ಭಾರತ ಪಾಕ್ ಕ್ರಿಕೆಟ್
ಕವನ
ಭಾರತ ಪಾಕ್ ಕ್ರಿಕೆಟ್
ಸೇಲಾಗಿದೆ ಲಕ್ಷಕೆ ಟಿಕೆಟ್
ಬೌಲರ್ ಗಳ ಲಕ್ಷ್ಯ ವಿಕೆಟ್
ಗೆಲುವು ಯಾರಿಗೋ ಸೀಕ್ರೆಟ್|1|
ನಮ್ಮಿಂಡಿಯಾದ ವೇಗದ ದಾಳಿಗೆ
ಥರಥರಗುಟ್ಟಲಿ ವಿಕೆಟ್
ಮಿಂಚಿನ ವೇಗದ ಕ್ಷೇತ್ರರಕ್ಷಕರೇ
ಆಗದಿರಿ ತೂತ್ ಬಕೆಟ್|2|
ಪಾಕ್ ವೇಗಿಗಳ ಯಾವ ಅಸ್ತ್ರಕೂ
ಮುಳುಗದು ತಂಡದ ನಾವೆ
ಸಾಮರ್ಥ್ಯಕ್ಕೆ ತಕ್ಕಂತಾಡಿದರೆ
ಇಲ್ಲೂ ಗೆಲುವುದು ನಾವೇ|3|
ಮಂತ್ರಿಯು ಬರುವರು, ಸಂನ್ಯಾಸಿಗಳಿರುವರು
ಏರೆಲ್ಲೆಡೆ ಮ್ಯಾಚಿನ ಜ್ವರವು
ಒತ್ತಡವ ತಾಳಿ, ತಂ ಪ್ರತಿಭೆ ತೋರಿ
ಕೊನೆವರೆಗು ಉಳಿದವಗೆ ಗೆಲುವು|4|
Comments
ಉ: ಭಾರತ ಪಾಕ್ ಕ್ರಿಕೆಟ್
In reply to ಉ: ಭಾರತ ಪಾಕ್ ಕ್ರಿಕೆಟ್ by siddhkirti
ಉ: ಭಾರತ ಪಾಕ್ ಕ್ರಿಕೆಟ್
ಉ: ಭಾರತ ಪಾಕ್ ಕ್ರಿಕೆಟ್
ಉ: ಭಾರತ ಪಾಕ್ ಕ್ರಿಕೆಟ್