ಬ್ರೆಡ್ ಆಲೂಗೆಡ್ಡೆ ರೋಲ್ಸ್

ಬ್ರೆಡ್ ಆಲೂಗೆಡ್ಡೆ ರೋಲ್ಸ್

ಬೇಕಿರುವ ಸಾಮಗ್ರಿ

ಬ್ರೆಡ್ ಹಾಳೆಗಳು ೪, ಬೇಯಿಸಿ ಹುಡಿ ಮಾಡಿದ ಆಲೂಗೆಡ್ಡೆ ೧ ಕಾಲು ಕಪ್, ಬೇಯಿಸಿದ ಹಸಿ ಬಟಾಣಿ ಕಾಲು ಕಪ್, ಜೀರಿಗೆ ಕಾಲು ಚಮಚ, ಮೆಣಸಿನ ಹುಡಿ ಅರ್ಧ ಚಮಚ, ಆಮ್ ಚೂರ್ ಹುಡಿ ಅರ್ಧ ಚಮಚ, ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ ೧ ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು ೧ ಚಮಚ, ಶುಂಠಿ ತುರಿ ೧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

 

ತಯಾರಿಸುವ ವಿಧಾನ

ಬೇಯಿಸಿ ಮಸೆದ ಆಲೂಗೆಡ್ಡೆ (ಬಟಾಟೆ), ಬಟಾಣಿ, ಜೀರಿಗೆ, ಮೆಣಸಿನ ಹುಡಿ, ಆಮ್ ಚೂರು ಹುಡಿ, ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಉಪ್ಪು ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ (ಸ್ಲೈಸ್) ಮೇಲೆ ಸ್ವಲ್ಪ ನೀರು ಚಿಮುಕಿಸಿ ಎರಡು ಅಂಗೈಗಳ ಮಧ್ಯೆ ಇರಿಸಿ ಅದುಮಿರಿ. ತಯಾರಿಸಿದ ಬಟಾಟೆ ಮಿಶ್ರಣವನ್ನು ಬ್ರೆಡ್ ಹಾಳೆಯ ಒಂದು ಬದಿಯಲ್ಲಿ ಉದ್ದಕ್ಕೆ ಇರಿಸಿ ಚಾಪೆ ಮಡಚುವಂತೆ ಮಡಚಿರಿ. ಬದಿಗಳನ್ನು ಅದುಮಿ ಚೆನ್ನಾಗಿ ಸೀಲ್ ಮಾಡಿ. ಹದವಾಗಿ ಕಾದ ಎಣ್ಣೆಯಲ್ಲಿ ಕೆಂಪಗೆ ಕಾಯಿಸಿ. ಬಿಸಿಬಿಸಿ ಕೊತ್ತಂಬರಿಸೊಪ್ಪಿನ ಚಟ್ನಿಯೊಂದಿಗೆ ಸವಿಯಿರಿ. ಟೊಮೆಟೋ ಕೆಚಪ್ ಜೊತೆಗೂ ಹಿತಕಾರಿ.