ಮತ್ತಷ್ಟು ಗಾದೆಗಳು - ೫
ಬರಹ
೧. ದರಗು ತಿನ್ನೋರ ಹತ್ತಿರ ಹಪ್ಪಳ ಕೇಳಿದಂತೆ.
೨. ಸಂತೆ ನೆರೆಯುವ ಮುಂಚೆ ಗಂಟುಕಳ್ಳರು ನೆರೆದರು.
೩. ಹತ್ತಿ ತೂಗುವಲ್ಲಿ ನೊಣಕ್ಕೆ ಉಪವಾಸ.
೪. ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂದ್ಳು.
೫. ಹಾಲು ಕೊಳ್ಳೋಕ್ಕೆ ಬಂದವರಿಗೆ ಎಮ್ಮೆ ಕ್ರಯ ಯಾಕೆ?
೬.ಲಂಡ ದೇವರಿಗೆ ಬಂಡ ಪತ್ರೆ
೭. ಸುಮ್ಮನೆ ತಿನ್ನು ಬಾ ಮಗನೆ ಅಂದರೆ ಓಣಿ ಭಕ್ಕೆ ಹಣ್ಣಾ ಎಂದನಂತೆ.
೮. ಅನಾಚಾರಿ ಗುರುವಿಗೆ ವ್ರತಗೇಡಿ ಶಿಷ್ಯ.
೯.ಎಲೆ ತೆಗೆಯೋ ಗುಂಡ ಅಂದರೆ ಉಂಡೋರು ಎಷ್ಟು ಜನ ಅಂದನಂತೆ.
೧೦.ಹನುಮಪ್ಪ ಹಗ್ಗ ತಿನ್ನುತಿರುವಾಗ ಪೂಜಾರಿ ಶ್ಯಾವಿಗೆ ಬೇಡಿದ.