ಭಾರವೆನಿಸದು ತಾಯಿಗೆ

ಭಾರವೆನಿಸದು ತಾಯಿಗೆ

ಕವನ

ಉದರದೊಳಗಡೆ ಹೊತ್ತ ಗರ್ಭವು

ಭಾರವೆನಿಸದು ತಾಯಿಗೆ

ಹೆತ್ತು ಮಡಿಲಲಿ ಇರಿಸಿ ಬೆಳೆಸಲು

ಕಷ್ಟವೆನಿಸದು ಮಾತೆಗೆ

 

ಕಂದ ಬೆಳೆಯುತ ನಡೆಯ ತೊಡಗಲು

ಎತ್ತಲಾಗದು ಸುಲಭದಿ

ಮತ್ತೆ ಕರವನು ಹಿಡಿದು ನಡೆಯಲು

ಜತನ ಗೈವಳು ಮೌನದಿ

 

ಮಾವು ಹಲಸದು ಫಲವನೀಯಲು

ಮಾಡಿಕೊಂಡಿದೆ ಸಿದ್ಧತೆ

ಕಾಲ ಕಾಲಕೆ ಫಸಲನೀವುದು

ಸಸ್ಯಕಿರುವುದು ಬಧ್ಧತೆ

 

ಹಲಸು ಮರವಿದು ಮಿಡಿಯ ಬಿಟ್ಟಿದೆ

ಮುಂದೆ ಬೆಳೆಯುವ ಹಂತದೆ

ಕೆಳಗೆ ನೀಡಿತೆ ಕೊಂಬೆಯಾಸರೆ

ಮರದ ಜಾಣ್ಮೆಯು ಇರುವುದೆ?||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್