-ಭಗ್ನ
ಕವನ
ಒಲವು ಬಾರದಿನ್ನು ಸನಿಹ
ಇಂಗಲಿಂದೆ ಹರಯ
ಒಡೆಯಲಿಂದೆ ಹೃದಯ
ಬೂದಿಯಾಗಿ ನನ್ನ ಇರುವು
ಆಗಬೇಕು ಶೂನ್ಯ
ಹಗ್ಗವೆಂದು ಹಿಡಿದುದೆಲ್ಲ
ಆಗಬೇಕು ಹಾವು;
ಪ್ರೇಮ-ಪ್ರೀತಿ, ಕಾಮ ಭೀತಿ
ನಿದ್ದೆ, ಹಸಿವು, ನೋವು-ನಲಿವು
ಹುಟ್ಟಿದೆಡೆಯೆ ನಾಶವಾಗಿ
ಬಳಿಗೆ ಬರಲಿ ಸಾವು
ಇರಲಿ ನೆಲ, ಇರಲಿ ಜಲ
ಇರಲಿ ಬಾನು, ಇರಲಿ ಕಾನು
ಸತ್ತು ಹುಟ್ಟಿ ಮತ್ತೆ ಇಲ್ಲೆ
ಒಲವಿಗಾಗಿ ಹೃದಯದಲ್ಲಿ
ಭಾವನೆಗಳ ಹಸಿರುಮಾಡಿ
ಕಾದುಬಿಡುವೆ ಇನ್ನೊಂದು ಸಲ
-ಮಾಲು