ಮತಾಂತರ ಚರ್ಚೆ

ಮತಾಂತರ ಚರ್ಚೆ

ಬರಹ

ವಿಜಯಕರ್ನಾಟಕದಲ್ಲಿ ಬೈರಪ್ಪನವರ ಲೇಖನದೊಂದಿಗೆ ಮತಾಂತರದ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಿದ್ದು ಬಹುಶ: ಪತ್ರಿಕಾರಂಗದಲ್ಲಿ ಒಂದು ಇತಿಹಾಸ  ನಿರ್ಮಾಣವಾಗಬಹುದೇನೋ!ನಮ್ಮದೇಶದಲ್ಲಿ ಪರಕೀಯರ ಆಕ್ರಮಣಕಾಲದಿಂದಲೇ ಹಿಂದುಗಳನ್ನು ಇಸ್ಲಾಮ್ ಮತಕ್ಕೆ ಮತಾಂತರಿಸುವ ಕೆಟ್ಟ ಪರಂಪರೆ ನಡೆದು ಬಂತು. ಆದರೆ ನಮ್ಮ ಹಿಂದು ಸಮಾಜ ಎಷ್ಟು ಬಲಿಷ್ಠವಾಗಿದೆಯೆಂದರೆ ಎಷ್ಟೇ ಮತಾಂತರಗಳು ನಡೆದರೂ ಹಿಂದುಸಮಾಜವು ಗಟ್ಟಿಯಾಗೇ ಉಳಿಯಿತು.ಭಾರತದಲ್ಲಿ ಹಿಂದುಯೇತರ ಸಂಖ್ಯೆವೃದ್ಧಿಯಾಗಿರುವುದರಲ್ಲಿ ಸಂಶಯವಿಲ್ಲ.ಇದಕ್ಕೆ ಒಂದು ಪರಿಹಾರ ಬೇಕು.ಜನರು ಈಗಾಗಲೇ ಮತಾಂತರದ ವಿರುದ್ಧ ತಮ್ಮ ನಿಲುವು ಪ್ರಕಟಿಸಿದ್ದಾರೆ. ಈ ಬಗ್ಗೆ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಬೇಕು.

