ಮತ್ತೆ ಮತ್ತೆ ಕಾಡಿದವಳು
ಕವನ
ನಿನ್ನೆ ಸಂಜೆಯ ಚಳಿಯಲ್ಲಿ ಆಕೆಯ ನೆನಪು ಕಾಡಿದ್ದು ಹೀಗೆ........
ನಸುಗತ್ತಲಾ ಈ ಸಂಜೆಯಲ್ಲಿ
ಮನಸಿಗೂ ಇಂದೇಕೋ ಚಳಿ,
ಇರಬಾರದಿತ್ತೇ ನೀನೀಗ
ಇಲ್ಲಿ, ನನ್ನ ಬಳಿ !!
ಕೆಂಬಣ್ಣ ಬಾನಿನಲಿ
ಕಾಣುವುದದೋ ನಿನ್ನ ನೋಟ.
ನೀನೆರೆದು ಹೋದ ಪ್ರೆಮಜಲದಲ್ಲೇ
ಬೆಳೆದು ನಿಂತಿದೆ ನೋಡು ಹೃದಯ ತೋಟ !!
ಬೆಳ್ಳಿ ಚಂದ್ರಮ ಈಗ
ಅಡಗಿ ಕುಳಿತಿಹ ನೋಡು ನಿನ್ನ ನೋಡಿ,
ಶಶಿಗೂ ಮತ್ತೆರಿಸಿರಬಹುದೇ
ನಿನ್ನ ನಗುಮುಖದ ಮೋಡಿ ??
ಕೆಂದಾವರೆಯಂತೆ ಸದಾ
ಅರಳಿರಲು ನಿನ್ನ ಮುಖವು,
ಮತ್ತೆ ಇನ್ನೇನಿದೆ ನನಗೆ
ಬೇರೆ ಸುಖವು ??
ಚಿತ್ರ್