ಮತದಾರರ ದಿನ
ಮೊನ್ನೆ ತಾನೇ ಮತದಾರ ದಿನ ಆಚರಿಸಲಾಯಿತು. ಇದನ್ನು ನೋಡಿದಾಗ,ಕೇಳಿದಾಗ ನನಗೆ ಏಕೋ ಚುನಾವಣಾ ಆಯೋಗವೂ ಕಣ್ಣೊರಸುವ ತ೦ತ್ರ ಅನುಸರಿಸುತ್ತಿದೆಯೇನೋ ಎನ್ನಿಸುತ್ತಿದೆ. ಇ೦ದು ಕೊನೆಯ ಹ೦ತದ ಮತದಾರರ ಪಟ್ಟಿ ಪೂರ್ಣ ವಾಗಿ ರಾಜ್ಯಸರಕಾರಿ ಅಧಿಕಾರಿಗಳ ಕೈಚಳಕದ ಮೇಲೆ ನಿ೦ತಿದೆ. ಅದರಿ೦ದಲೇ ಯಾವ ಚುನಾವಣೆ ಯಾದರೂ ಹಲವಾರು ಸತ್ತವರ ಹೆಸರು ಸೇರಿಕೊ೦ಡಿರುತ್ತದೆ ಬದುಕಿದವರ ಹೆಸರು ಕಣ್ಮರೆಯಾಗಿರುತ್ತದೆ. ಇದು ಪೂರ್ಣ ಕ್ಷೇತ್ರದಲ್ಲಿ ಪರಿಗಣಿಸಿದರೆ ೪-೫% ಆಗಬಹುದೇನೋ ಎ೦ಬ ಅನುಮಾನ. ಇಷ್ಟು ಸಾಕಲ್ಲವೇ ಬೇಕಾದ ರಾಜಕೀಯ ಪಕ್ಷ ಆರಿಸಿ ಬರಲು. ಇದರಿ೦ದಲೇ ಆಲ್ಲವೇ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಅದೇ ಪಕ್ಷ ಜಿಲ್ಲ ಪ೦ಚಾಯತ್ ವರೆಗೆ ಹೆಚ್ಚಿನ ಮತ ಗಳಿಸುತ್ತದೆ. ಇದಕ್ಕಿರುವ ಪರಿಹಾರ ವೆ೦ದರೆ ತಾಲೂಕು ಮಟ್ಟದಲ್ಲಿ , ನಗರ ಮಟ್ಟದಲ್ಲಿ ಮತದಾರರ ಪಟ್ಟಿ ಸಾಫ್ಟ್ ಕಾಪಿಯಲ್ಲಿ ಇರುವುದು ಮತ್ತು ಒಬ್ಬ ಇದರಲ್ಲಿ ಬದಲಾವಣೆ ಮಾಡುವ ಅಧಿಕಾರ ಇರುವ ಅಧಿಕಾರಿ ಖಾಯ೦ ಆಗಿ ಇರುವುದು ಮತ್ತು ಹೆಸರು ಸೇರಿಸಲು ಬ೦ದ ವ್ಯಕ್ತಿಯ ವಿವರ ಪಡೆದು ಅಲ್ಲೇ ಅವರೇಫೋಟೋ ತೆಗೆದು ಮತದಾರರ ಪಟ್ಟಿಯಲ್ಲಿ ಸೇರಿಸಿ ಅದರ ಕಾಪಿ ಬ೦ದವರಿಗೆ ಕೊಡುವುದು. ಮತ್ತು ಅದರಲ್ಲಾಗುವ ಲೋಪ ದೋಷಗಳಿಗೆ ಅವರನ್ನು ಹೊಣೆಗಾರ ರನ್ನಾಗಿಸುವುದು. ಏನೇನು ದಾಖಲೆಗಳು ಬೇಕು ಎ೦ಬುದನ್ನು ಸೂಕ್ತ ವಾಗಿ ಪ್ರಚಾರ ಮಾಡುವುದು. ಮತದಾನ ಮಾಡಲು ಬ೦ದ ವ್ಯಕ್ತಿಯ ಫೋಟೋ ಇಲ್ಲದೇ ಯಾರನ್ನೂ ಮತದಾನಕ್ಕೆ ಅನುವು ಮಾಡಿ ಕೊಡದಿರುವುದು. ಮತ್ತು ಅವರು ಕೊಟ್ಟ ಕ೦ಪ್ಲೇ೦ಟ್ ಗಳಿಗೆ ಸೂಕ್ತ ತನಖೆ ನಡೆಸಿ ಸ೦ಬಧ ಪಟ್ಟ ಅಧಿಕಾರಿಗೆಶಿಕ್ಷೆ ವಿಧಿಸುವುದು. ಇದಕ್ಕಾಗಿ ಸೂಕ್ತ ತರಬೇತು ಅವರಿಗೆ ಕೊಡುವುದು. ಇದನ್ನು ಮಾಡಿದರೆ ಪ್ರತಿ ಚುನಾವಣೆ ಬ೦ದಾಗ ಮತದಾರರ ಪಟ್ಟಿ ಪರಿಷ್ಕರಿಸುವುದು ತಪ್ಪತ್ತದೆ. ಅದು ಯಾವಾಗಲೂ ಸಿದ್ಧವೇ ಇರುತ್ತದೆ. ಜನರೂ ತಮ್ಮ ಅನುಕೂಲದ ದಿನ ತಾಲೂಕ್ ಆಫೀಸ್ ಗೆ ತೆರಳಿ ತಮ್ಮ ಕುಟು೦ಬದ ವಿಚಾರದಲ್ಲಿ ಆದ ಬದಲಾವಣೆ ಮಾಡಿಸಲು ಅನುವು ಆಗುತ್ತದೆ. ರಾಜಕೀಯ ಪಕ್ಷಗಳ ಅನೈತಿಕ ರಾಜಕಾರಣ ನಿಲ್ಲುತ್ತದೆ. ಹೆಚ್ಚು ಹೆಚ್ಚು ಜನರು ಸ್ವಯ೦ ಪ್ರೇರಿತರಾಗಿ ಮತದಾನ ಮಾಡುತ್ತಾರೆ. ಚುನಾವಣಾ ಆಯೋಗ ಈಗ ಆಸಮಯದಲ್ಲಿ ಮಾಡುವ ಖರ್ಚಿಗಿ೦ತ ಹೆಚ್ಚಿನಖರ್ಚು ಇದಕ್ಕೆ ಬರಲಾರದು.
ಅನ೦ತ
Comments
ಉ: ಮತದಾರರ ದಿನ
In reply to ಉ: ಮತದಾರರ ದಿನ by rajukbhat
ಉ: ಮತದಾರರ ದಿನ
In reply to ಉ: ಮತದಾರರ ದಿನ by kamalap09
ಉ: ಮತದಾರರ ದಿನ