               ಆದರೆ ನಮ್ಮ ದೇಶದಲ್ಲಿ ನಮ್ಮ ಸಮಾಜವನ್ನು ಹೆಚ್ಚು ದುರ್ಬಲಗೊಳಿಸುತ್ತಿರುವ ವಿಷಯ ಯಾವುದು? ಯಾವುದಕ್ಕೆ ನಾವು ಹೆಚ್ಚು ಮಹತ್ವ ಕೊಡಬೇಕಿತ್ತು? ಎಂಬ ಬಗ್ಗೆ ಚಿಂತನೆ ಮಾಡಿದರೆ ಬಹುಶ: ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿ-ಪರಂಪರೆಗಳನ್ನು ಕಡೆಗಣಿಸಿ, ಪಾಶ್ಚಿಮಾತ್ಯರ ವಿಕೃತಿಗಳನ್ನೇ ಆದರ್ಶವಾಗಿ ಕಂಡು, ಅದನ್ನೇ ಅನುಸರಿಸುತ್ತಾ ಅದರಲ್ಲಿ ತಾತ್ಕಾಲಿಕ ಸಂತೋಶವನ್ನು ಅನುಭವಿಸುತ್ತಾ, ನಾವು ಶಾಶ್ವತವಾಗಿ ಎಂತಹಾ ಅನಾಹುತವನ್ನು ಮಾಡಿಕೊಳ್ಳುತ್ತಿದ್ದೇವೆಂದರೆ,ಕಾಲೇಜು ಓದುವ ಮಕ್ಕಳ ಬಹುಪಾಲು ತಂದೆತಾಯಂದಿರಿಗೆ ಈಗಾಗಲೇ ಬಿಸಿತಟ್ಟುತ್ತಿರುವುದು ಅರಿವಿಗೆ ಬರುತ್ತಿದೆ. ಯಾವುದೇ ಮನೆಗಳಿಗೆ ಹೋದರೂ ಟಿವಿ  ವೀಕ್ಷಿಸುತ್ತಿರುವ ಯುವಕರಿಗೆ ಮನೆಗೆ ಬಂದವರನ್ನು ಮಾತನಾಡಿಸ ಬೇಕೆನಿಸುವುದಿಲ್ಲ. ಎಷ್ಟೇ ಮಹತ್ವದ ಮಾತನಾಡುವುದುದ್ದರೂ ಟಿ.ವಿ ಯ ಗಲಾಟೆಯ ನಡುವೆಯೇ ಒಲ್ಲದ ಮನಸ್ಸಿನಲ್ಲಿ ಮಾತನಾಡಿಕೊಳ್ಳುವ ಕೆಟ್ಟ ಸ್ಥಿತಿ. ಹಬ್ಬಹರಿದಿನಗಳಲ್ಲಂತೂ  ಇನ್ನೂ ಕಷ್ಟ. ಟಿವಿ ಆರ್ಬಟದಲ್ಲಿ ಪೂಜೆ ಪುನಸ್ಕಾರ ಎಲ್ಲವೂ ಕಷ್ಟವೇ. ಇನ್ನು ನಮ್ಮ ಯುವಕರ ಉಡುಪು, ಆಹಾರ-ವಿಹಾರ, ಮಾತುಕತೆ,ಅವರ ಹವ್ಯಾಸ, ಯಾವುದರಲ್ಲೂ ಭಾರತೀಯತೆಯ ಸೋಂಕೂ ಇರುವಂತಿಲ್ಲ. ಯಾರೋ ಯಾವುದೋ ದೇಶದಲ್ಲಿ ಯಾವುದೋ ಕಾರಣಕ್ಕೆ ಅರೆಬರೆ ಬಟ್ಟೆ ಧರಿಸಿದರೆ ಅದು ನಮ್ಮ ಯುವತಿಯರಿಗೆ ಮಾದರಿ ಯಾಗುತ್ತೆ. ಯಾವುದೋ ದೇಶದಲ್ಲಿ ಗಂಡಸರು ಚಡ್ಡಿ ಹಾಕಿದರೆ, ನಮ್ಮ ದೇಶದಲ್ಲಿ ಅದೂ ಫ್ಯಾಶನ್ ಆಗಿಬಿಡುತ್ತೆ. ಅಲ್ರೀ , ನಮ್ಮ ದೇಶದ ಉಡುಗೆ-ತೊಡಿಗೆ, ಆಹಾರ-ವಿಹಾರ, ಬದುಕುವ ಪದ್ದತಿ, ಯೋಗ, ಸಂಗೀತಾ,ಧ್ಯಾನ, ಅಧ್ಯಾತ್ಮ  ಯಾವುದಾದರೂ ದೇಶದಲ್ಲಿ ಸಿಗಲು ಸಾಧ್ಯವೇನ್ರಿ?ನಮ್ಮ ಜೀವನ ಪದ್ದತಿ ಇದೆಯಲ್ಲಾ! ಅದು ನಮ್ಮ ಋಷಿಮುನಿಗಳ ನೂರಾರು ವರ್ಷಗಳ ತಪಸ್ಸಿನ ಫಲವೆಂಬುದು ನಮಗೆ ತಿಳಿದಿರಬೇಡವೇ? ನಮ್ಮ ವೇದ ಉಪನಿಷತ್ತುಗಳು, ರಾಮಯಣ, ಮಹಾಭಾರತ,    ಭಗವದ್ಗೀತೆಗಳ ಅಲ್ಪಸ್ವಲ್ಪ ಪರಿಚಯ ನಮಗಿದ್ದರೂ ನಮ್ಮ ಬಾಳು ಹಸನಾಗುವುದರಲ್ಲಿ ಎರಡುಮಾತಿಲ್ಲ ವೆಂಬ ವಿಚಾರ ನಮಗೆ ಗೊತ್ತೆ?

          ಇಂತಹ ಅದ್ಭುತ ಸಂಗತಿಗಳು ನಮ್ಮಿಂದ ದೂರವಾಗುತ್ತಿವೆಯಲ್ಲಾ! ಆ ಬಗ್ಗೆ ನಮಗೆ ಕಾಳಜಿ ಇದೆಯೇ?

