಿಡುತ್ತದೆ.ಆದರೆ, ಮೂಲ ಕತೆಯನ್ನ ಬಿಡದೇನೆ, ಚಿತ್ರವನ್ನ ಹಾಲಿವುಡ್ ಮಟ್ಟದಲ್ಲಿ, ಬಾಲಿವುಡ್ ಚಿತ್ರ ಪ್ರೇಮಿಗಳಿಗೆ ಕೊಡಲಾಗಿದೆ. ಹೃತಿಕ್ ಮತ್ತು ಕತ್ರಿನಾಗೋಸ್ಕರ ಥಿಯೇಟರ್ಗೆ ಒಮ್ಮೆ ವಿಜಿಟ್ ಕೊಟ್ಟರೂ ಮೋಸವಿಲ್ಲ.ಹಂಗೇನೆ ಇದೆ ಬ್ಯಾಂಗ್..ಬ್ಯಾಂಗ್..
-ರೇವನ್. ಪಿ.ಜೇವೂರ್
Comments
ಉ: ಬ್ಯಾಂಗ್...ಬ್ಯಾಂಗ್ ಬಹದ್ದೂರ್..!
"ಬ್ಯಾಂಗ್ ಬ್ಯಾಂಗ್" ಹೆಸರೇ ಸೂಚಿಸುವಂತೆ ಪೂರ್ತಿ ಆಕ್ಷನ್ ಪ್ಯಾಕಡ್. ಮೈ ಜುಂ ಅನ್ನಿಸುವ ಸ್ಟಂಟ್‌ಗಳು. ಸುಂದರ ಲೊಕೇಶನ್‌ಗಳು. ಜತೆಗೆ ಹೃತಿಕ್-ಕತ್ರೀನಾ ಜೋಡಿ! ಪತ್ರಿಕೆಗಳ ವಿಮರ್ಶೆ/ಸ್ಟಾರ್‌ಗಳ ಬಗ್ಗೆ ಚಿಂತಿಸದೇ ನೋಡಿ..Uff..
In reply to ಉ: ಬ್ಯಾಂಗ್...ಬ್ಯಾಂಗ್ ಬಹದ್ದೂರ್..! by ಗಣೇಶ
ಉ: ಬ್ಯಾಂಗ್...ಬ್ಯಾಂಗ್ ಬಹದ್ದೂರ್..!
ಮೂಲ ಚಿತ್ರವನ್ನು ಕೆಲ ವರ್ಷಗಳ ಹಿಂದೆ ಹಿಂದಿಯಲ್ಲಿ (ಹಿಂದಿ ಡಬ್ )ನೋಡಿದ್ದೆ .. ಟಾಮ್ ಕ್ರೂಸ್ ಮತ್ತು ಕ್ಯಾಮೆರೂನ್ ಡಯಾಜ಼್ ಸದಾ ನನ್ನ ಮೆಚ್ಚಿನ ನಟ ನಟಿಯರು ...
ಇದರ ರೀಮೇಕ್ ಹಿಂದಿಯಲ್ಲಿ ಹೃತಿಕ್ ಮತ್ತು ಕತ್ರೀನಾ ನಟನೆಯಲ್ಲಿ ಬರಲಿದೆ ಎಂದಾಗ -ಅದರ ಕಥೆ ಹೇಗೆ ಮಾಡಬಹುದು ಎಂದು ಯೋಚಿಸುತ್ತಿದ್ದೆ ,,ಕಥೆ ಚಿತ್ರ ಕಥೆ ಸ್ವಲ್ಪ ಚೇಂಜ್ ಮಾಡಿ ಕೆಲ ಹೆಚ್ಚಿನ ಸನ್ನಿವೇಶ್ಗಳನ್ನು ಸೇರಿಸಿ ಬಾಲಿವುಡ್ ರೀತಿಯಲ್ಲಿ ಹಾಲಿವುಡ್ ಯಾಕ್ಚನ್ ಚಿತ್ರ ಮಾಡಿರುವರು ...ಕಥೆ ಚಿತ್ರ ಕಥೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಎರಡೂವರೆ ಗಂಟೆ ಕಳೆಯುವ ಹಾಗಿದ್ದರೆ -ಹೃತಿಕ್ ಟೋನ್ಡ್ ಬಾಡಿ ಕತ್ರೀನಾ ಹೊಸ ನಟನೆ ಬೇಕಿದ್ದರೆ ಈಗಲೇ ಹೊರಡಿ ..ನೋಡಿ ಖುಷಿ ಪಡಿ ...!! ಈ ಚಿತ್ರದ ವಿಮರ್ಶೆಗಳನ್ನು ಓದಿದಾಗ ಬಹುತೇಕ ಜನ ಇದನ್ನು ಮೂಲ ಚಿತ್ರದೊಂದಿಗೆ ಹೋಲಿಸಿ ಇದು ಅತಿ ಕೆಟ್ಟದಾಗಿದೆ ಎಂದು ಬರೆದಿರುವರು ...ಆದರೆ ಬೇರೆ ನಿರ್ದೇಶ್‌ಕಾರ ಹಾಗೆ (ಭಟ್ ಕ್ಯಾಂಪ್- ಬರ್ಮಾವಾಲ ಸಹೋದರರು ) ಕದ್ದು ಭಟ್ಟಿ ಇಳಿಸದೆ ಹಾಲಿವುಡ್‌ನ ಫ್ಯಾಕ್ಸ್ ಸ್ಟಾರ್ ಸ್ಟುಡಿಒದವರೊಂದಿಗೆ ನ್ಯಾಯವಾದ ರೀತಿಯಲ್ಲಿ ಚಿತ್ರ ನಿರ್ಮಿಸಿರುವರು.. ಎರಡು ಸನ್ನಿವೇಶಗಳಲ್ಲಿ ಹೃತಿಕ್ ಬಟ್ಟೆ ಬರೆ ವೇಷ ಭೂಷಣ ನೋಡಿದಾಗ (ಬಾಂಡ್ ತರಹದ ಟೈ -ಸೂಟ್ ನಲ್ಲಿ ) ಜೇಮ್ಸ್ ಬಾಂಡ್ ಪಾತ್ರಕ್ಕೆ ಅತಿ ಹೆಚ್ಚು ಸೂಟ್ ಆಗುವ ನಟ ಅನ್ನಿಸಿತು ...
ನೇರ ನಿಷ್ಟ ವಿಮರ್ಶೆ
ಶುಭವಾಗಲಿ
ನನ್ನಿ
\|/