ಇವತ್ತು  ವಯಸ್ಸಾದ ಅಪ್ಪ ಅಮ್ಮನನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿರುವ ನಮಗೆ ಮಾನವೀಯ ಮೌಲ್ಯಗಳು ಮರೆತು ಹೋಯ್ತೆ?
ಇನ್ನು ಬಹುಪಾಲು ನಮ್ಮ ಬೆಳೆದ ಹೆಣ್ಣುಮಕ್ಕಳು ಮದುವೆಯಾಗಿ ಸುಖವಾಗಿ ಗಂಡನ ಮನೆ ಸೇರುವ ವರೆಗೂ ಅವರ ಸುರಕ್ಷೆ ವಿಚಾರವು ನಮ್ಮ ನಿದ್ದೆ ಗೆಡಿಸಿರುವುದು ಸುಳ್ಳೆ? ಇಂತಹ ಭಯಾನಕ ಸ್ಥಿತಿಯಿಂದ ನಮ್ಮ ಮುಂದಿನ ಪೀಳಿಗೆಯನ್ನು ಪಾರುಮಾಡುವ ಪರಿ ಏನು?
ನಿಮ್ಮ ಕಾಲೇಜು ಓದುವ ಮಕ್ಕಳನ್ನು ನೀವು ಸರಿಯಾಗಿ ಗಮನಿಸಿದ್ದೀರಾ? ನಿಮಗೆ ಅಷ್ಟು ಪುರಸೊತ್ತು ಇದೆಯೇ?ನಿಮ್ಮೊಡನೆ ಮುಕ್ತವಾಗಿ ಅವರು ಮಾತನಾಡುತ್ತಾರೆಯೇ? ಹೌದಾದರೆ ನೀವು ಅದೃಷ್ಠವಂತರು ಬಿಡಿ. ಆದರೆ ಅನೇಕ ಮನೆಗಳಲ್ಲಿ ನಾನು ಗಮನಿಸಿರುವಂತೆ ಮಕ್ಕಳಿಗೆ ಅವರು ಕೇಳಿದಾಗಲೆಲ್ಲಾ ಹಣಕೊಟ್ಟುಬಿಟ್ಟರೆ ತಂದೆತಾಯಿಯರ ಜವಾಬ್ದಾರಿ ಮುಗಿದುಬಿಡುತ್ತೆ. ಮಕ್ಕಳಿಗೆ ಎಲ್ಲಾ ಸೌಕರ್ಯಗಳನ್ನೂ ನಾನು ಪೂರೈಸಿರುವೆ. ಇನ್ನು ಅವರ ಜವಾಬ್ದಾರಿ! ಎನ್ನುವ ತಂದೆತಾಯಿಯರನ್ನು ನಾನು ಕಂಡಿರುವೆ.ಆದರೆ ಪರೀಕ್ಷೆಮುಗಿದು ಅಂಕಗಳು ಸ್ವಲ್ಪ ಕಮ್ಮಿ ಬಂದು ಮಕ್ಕಳು ಪೆಚ್ಚಾದಾಗ ಅಪ್ಪ ಅಮ್ಮ ನಿಗೆ ಅವರ ಬಗ್ಗೆ ಸಿಟ್ಟು ಬರುತ್ತೆ.

ಈಗ ಹೇಳಿ ಎಷ್ಟು ಜನ ಅಪ್ಪ ಅಮ್ಮಂದಿರಿಗೆ ತಮ್ಮ  ಮಕ್ಕಳೊಡನೆ ಪ್ರತಿದಿನ ಕನಿಷ್ಟ ಒಂದುಗಂಟೆ ಮುಕ್ತವಾಗಿ ಮಾತನಾಡುವ ಸ್ವಭಾವವಿದೆ? ಮಕ್ಕಳೊಡನೆ ಹರಟೆ ಹೊಡೆಯುವುದೆಂದರೇನು? ಅವರ ಸ್ಟಡೀಸ್ ಗೆ  ತೊಂದರೆ ಆಗುತ್ತದೆಂಬ ಒಗ್ಗರಣೆ ಬೇರೆ? 
ಈ ಬಗ್ಗೆ ಸ್ವಲ್ಪ ಚಿಂತನ ಮಂಥನ ನಡೆಸಿದರೆ ನಮ್ಮ  ನಿಮ್ಮ ಮಕ್ಕಳ ಭವಿಷ್ಯ ಜೀವನವಾದರೂ ಉತ್ತಮವಾದೀತು. ಏನಂತೀರಾ?  

 

 

 

 

 

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet